: ನಗರದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾದ ತಿಪಟೂರು ಟೌನ್ ಗೃಹ ನಿರ್ಮಾಣ ಸಹಕಾರ ಸಂಘದ 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ನಗರದ ರಾಮ ಮಂದಿರ ದೇವಸ್ಥಾನದ ಆವರಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ ಬಿ ಕೆರಾಮಯ್ಯ ನೆರವೇರಿಸಿ ಮಾತನಾಡಿದ ಅವರು ತಿಪಟೂರು ಟೌನ್ ಗೃಹ ನಿರ್ಮಾಣ ಸಹಕಾರ ಸಂಘವು ಸುಮಾರು 75 ವರ್ಷಗಳಿಂದ ನಿರಂತರವಾಗಿ ತಿಪಟೂರು ನಗರದಲ್ಲಿ ಕಡುಬಡವರ ದೀನದಲಿತರ ಮನೆ ನಿರ್ಮಾಣಕ್ಕಾಗಿ ಸೈಟುಗಳನ್ನು ಕೊಳ್ಳಲು ಹಾಗೂ ವಿವಿಧ ರೀತಿಯ ಆರ್ಥಿಕ ತೊಂದರೆಗಳಿಗೆ ಹಣಕಾಸು ನೆರವನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಮುಂದೆಯೂ ಇಂತಹ ಜನಪರ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಮುಂದುವರಿಸಲಾಗುವುದು.
ಇಂತಹ ನಮ್ಮ ಸಹಕಾರ ಸಂಘವು ಈ ಹಿಂದೆ ಕರ್ನಾಟಕ ರಾಜ್ಯ ಗೃಹ ಮಂಡಳಿಯ ವತಿಯಿಂದ ಅನೇಕ ಬಾರಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದ್ದು ಮುಂದೆಯೂ ನಮ್ಮ ಸಹಕಾರ ಸಂಘವು ರಾಜ್ಯದಲ್ಲಿ ಇನ್ನು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂಬುದು ಸಂಘದ ಆಶಯವಾಗಿದೆ. ಈ ನಮ್ಮ ಸಂಘವು ಬೆಳೆಯಲು ಈ ಹಿಂದೆ ಅನೇಕ ಜನ ಮಹನೀಯರು ಸಂಘಕ್ಕೆ ನೀಡಿದ ಕೊಡುಗೆಯನ್ನು ಇದೆ ವೇಳೆ ಅವರು ಸ್ಮರಿಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರರಾದ ದಿವಂಗತ ಹನುಮಂತಪ್ಪನವರು ಹಾಗೂ ಮಾಜಿ ಅಧ್ಯಕ್ಷರಾದ ಶಿವನಂಜಪ್ಪನವರ ಕೊಡುಗೆ ಅಪಾರ ಎಂದ ಅವರು. ಈಗಿನ ಸಂಘದ ಎಲ್ಲಾ ನಿರ್ದೇಶಕ ಮಂಡಳಿ ಹಾಗೂ ಎಲ್ಲಾ ಸರ್ವ ಸದಸ್ಯರ ಕೊಡುಗೆ ಅಪಾರ ಎಂದು ಇದೇ ವೇಳೆ ಅವರು ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಶ್ರೀಮತಿ ವಾಣಿ ಮಾತನಾಡಿ ಸಂಘವು ಮುಂದೆಯೂ ಇಂತಹ ಹಲವಾರು ಸೂರು ಇಲ್ಲದ ಬಡ ಜನರಿಗೆ ಸೂರು ನೀಡುವ ಧೇಯ ವಾಕ್ಯದೊಂದಿಗೆ ಮುಂದುವರೆಯಲಿದೆ ಎಂದು ಇದೆ ವೇಳೆ ಆಶಯ ವ್ಯಕ್ತಪಡಿಸಿದರು. ಇಂತಹ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂಘದಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ದಯಾನಂದ್,ಪ್ರಕಾಶ್, ಶರಣಪ್ಪ,ಮಲ್ಲೇಶ್, ಶ್ರೀಮತಿ ಸುಮಿತ್ರಮ್ಮ,ಶಿವ ಸ್ವಾಮಿ, ಶಂಕರ್ ಮೂರ್ತಿ, ಚಂದ್ರಣ್ಣ, ಮಾಜಿ ಕಾರ್ಯದರ್ಶಿ ನಾರಾಯಣಸ್ವಾಮಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಎಸ್ ಸುಕನ್ಯ ಹಾಗೂ ಸಿಬ್ಬಂದಿ ವರ್ಗ ಸಂಘದ ಸರ್ವ ಸದಸ್ಯರು ಮೊದಲಾದವರು ಹಾಜರಿದ್ದರು
ವರದಿ:ಮಂಜುನಾಥ್ ಹಾಲ್ಕುರಿಕೆ







