ತಿಪಟೂರು : ಪಾತ್ರೆಗಳನ್ನು ಸ್ವಚ್ಛ ಮಾಡಲು ರಾಸಾಯನಿಕ ಯುಕ್ತ ಸೋಪುಗಳನ್ನು ಬಳಸುವ ಬದಲು ಕೇವಲ ಹುಣಸೆ ಎಲೆಯ ಪುಡಿಯನ್ನು ಮಾಡಿಕೊಂಡು ಪಾತ್ರೆಗಳನ್ನು ತೊಳೆದರೆ ನಮ್ಮ ಹಾಗೂ ಸಸ್ಯಗಳ ಆರೋಗ್ಯದ ಜೊತೆಗೆ ಪಾತ್ರೆಗಳು ಸ್ವಚ್ಛವಾಗುತ್ತವೆ ಎಂದು ಸಹಜ ಕೃಷಿ ಹಾಗೂ ಪಾರಂಪರಿಕ ವೈದ್ಯ ಅಣ್ಣಪ್ಪನಳ್ಳಿ ಶ್ರೀ ಉಮೇಶ್, ತಿಳಿಸಿದರು
ತಾಲ್ಲೋಕಿನ ಮೂಗತಿಹಳ್ಳಿ ಗ್ರಾಮದ ಶ್ರೀ ಯೋಗಾನಂದಮೂರ್ತಿ ಅವರ ತೋಟದಲ್ಲಿ ಏರ್ಪಡಿಸಿದ್ದ ಸಹಜ ಕೃಷಿ ಕಾರ್ಯಗಾರದಲ್ಲಿ ಮಾತನಾಡಿದ ಅವರಏರು ಮಡಿಗಳನ್ನು ಮಾಡಿ ವರ್ಷದ 365 ದಿವಸಗಳಲ್ಲು, ವಿವಿಧ ಸೊಪ್ಪು ಹಾಗೂ ತರಕಾರಿ ಬೆಳೆಯಬಹುದೆಂದು ಪ್ರಾತ್ಯಕ್ಷಿತವಾಗಿ ತೋರಿಸಿಕೊಟ್ಟರು.

ಡಾ// ರಂಗನಾಥ ರವರು ಸಿದ್ದಿ ಸಾಧನೆಯಿಂದ ಪ್ರಕೃತಿಯಲ್ಲಿರುವ ಶಕ್ತಿಯನ್ನು ಬಳಸಿ ಸಿದ್ದ ಕೃಷಿಯ ಮೂಲಕ, ಹೆಚ್ಚಿನ ಖರ್ಚು ಇಲ್ಲದೆ , ಹೆಚ್ಚು ಇಳುವರಿ ಪಡೆಯಬಹುದೆಂದು ತಿಳಿಸಿದರು
ಈ ಕಾರ್ಯಗಾರದಲ್ಲಿ ಮುಕ್ತಿ ಹಳ್ಳಿ ಯೋಗಾನಂದ್, ಕವಿತಾ, ಲೀಲಾವತಿ, ಕರೀಕೆರೆ ರಮೇಶ್, ನೆಲ್ಲಿಕೆರೆ ಸುರೇಶ್, ಬೆಸಗಿ ಕುಮಾರಸ್ವಾಮಿ, ಗೋಪೇಗೌಡನ ಪಾಳ್ಯದ ಸದಾನಂದ, ಬೀರಸಂದ್ರ ಚಿದಾನಂದ ಮೂರ್ತಿ, ಸಿರಿಗಂಧ ಗುರು,ಸೇರಿದಂತೆ ರಾಮಚಂದ್ರಪುರ ,ಬೆಸಿಗೆ, ತಡಸೂರು, ನಾಗರಗಟ್ಟ, ಕನ್ನುಘಟ್ಟ ,ಗೋಪೇ ಗೌಡನಪಾಳ್ಯ, ಕರಡಾಳು, ಕರಿಕೆರೆ, ನೆಲ್ಲಿಕೆರೆ ಕೊಟ್ಟಿಗೆಹಳ್ಳಿ ನೊಣವಿನಕೆರೆ ಗ್ರಾಮದ ರೈತರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ









