Spread the love

ತಿಪಟೂರಿನ ಆರ್ಯವೈಶ್ಯ ಮಂಡಳಿ ವತಿಯಿಂದ ಶ್ರೀವಾಸವಿ ಜಯಂತಿ ಅಂಗವಾಗಿ ನಗರದ ದೊಡ್ಡಪೇಟೆ ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಿದವು,ಶ್ರೀ ವಾಸವಿ ಮಹಿಳಾ ಮಂಡಳಿ ಸದಸ್ಯರು ಶ್ರೀವಾಸವಿ ಅಮ್ಮನವರ ಕೀರ್ತನೆ ಹಾಗೂ ನೃತ್ಯಗಳ ಮೂಲಕ ನಗರದ ದೊಡ್ಡಪೇಟೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬೀದಿಯಲ್ಲಿ ಮೆರವಣಿಗೆ ನಡೆಸಿ ಪೂಜೆಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀವಾಸವಿ ಸ್ನೇಹವೃಂದ, ಎಸ್ .ವಿ .ಕೆ .ಪಿ ಗ್ರೂಪ್ ಮತ್ತು ವಾಸವಿ ಯುವತಿಯರ ಸಂಘ ದ ವತಿಯಿಂದ, ನಗರ ಸಂಕೀರ್ತನೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಆರ್ಯವೈಶ್ಯ ಮಂಡಳಿಯ, ಅಧ್ಯಕ್ಷರು ಬಾಗೆಪಲ್ಲಿ ನಟರಾಜ್, ಕಾರ್ಯದರ್ಶಿ ವಿಶ್ವ ಬಾಬುರವರು ವಾಸವಿ ಸ್ನೇಹವೃಂದದ ಅಧ್ಯಕ್ಷರು ಶೀತಲ್ ಪ್ರವೀಣ್ ಹಾಗೂ ಕಾರ್ಯಕಾರಿ ಸಮಿತಿಯವರು , ಹಾಗೂ ಶ್ರೀ ವಾಸವಿ ಯುವತಿಯರ ಸಂಘದ, ಅನುಷಾ ಕೃಷ್ಣ ಹಾಗೂ ನಾಗಶ್ರೀ ಭಾರತ್, ರಾಘವಿ ವಿಷ್ಣು ಹಾಗೂ ಎಸ್ ವಿ ಕೆ ಪಿ ಸಂಘದ.. ಅಧ್ಯಕ್ಷರು ಲಕ್ಷ್ಮಿ ಸತ್ಯನಾರಾಯಣ, ಹಾಗೂ ಲಕ್ಷ್ಮಿ ಮಂಜುನಾಥ್‍.ಲಕ್ಷ್ಮಿ ನಾಗೇಂದ್ರ, v ಬಾಲಾಜಿ ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!