ತಿಪಟೂರು:ಷಡಕ್ಷರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ರುದ್ರಮುನಿಸ್ವಾಮೀಜಿಗಳು ಹಾಗೂ ತಮ್ಮಡಿಹಳ್ಳಿ ವಿರಕ್ತ ಮಠದ ಪೀಠಾಧ್ಯಕ್ಷರಾದ ಶ್ರೀ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಮಹಾಸ್ವಾಮೀಜಿಗಳು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀಮಂಜುನಾಥಸ್ವಾಮಿ ದರ್ಶನ ಪಡೆದರು.ನಂತರ ಶ್ರೀಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಡೆಯವರನ್ನ ಭೇಟಿ ಮಾಡಿ.ಶ್ರೀಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ವಿರುದ್ದ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು ಧರ್ಮಾಧಿಕಾರಿಗಳಿಗೆ ಆತ್ಮಸ್ಥೈರ್ಯ ಹೇಳಿದರು.

ನಂತರ ಮಾತನಾಡಿದ ಶ್ರೀಶ್ರೀ ರುದ್ರಮುನಿ ಮಹಾಸ್ವಾಮೀಜಿಗಳು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಯವರ ಬಗ್ಗೆ ಅಪಪ್ರಚಾರ ಹಾಗೂ ಅವಹೇಳಕಾರಿಯಾಗಿ ಮಾತನಾಡುತ್ತಿರುವುದು ಖಂಡನೀಯವಾದ್ದು ತೀವ್ರ ನೋವುಂಟು ಮಾಡಿದೆ.ಸರಳ ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಧರ್ಮಪರವಾದ ಗುಣುಳ್ಳವರು ಇರವ ಮೇಲೆ ಷಡ್ಯಂತ್ರ ರೂಪಿಸಲಾಗಿದೆ.ಹಲವಾರು ದಶಕಗಳಿಂದ ಶಿಕ್ಷಣದಾಸೋಹ ಹಾಗೂ ನಿತ್ಯ ಅನ್ನದಾಸೋಹದ ಮೂಲಕ ಸಾವಿರಾರು ಜನರಿಗೆ ಅನ್ನಹಾಕಿದ್ದಾರೆ,ಹೆಗ್ಡೆಯವರು ಹಾಗೂ ಶ್ರೀಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಸರಿಯಲ್ಲ,ಸರ್ಕಾರ ಎಸ್.ಐ.ಟಿ ತನಿಖೆ ನಡೆಸುತ್ತಿರುವುದು,ಸ್ವಾಗತಾರ್ಹ ತನಿಖೆ ನ್ಯಾಯಸಮ್ಮತವಾಗಿ ನಡೆದು ಶ್ರೀ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳು ಆರೋಪರಹಿತವಾಗುತ್ತಾರೆ ಎನ್ನುವ ನಂಬಿಕೆ ಇದೆ,ಧರ್ಮದ ದಾರಿಯಲ್ಲಿ ನಡೆಯುವವರಿಗೆ ಧರ್ಮಕಾಪಾಡುತ್ತದೆ,ರಾಜ್ಯದಾದ್ಯಂತ ಶ್ರೀಕ್ಷೇತ್ರದ ಭಕ್ತರು ಹೆಗ್ಡೆ ಯವರೊಂದಿಗೆ ನೈತಿಕ ಬೆಂಬಲವಾಗಿದ್ದಾರೆ.ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯದ ಮಠಾಧೀಶರು,ಮಠಾಧೀಶರ ನಡೆ ಧರ್ಮಸ್ಥಳದ ಕಡೆ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡು ಶ್ರೀ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರಿಗೆ ನೈತಿಕ ಬೆಂಬಲ ನೀಡುವುದ್ದಾಗಿ ತಿಳಿಸಿದರು.
ಈ ವೇಳೆ ಉಪಸ್ಥಿತರಿದ ತಮ್ಮಡಿಹಳ್ಳಿ ವಿರಕ್ತಮಠದ ಪೀಠಾಧ್ಯಕ್ಷರಾದ ಡಾ//ಶ್ರೀಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಕೇಂದ್ರ ಮಹಾಸ್ವಾಮೀಜಿ ಮಾತನಾಡಿ ನೂರಾರು ವರ್ಷಗಳಿಂದ ಧರ್ಮದ ಮಾರ್ಗದಲ್ಲಿ ನಡೆದುಕೊಂಡು ಬಂದಿರುವ ಶ್ರೀಕ್ಷೇತ್ರ ಧರ್ಮದ ನೆಲೆಯಾಗಿಯೇ ಉಳಿಯಬೇಕು ಎನ್ನುವುದು ನಮ್ಮ ಅಭಿಲಾಷೆ,ಪೂಜ್ಯ ವೀರೇಂದ್ರ ಹೆಗ್ಡೆ ಯವರ ಮೇಲೆ ಬಂದಿರುವ ಅಪಾದನೆ,ಸೂರ್ಯನ ಮುಂದೆ ಮೋಡಕರಗಿದ ಹಾಗೆ,ಸತ್ಯದ ಮುಂದೆ ಸುಳ್ಳು ಷಡ್ಯಂತರ ದೂರವಾಗುತ್ತದೆ,ದಶಕಗಳಿಂದ ಪೂಜ್ಯರು ನಡೆಸಿಕೊಂಡುಬಂದಿರುವ ನಾಡಿನ ಸಾಂಸ್ಕೃತಿಕ ಪರಂಪರೆಗಳು,ದಾರ್ಮಿಕ ಕಾರ್ಯಗಳು ಮುಂದುವರೆಯಲ್ಲಿ ಪೂಜ್ಯರೊಂದಿಗೆ ನಾವೆಲ್ಲರು ಇದೇವೆ ಎಂದು ತಿಳಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ







