Spread the love

ತಿಪಟೂರು:ವಿಶೇಷ ತಳಿ ಆಡು ಕುರಿಗಳನ್ನ ಸಾಕಿ ಸಾಧನೆ ಮಾಡುವ ಮೂಲಕ ರೈತರ ಮಕ್ಕಳು ಯಾವ ತಂತ್ರಜ್ಞರಿಗೂ ಕಡಿಮೆ ಇಲ್ಲ ಎಂಬುದನ್ನ ಸಾಧಿಸಿ ತೋರಿಸಿದ್ದಾನೆ.
ತಿಪಟೂರು ತಾಲ್ಲೋಕಿನ ನೊಣವಿನಕೆರೆ ಹೋಬಳಿ ಬಳ್ಳೆಕೆರೆ ಹೊಸೂರು ಗ್ರಾಮದ ವಾಸಿ ಕುಮಾರಸ್ವಾಮಿ.ಹೆಚ್.ಹೆಚ್. ಬಿನ್ ಹುಚ್ಚಪ್ಪ ವಿಶೇಷ ಸಾಧನೆ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾದ ರೈತ.
ಹಲವು ವರ್ಷಗಳಹಿಂದೆ ಕೋಳಿ ಸಾಕಾಣಿಕೆ ಹಾಗೂ ಕುರಿಸಾಕಾಣಿಕೆಯಲ್ಲಿ ಹಲವಾರು ಏಳುಬೀಳು ಕಂಡಿದ್ದ ರೈತನ ಕೈ ಹಿಡಿದ್ದಿದ್ದೆ ವಿದೇಶಿ ಮೂಲದ ವಿಶೇಷ ಆಫ್ರಿನ್ ಡಾರ್ಪರ್ ತಳಿ.


4ವರ್ಷಗಳ ಹಿಂದೆ ಹೊಸೂರು ಗ್ರಾಮದಲ್ಲಿ ನಂದಿ ಮೇಕೆ ಹಾಗೂ ಕುರಿ ಫಾರಂ ಆರಂಬಿಸಿದ ರೈತ ಕುಮಾರ್ ಸ್ವಾಮಿ ಕೋಲಾರದಿಂದ ಆಫ್ರಿಕನ್ ಡಾರ್ಪರ್ ತಳಿಯ ಕುರಿಯೊಂದನ್ನ ಖರೀದಿ ಮಾಡಿತಂದ್ದಿದ್ದಾರೆ.ರೋಗ ರುಜಿನಗಳಿಗೆ ಪ್ರತಿರೋಧಕ ಗುಣಹೊಂದಿರುವ ಹಾಗೂ ನಮ್ಮ ಬಯಲು ಸೀಮೆ ವಾತವರಣಕ್ಕೆ ಹೆಚ್ಚಾಗಿ ಒಗ್ಗಿಕೊಳ್ಳುವ ಈ ತಳಿಯನ್ನ ತಳಿಸಂಕರಣಗೊಳಿಸಿ ಮಿಶ್ರಣ ತಳಿ ಮಾಡಿವ ಮೂಲಕ ವಿಶೇಷ ತಳಿಯಾಗಿ ಬೆಳೆಸಿದ್ದಾರೆ. ಈ ತಳಿ ನಮ್ಮ ಬಯಲು ಸೀಮೆ ವಾತವರಣಕ್ಕೆ ಒಗ್ಗಿಕೊಳ್ಳುವ ಜೊತೆಗೆ ಹೆಚ್ಚಾಗಿ ರೋಗ ಪ್ರತಿರೋಧಕ ಗುಣ ಹೊಂದಿದೆ. ಜೊತೆಗೆ ಹೆಚ್ಚಿನ ಮಾಂಸ ಉತ್ಪಾದನೆಮಾಡುತ್ತದೆ.ಸುಮಾರು 120 ಕೆ.ಜಿ ಒಂದೊಂದು ಕುರಿ ಬೆಳವಣಿಗೆ ಹೊಂದಿವೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ ರೈತ ಕುಮಾರಸ್ವಾಮಿ, ವಿಶೇಷ ತಳಿಯ ಕುರಿ ಮಾಂಸಕ್ಕೆ ಗ್ರಾಹಕರಿಂದಲ್ಲೂ ಹೆಚ್ಚಿನ ಬೇಡಿಕೆ ಹೊಂದಿದೆ‌.ತಳಿ ಮಿಶ್ರಣಗೊಂಡ ಕುರಿಯೊಂದು ಜನ್ಮ ನೀಡಿದ 6ತಿಂಗಳ ಕುರಿ ಮರಿ ಸುಮಾರು 65ಕೆ.ಜಿ ತೂಕಹೊಂದಿದ್ದು. ಆರೋಗ್ಯವಾಗಿ ದಷ್ಟ ಪುಷ್ಠವಾಗಿ ಬೆಳೆಯುತ್ತಿದೆ ಈ ಮರಿಯ ವಿಶೇಷ ಎಂದರೆ ಎರಡು ಕೋಡುಗಳ ನಡುವೆ ಅರ್ಧಚಂದ್ರಾಕೃತಿಯ ಆಕಾರದಲ್ಲಿ ಸುಳಿ ಬೆಳೆದಿದ್ದು.ನಮ್ಮ ನಂದಿ ಮೇಕೆ ಕುರಿ ಫಾರಂಗೆ ಭೇಟಿ ನೀಡಿದ ಸಾರ್ವಜನಿಕರು ಈ ಮರಿ ಅದೃಷ್ಠದ ಸಂಕೇತವಾಗಿದೆ‌,ಎಂದು ನೋಡಲುಬರುತ್ತಿದ್ದಾರೆ. ವಿಶೇಷವಾಗಿ ಮುಸಲ್ಮಾನ್ ಬಾಂಧವರು ಶುಭಸಂಕೇತವಾಗಿ ಬಾವಿಸುತ್ತಿದ್ದಾರೆ ಎಂದು ತಿಳಿಸಿದರು.


ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ನಮ್ಮ ನಂದಿ ಮೇಕೆ ಮತ್ತು ಕುರಿ ಫಾರಂ ನಲ್ಲಿ ತಳಿ ಮಿಶ್ರಣಗೊಂಡ150ಕ್ಕೂ ಹೆಚ್ಚು ಮೇಕೆ ಮರಿಗಳಿವೆ.ಬೇರೆ ಬೇರೆ ತಳಿ ಕುರಿ ಹಾಗೂ ಮೇಕೆ ಮರಿ ಹಾಗೂ ಮಾಂಸಕ್ಕಾಗಿ ಸಾಕಾಣಿಕೆ ಮಾಡಿರುವ ಮೇಕೆ ಹಾಗೂ ಕುರಿಗಳಿವೆ.ನಾವು ತಳಿ ಅಭಿವೃದ್ದಿಗೊಳಿಸುವ ಜೊತೆಗೆ ಮಾರಾಟವನ್ನ ಮಾಡುತ್ತಿದ್ದೇವೆ. ನಮ್ಮ ಫಾರಂ ನಲ್ಲಿ ಇರುವ ಕುರಿಮರಿಯ ಕೋಡುಗಳ ಮಧ್ಯೆ ಅರ್ಧಚಂದ್ರಾಕೃತಿಯ ಸುಳಿಹೊಂದಿದೆ.ಇದು ಶುಭಸೂಚಕ ಎಂದು ಜನಭಾವಿಸಿದ್ದಾರೆ.ಈ ಮರಿ ಹುಟ್ಟಿದ್ದಾಗಿನಿಂದ ನಮಗೆ ಲಾಂಭಾಂಶವೂ ಜಾಸ್ತಿಯಾಗಿದ್ದು ಅಭಿವೃದ್ದಿಯನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು.ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ತೋಂಟಾರಾಧ್ಯ. ಸೈಫುಲ್ಲ.ಮಾಜಿ ನಗರಸಭಾ ಸದಸ್ಯ ನದೀಮ್.ಎಂ ನಿಜಗುಣ .ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!