Spread the love

ತಿಪಟೂರು:ನಗರದ ಕೆಲ ಪ್ರತಿಷ್ಠಿತ ಶಾಲೆಗಳು ಅನಾಧೀಕೃತ ಶಾಲಾ ಶುಲ್ಕ ವಸೂಲಿ ಮಾಡುತ್ತಿದ್ದು,ಸರ್ಕಾರದ ನಿಯಮಗಳಿಗೆ ವಿರುದ್ದವಾಗಿ ಕಾರ್ಯನಿರ್ವಹಿಸುತ್ತಿವೆ.ಶಿಕ್ಷಣ ಇಲಾಖೆ ಅನಾಧೀಕೃತ ಶುಲ್ಕವಿಧಿಸುತ್ತಿರುವ ಶಾಲೆಗಳ ಮೇಲೆ ಕ್ರಮಕೈಗೊಳ್ಳ ಬೇಕು ಎಂದು ಸಧೃಡ ಫೌಂಡೇಷನ್ ಹಾಗೂ ಖಾಸಗೀ ಶಾಲೆಗಳ ಮಕ್ಕಳ ಪೋಷಕರ ಒಕ್ಕೂಟದಿಂದ ಒತ್ತಾಯಿಸಿದರು.


ನಗರದ ಕಲ್ಪತರು ಗ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಸಧೃಡಫೌಂಡೇಷನ್ ಅಧ್ಯಕ್ಷ ಬೋಜರಾಜು ಮಾತಮಾಡಿ ತಿಪಟೂರು ನಗರದ ಇಸಿಎಸ್ಸಿ .ಮತ್ತು ಸಿಬಿಎಸ್ಸಿ ಮಾನ್ಯತೆ ಹೊಂದಿರುವ ಕಲ್ಪತರು ಸೆಂಟರ್ ಸ್ಕೂಲ್ .ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್.ದೀಕ್ಷಾ ಹೇರಿಟೇಜ್ ಸ್ಕೂಲ್ ಗಳು,ಸರ್ಕಾರದ ನಿಯಮದಂತೆ ಶುಲ್ಕಪಡೆಯುತ್ತಿಲ್ಲ. ಅನಾಧೀಕೃತವಾಗಿ ಶುಲ್ಕಪಡೆಯುತ್ತಿದ್ದಾರೆ.ಕಲ್ಪತರು ಸೆಂಟರ್ ಶಾಲೆಯಲ್ಲಿ ಶಾಲಾ ಶುಲ್ಕ 27ಸಾವಿರ ರೂಪಾಯಿ ಜೊತೆ ಕಲ್ಪತರು ವಿದ್ಯಾಸಂಸ್ಥೆ ಹೆಸರಿನಲ್ಲಿ 20ಸಾವಿರ ರಸೀದಿ ಹಾಕಲಾಗುತ್ತಿದೆ.ಖಾಸಗೀ ಶಾಲೆಗಳು ಶುಲ್ಕನಿಗದಿಗೆ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಹಾಗೂ ಶಾಲಾ ಮುಖ್ಯಸ್ಥರ ಸಮಿತಿ ರಚಿಸಿಬೇಕು.ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದನೆ ಪಡೆದು,ಶಾಲಾ ನಾಮಫಲಕದಲ್ಲಿ ಪ್ರಕಟಿಸಬೇಕು ಎನ್ನುವ ನಿಯಮವಿದ್ದರೂ,ಯಾವುದೇ ಶಾಲೆಗಳು ಪಾಲಿಸುತ್ತಿಲ್ಲ,ಮಕ್ಕಳ ಪೋಷಕರಿಗೆ ಹೊರೆಯಾಗದಂತೆ ಕ್ರಮವಹಿಸ ಬೇಕು ಎಂದು ಒತ್ತಾಯಿಸಿದರು.

ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಮಲ್ಲೇನಹಳ್ಳಿ ಕಾಂತರಾಜು ಶಾಲೆಗಳು ಪೋಷಕರಿಗೆ ಹೊರೆಯಾಗದಂತೆ ಮೂರು ಕಂತ್ತುಗಳಲ್ಲಿ ಶುಲ್ಕ ಕಟ್ಟಿಸಿಕೊಳ್ಳ ಬೇಕು.ಶಿಕ್ಷಣ ಇಲಾಖೆ ನಿಯಮದಂತೆ ಶುಲ್ಕ ಪಡೆಯ ಬೇಕಯ.ಶುಲ್ಕವನ್ನ ಅಧೀಕೃತವಾಗಿ ನಾಮಫಲಕದಲ್ಲಿ ಪ್ರಕಟಿಸಬೇಕು.ಖಾಸಗೀ ಶಿಕ್ಷಣ ಸಂಸ್ಥೆಗಳು ಸರ್ಕಾರಿ ನಿಯಮ ಉಲ್ಲಂಗನೆ ಮಾಡುತ್ತಿರುವ ಬಗ್ಗೆ ಮಾನ್ಯ ಉಪವಿಭಾಗಾಧಿಕಾರಿಗಳು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ದೂರುನೀಡಲಾಗಿದೆ.ಸಕಾರಾತ್ಮಕ ಬಸವಣೆ ನೀಡಿದ್ದಾರೆ,ಸಮಸ್ಯೆ ಸರಿಪಡಿಸಿ ಪೋಷಕರಿಗೆ ಆಗುತ್ತಿರುವ ಸಮಸ್ಯೆ ಸರಿಪಡಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದರು.
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಬಿಳಿಗೆರೆ ಪಾಳ್ಯ ನಾಗೇಶ್.ಲಾಯರ್ ಮಲ್ಲಿಕಾರ್ಜುನ್.ದಯಾನಂದ್.ಲೋಕೇಶ್ ಪ್ರಮೋದ್ ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!