ತಿಪಟೂರು:ತುಮಕೂರಿನಲ್ಲಿ ಕಾರ್ಯನಿರತ ದಲಿತ ಪತ್ರಕರ್ತನ ಮೇಲೆ ಕಿಡಿಗೇಡಿ ಮಂಜುನಾಥ್ ತಾಳಮಕ್ಕಿ ಹಲ್ಲೇ ನಡೆಸಿದ್ದು, ದಲಿತವಿರೋದಿ ಕೋಮುವಾದಿ ಪತ್ರಕರ್ತನ ಮೇಲೆ ಗುಂಡಾಕಾಯ್ದೆ ದಾಖಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಿಂದ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು.

ತಹಸೀಲ್ದಾರ್ ಪವನ್ ಕುಮಾರ್ ಮನವಿ ಪತ್ರಸ್ವೀಕರಿಸಿದರು
ಪ್ರತಿಭಟನಾನಿರತರನ್ನ ಉದೇಶಿಸಿ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ಮಾತನಾಡಿ ತುಮಕೂರಿನಲ್ಲಿ ಜೀ ಟಿ.ವಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ಸಮಯ ಮಂಜುನಾಥ್ ಎಂಬುವವರ ಮೇಲೆ ಪಬ್ಲಿಕ್ ಟಿ.ವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ,ಜಾತಿನಿಂದನೆ ಮಾಡಿರುತ್ತಾನೆ,ಕೋಮುವಾದಿ ಮಂಜುನಾಥ್ ತಾಳಮಕ್ಕಿ ಕೊಳಕು ಜಾತಿಮನಸ್ಥಿತಿಯ ವ್ಯಕ್ತಿಯಾಗಿದ್ದು,ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವುದು. ಜಾತಿ ಧರ್ಮಗಳ ಮಧ್ಯೆ ಕೋಮು ವೈಷ್ಯಮ್ಯ ಬಿತ್ತಿತ್ತ, ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುವ ಕೆಲಸ ಮಾಡುತ್ತಿದ್ದಾನೆ.ಕಾರವಾರ ತಾಳಮಕ್ಕಿ ಮೂಲದ ಈ ವ್ಯಕ್ತಿ ಈ ಹಿಂದೆ ಮಂಗಳೂರು,ಕಾರವಾರ ಭಾಗಗಳಲ್ಲಿ. ಕೋಮುವಾದಿ ಸಂಘಟನೆಗಳಲ್ಲಿ ಕೆಲಸ ಮಾಡುತ್ತಾ,ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಪಬ್ಲಿಕ್ ಟಿ.ವಿ ಮಾಧ್ಯಮವನ್ನ ಕೇವಲ ನೆಪಮಾತ್ರಕ್ಕೆ ಇಟ್ಟುಕೊಂಡು,ಕೆಲಸ ಮಾಡುತ್ತಿರುವ ಮಂಜುನಾಥ್ ತಾಳಮಕ್ಕಿ @ಮಂಜುನಾಥ್ ನಾಯ್ಕ ವರದಿಗಾರನಾಗಿ ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರೂ ದಲಿತವರದಿಗಾರರ ಮೇಲೆ ಜಾತಿನಿಂದನೆ ಮಾಡಿ ಮಾರಣಾಂತಿಕ ಹಲ್ಲೇ ನಡೆಸಿರುವ ಪ್ರಕರಣ ಸಹ ದಾಖಲಾಗಿರುತ್ತದೆ.ಕೋಮುವಾದಿ ಮನಸ್ಥಿತಿಯ ವ್ಯಕ್ತಿಗಳ ವಿರುದ್ದ ಸರ್ಕಾರ ಗುಂಡಾಕಾಯ್ದೆ ದಾಖಲಿಸಿ ಇತನ ಪೂರ್ವಾಪರ ತನಿಖೆ ನಡೆಸಬೇಕು. ಮಾಧ್ಯಮಕ್ಷೇತ್ರಕ್ಕೆ ಮಾರಕವಾಗಿರುವ ಈತ ಮಾಧ್ಯಮ ಕ್ಷೇತ್ರಕ್ಕೆ ಅಪಾಯಕಾರಿ. ಪಬ್ಲಿಕ್ ಟಿವಿ ಸಮಾಜದ ಮುಖವಾಣಿಯಂತೆ ಕೆಲಸ ಮಾಡುತ್ತಿದೆ.ಆದರೆ ಇಂತಹ ಪೂರ್ವಾಗ್ರಹ ಪೀಡಿತ ಜಾತಿವಾದಿ ಮನಸ್ಥಿತಿಯ ವ್ಯಕ್ತಿಗಳು ಕೆಲಸ ಮಾಡಿದರೆ, ನಮ್ಮ ಮಾಧ್ಯಮಸಂಸ್ಥೆಗೂ ಕೆಟ್ಟಹೆಸರು ಬರುತ್ತದೆ.ಕೂಡಲೇ ಪಬ್ಲಿಕ್ ಟಿ.ವಿ ರಂಗನಾಥ್ ರವರು,ನಮ್ಮ ಮಾಧ್ಯಮಸಂಸ್ಥೆಯಿಂದ ಕೂಡಲೇ ವಜಾಗೊಳಿಸಬೇಕು.ಪೊಲೀಸ್ ಹಾಗೂ ಸರ್ಕಾರ ಕೂಡಲೇ ಕಾನೂನು ಕ್ರಮಕೈಗೊಂಡು ಇಂತಹ ಸಮಾಜದ್ರೋಹಿಗಳನ್ನ ನಿಗ್ರಹಿಸದಿದ್ದರೆ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಡಿ.ಎಸ್ಎಸ್ ಜಿಲ್ಲಾಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಮಾಧ್ಯಮ ಕ್ಷೇತ್ರ ಸರ್ವ ಸಮಾಜಗಳಲ್ಲಿ ಸಮಾನವಾಗಿ ಕಾಣುವ,ಮನೋಭಾವನೆ ರೂಡಿಸಿಕೊಳ್ಳ ಬೇಕು, ಆದರೆ ಮಂಜುನಾಥ್ ತಾಳಮಕ್ಕಿ ಎನ್ನುವ ಅವಿವೇಕಿ ಮಾಧ್ಯಮಕ್ಷೇತ್ರಕ್ಕೆ ನಾಲಯಕ್ ವ್ಯಕ್ತಿಯಾಗಿದ್ದು ಕೋಮುವಾದಿ ಮನಸ್ಥಿತಿ ಹೊಂದಿದ್ದು, ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ಸಮಯ ಮಂಜುನಾಥ್ ಮೇಲೆ ಹಲ್ಲೇ ಮಾಡುವ ಮೂಲಕ ತನ್ನ ಜಾತಿಮನಸ್ಥಿತಿ ತೋರ್ಪಡಿಸಿದ್ದು.ಸರ್ಕಾರ ಕೂಡಲೇ ಗುಂಡಾಕಾಯ್ದೆಅಡಿಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಡಿ.ಎಸ್ಎಸ್ ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ ಮಾಧ್ಯಮಕ್ಷೇತ್ರ ಪವಿತ್ರವಾದ ಕ್ಷೇತ್ರ, ಸಮಾಜದ ಶೋಷಿತ ಸಮುದಾಯಗಳು,ಬಡವ.ದೀನದಲಿತರ ಬಗ್ಗೆ ಕಾಳಜಿಯಿಂದ ಕೆಲಸ ಮಾಡಬೇಕು,ಆದರೆ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕಾದ ವರದಿಗಾರ ಅವಿವೇಕದಿಂದ ವರ್ತನೆ ಮಾಡಿರುವುದು ಖಂಡನೀಯವಾಗಿದೆ.ಮಂಜುನಾಥ್ ತಾಳಮಕ್ಕಿ ಎನ್ನುವ ವ್ಯಕ್ತಿ ಕೋಮುವಾದಿ ಸಂಘಟನೆಗಳೊಂದಿಗೆ ತೊಡಗಿಕೊಂಡು ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು ಹಲವಾರು ಭಾರೀ ದಲಿತರು ಅಲ್ಪಸಂಖ್ಯಾರತ ಮೇಲೆ ಪ್ರಚೋದನೆಗಳನ್ನ ಮಾಡಿದ್ದು,ಇಂತಹ ವ್ಯಕ್ತಿಯಮೇಲೆ ಗೃಹ ಸಚಿವರು ಹೆಚ್ಚಿನ ತನಿಖೆಗೆ ಒಳಪಡಿಸಬೇಕು.ಗುಂಡಾಕಾಯ್ದೆ ದಾಖಲು ಮಾಡಬೇಕು ಇಂತಹ ಕೋಮುವಾದಿಗಳನ್ನ ಆರಂಭದಲ್ಲೇ ಮಟ್ಟಹಾಕದಿದ್ದರೆ ಸಮಾಜಘಾತುಕ ಶಕ್ತಿಗಳಾಗಿ ಸಮಾಜ ಹಾಗೂ ದೇಶಕ್ಕೆ ಮಾರಕವಾಗುತ್ತಾರೆ.ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಉಪಸ್ಥಿತರಿದ ಡಿ.ಎಸ್ ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಕೆ ಕುಮಾರ್ ಸಮಯ ಮಂಜುನಾಥ್ ಮೇಲಿನ ಹಲ್ಲೇ ಪ್ರಕರಣ ವಿಶೇಷ ತನಿಖೆಗೆ ಒಳಪಡಿಸಬೇಕು.ಪಬ್ಲಿಕ್ ಟಿ.ವಿ ಮುಖ್ಯಸ್ಥರು ಮಂಜುನಾಥ್ ತಾಳಮಕ್ಕಿಯನ್ನ ಕೂಡಲೇ ವಜಾಗೊಳಿಸಬೇಕು,ಈ ವ್ಯಕ್ತಿ ಈ ಹಿಂದೆಯೂ ದಲಿತ ಸಂಘಟನೆಗಳು ಹಾಗೂ ದಲಿತರ ಪ್ರತಿಭಟನೆಗಳನ್ನ ವರದಿ ಮಾಡದೇ ಜಾತಿವಾದಿ ಮನಸ್ಥಿತಿ ಪ್ರದರ್ಶನ ಮಾಡಿದ್ದಾನೆ.ಎಂದು ತಿಳಿಸಿದರು.
ಪ್ರತಿಬವಟನೆಯಲ್ಲಿ ಡಿ.ಎಸ್ಎಸ್ ಸಂಚಾಲಕ ಜಕ್ಕನಹಳ್ಳಿ ಮೋಹನ್.ಮುಖಂಡರಾದ ಹರೀಶ್ ಯಗಚೀಕಟ್ಟೆ.ಸತೀಶ್ ಮಾರನಗೆರೆ.ಇರ್ಫಾನ್ .ಮಹಿಳಾ ಸಂಚಾಲಕಿ ಕವಿತಾ ಮಹೇಶ್. ಸೀಮಾ.ಮತ್ತಿಘಟ್ಟ ಶಿಮಕುಮಾರ್.ಕಿರಣ್ ರಾಜ್ ಅರ್ಚನಹಳ್ಳಿ.ಡಿ.ಆರ್ ಬಸವರಾಜು.ಕಾರ್ಮಿಕ ಮುಖಂಡ ಹೊನ್ನಪ್ಪ ಗ್ಯಾರಘಟ್ಟ.ಗ್ರಾ.ಪಂ ಅಧ್ಯಕ್ಷಉದಯ್ ಕುಮಾರ್ ಕೊಪ್ಪ. ಆನಂದ್ ಕುಮಾರ್.ಬಸವರಾಜು ಗಾಂಧಿನಗರ .ರಮೇಶ್ ಮಾರನಗೆರೆ.ವೆಂಕಟೇಶ್ ಕರಡಾಳು. ಮುಂತ್ತಾದವರು ಉಪಸ್ಥಿತರಿದರು.




