ತಿಪಟೂರು : ತಾಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಕರೀಕೆರೆ ಗ್ರಾಮದಲ್ಲಿ ಚಿರತೆಗಳಹಾವಳಿ ಹೆಚ್ಚಾಗಿದ್ದು ಗ್ರಾಮದಲ್ಲಿ ಆತಂಕ ಮನೆ ಮಾಡಿದೆ,ಕಳೆದ ನಾಲ್ಕೈದು ದಿನಗಳಿಂದ ಕರೀಕೆರೆ,ಬೈರಾಪುರ, ಸಿದ್ದಾಪುರ ಗ್ರಾಮಗಳಲ್ಲಿ ಜೋಡಿ ಚಿರತೆಗಳು ಹೋಡಾಡುತ್ತಿದ್ದು ಗ್ರಾಮಸ್ಥರು ರಾತ್ರಿವೇಳೆ ಮನೆಯಿಂದ ಹೊರಬರಲು ಹೆದರುವಂತ್ತಾಗಿದೆ, ಕೆರೆ ಅಂಗಳ ಹಾಗೂ ತೋಟದ ಸಾಲುಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಸಂಚಾರ ಮಾಡಲು ಭಯಭೀತರಾಗಿದ್ದಾರೆ.

.
ಈಗಾಗಲೇ ಕೆರೆ ಅಂಗಳದಲ್ಲಿ ಮೇವು ಮೇಯುತ್ತಿದ್ದ ಕುರಿಯನ್ನು ಹೊತ್ತೋಯ್ದು ಅದನ್ನು ಕಂಡ ಕುರಿಗಾಹಿ ಗಾಬರಿಯಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಭೈರಾಪುರ ಗ್ರಾಮದೊಳಗೆ ಸಂಚಾರ ಮಾಡಿರುವ ಚಿರತೆಯ ಹೆಜ್ಜೆಯ ಗುರುತುಗಳು ಕಂಡುಬಂದಿದ್ದು ಬೀದಿ ನಾಯಿಯನ್ನು ಎಳೆದೊಯ್ಯಿವೆ ಬೆಳಗಿನ ವೇಳೆಯಲ್ಲಿ ಮಾರುಕಟ್ಟೆಗೆ ಹಾಗೂ ರೈಲು ಪ್ರಯಾಣ ಮಾಡಲು ತೆರಳುತ್ತಿದ್ದಾಗ ಗ್ರಾಮಸ್ಥರು ಪ್ರತ್ಯೇಕ್ಷವಾಗಿ ಕಂಡಿದ್ದಾರೆ. ಕರೀಕೆರೆ ಸೇರಿದಂತ್ತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಚಿರತೆ ಹೋಡಾಟ ಕಂಡ ಗ್ರಾಮಸ್ಥರುಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದೆ,ನಾಮಕಾವಸ್ತೆಗೆಒಂದು ಬೋನ್ ಇಟ್ಟು ಸುಮ್ಮನಾಗಿದ್ದಾರೆ. ಕರೀಕೆರೆ ಹಾಗೂ ಬೈರಾಪುರ ಗ್ರಾಮದ ಕೆರೆ ಅಂಗಳದಲ್ಲಿ ಸಂಪೂರ್ಣವಾಗಿ ಗಿಡ ಗಂಟೆಗಳು ಬೆಳೆದಿದ್ದು ಕಾಡುರೀತಿಯಲ್ಲಿ ಕೆರೆಯನ್ನು ಅವರಿಸಿದೆ. ಗಿಡ ಗಂಟೆಗಳನ್ನು ತೆರವುಗೊಳಿಸುವಂತೆ ಸ್ಥಳಿಯ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ.
ಗ್ರಾಮಸ್ಥರು ಚಿರತೆ ಹಾವಳಿಯಿಂದ ಭಯಗ್ರಸ್ಥರಾಗಿದ್ದು ಮಳೆಗಾಲದಲ್ಲಿ ವಿದ್ಯುತ್ ಸಹ ಕಣ್ಮಾಮುಚ್ಚಾಲೆ ಆಡುತ್ತಿರುವುದು ಮತ್ತೋಷ್ಟು ಅಂತಕಕ್ಕೆ ಕಾರಣವಾಗಿದೆ,ಅರಣ್ಯ ಇಲಾಖೆ ಕೂಡಲೇ ಚಿರತೆ ಸೆರೆಗೆ ಕ್ರಮವಹಿಸಬೇಕು,ಅರಣ್ಯ ಇಲಾಖೆ ನಿರ್ಲಕ್ಷ್ಯ ಮುಂದುವರೆದರೆ ಇಲಾಖೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ




