: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೂತನವಾಗಿ ಆರಂಭಿಸಿರುವ ಡಿ.ಜಿ.ಪೇ ಕಾರ್ಯಕ್ರಮಕ್ಕೆ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು.

ಆಯುಧಪೂಜೆ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಛೇರಿಯಲ್ಲಿಆಯೋಜಿಸಿದ ಲಕ್ಷ್ಮಿಪೂಜೆ ಹಾಗೂ ವಿಶೇಷ ಗಣಹೋಮವ.ಕಾರ್ಯಕ್ರಮಕ್ಕೆ ಭಾಗವಹಿಸಿ ಪೂಜೆಸಲ್ಲಿಸಿದ ಶಾಸಕರಾದ ಕೆ.ಷಡಕ್ಷರಿಯವರು ಕಛೇರಿಯಲ್ಲಿ ಧಾರ್ಮಿಕ ವಿಧಿವಿದಾನಗಳನುಸಾರ ನೆರವೇರಿಸುತ್ತಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಡಿಜಿಪೇ ತಾಲ್ಲೂಕಿನ ನಾಗರಿಕರಿಗೂ ಹಾಗೂ ಜನಸಾಮಾನ್ಯರಿಗೂ ಉಪಯೋಗವಾಗುತ್ತದೆ,ಜನಸಾಮಾನ್ಯರು ಯೋಜನೆ ಸದುಪಯೋಗ ಮಾಡಿಕೊಳ್ಳಬೇಕು, ಈ ಒಂದು ಡಿಜಿ ಪೇ ವ್ಯವಸ್ಥೆಯು ಹಳ್ಳಿಯ ಜನಸಾಮಾನ್ಯರಿಗೆ,ಮಹಿಳೆಯರಿಗೆ ಹಾಗೂ ರೈತಭಾಂದವರಿಗೆ ಬಹಳ ಉಪಯುಕ್ತವಾಗಿದ್ದು,ಇನ್ನು ಮುಂದೆ ತಿಪಟೂರಿನ ಎಲ್ಲಾ ಜನರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಹಕ ಸೇವಾ ಕೇಂದ್ರದಲ್ಲಿ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ತಮ್ಮ ಯಾವುದೇ ಬ್ಯಾಂಕ್ ಖಾತೆಯಲ್ಲಿರುವ ಮೊತ್ತ ರೂ.500 ರಿಂದ ರೂ 10 ಸಾವಿರದವರೆಗೆ ಆಧಾರ್ ಕಾರ್ಡ್ ಹಾಗೂ ಬೆರಳಚ್ಚು ಕೊಡುವುದರ ಮುಖೇನ ಹಣದ ನಗದೀಕರಣ ಮಾಡಿಕೊಳ್ಳಬಹುದಾಗಿದೆ.ಇಷ್ಟೆ ಅಲ್ಲದೆ ಎಟಿಎಮ್ ಹೊಂದಿರುವ ವ್ಯಕ್ತಿಯೋರ್ವ ದಿನವೊಂದಕ್ಕೆ ರೂ.500 ರಿಂದ ರೂ 25 ಸಾವಿರದವರೆಗೆ ಹಣವನ್ನು ಪಡೆಯುವ ಸೌಲಭ್ಯವಿದ್ದು ಇದರ ಪ್ರಯೋಜನವನ್ನು ತಾಲ್ಲೂಕಿನ ಎಲ್ಲಾ ಜನಸಾಮಾನ್ಯರು ಸದ್ಬಳಿಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ತಿಪಟೂರು ಶ್ರೀ ಗುರುಕುಲಾನಂದಾಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಇಮ್ಮಡಿಕರಿಬಸವದೇಶೀಕೇಂದ್ರ ಮಹಾಸ್ವಾಮಿಜಿಗಳು ಮಾತನಾಡಿ ಈ ಡಿ ಜಿ ಪೇ ಕಾರ್ಯಕ್ರಮವು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು ಇಂತಹ ಅತ್ಯದ್ಭುತ ಸೇವೆಯನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ರಾಜ್ಯದ ಜನತೆಗೆ ಉಚಿತವಾಗಿ ಒದಗಿಸಿಕೊಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದ್ದು ಇದರ ಸಂಪೂರ್ಣ ಉಪಯೋಗವನ್ನು ರಾಜ್ಯದ ಎಲ್ಲಾ ಜನತೆ ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು.ಬಳಿಕ ಮಾತನಾಡಿದ ಗ್ರಾಮಭಿವೃದ್ಧಿ ಯೋಜನೆಯ ತುಮಕೂರು-1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ತಿಪಟೂರು ತಾಲ್ಲೂಕಿನಲ್ಲಿ ಒಟ್ಡು 56 ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಗ್ರಾಹಕ ಸೇವಾ ಕೇಂದ್ರಗಳಿದ್ದು ಈ ಒಂದು ಹಣ ನಗದೀಕರಣದ ಸೌಲಭ್ಯವನ್ನು ತಾಲ್ಲೂಕಿನ ಎಲ್ಲ ಜನತೆ ಉಪಯೋಗಿಸಿಕೊಳ್ಳುವಂತೆ ವಿನಂತಿಸಿಕೊಂಡರು ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್,ತಾಲ್ಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್,ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಉದಯ್.ಕೆ ಸುರೇಶ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಸಿಬ್ಭಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ











