Spread the love

ತಿಪಟೂರು:ತಾಲ್ಲೋಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 16ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.

ದಸರೀಘಟ್ಟ ಕ್ರಾಸ್( ಬುಧುವಾರ ಸಂತೆ )ಜಿ.ಮೇಲನಹಳ್ಳಿ ಯಿಂದ ಬುಧುವಾರ ಸಂತೆ ಮಾರ್ಗವಾಗಿ ಅರಸೀಕೆರೆ ಗಡಿ ಸೇರುವ ರಸ್ತೆ ಹಾಗೂ ಹೊಗವನಘಟ್ಟ ದಿಂದ ದಾಸಿಹಳ್ಳಿ , ಗಂಗನಘಟ್ಟ ಮಾರ್ಗವಾಗಿ ಗಂಗನಘಟ್ಟ ಗೇಟ್ ಶ್ರೀ.ರಂಗ ಶಾಲೆ ( ಮಂಡ್ಯ- ಹಡಗಲಿ ಎಸ್.ಹೆಚ್ -47 ) ರಸ್ತೆ ಸೇರುತ್ತದೆ ರಸ್ತೆಬಜಗೂರಿನಿಂದ ಹುಲ್ಲೇನಹಳ್ಳಿ ಕಾವಲ್,ಬಜಗೂರು ಗ್ರಾಮವರೆಗೆರಸ್ತೆ ಹಾಗೂ ತಿಪಟೂರುತಾಲೋಕಿನ ತಿಪಟೂರು – ಹಾಸನ ರಸ್ತೆಯಿಂದ ತಡಸೂರು ಕೆರೆಗೋಡಿ ರಂಗಾಪುರ 2 ಹೊಗವನಘಟ್ಟ , ದಾಸಿಹಳ್ಳಿ , ಗಂಗನಘಟ್ಟ ಮಾರ್ಗ ಮಂಡ್ಯ – ಹಡಗಲಿ ರಸ್ತೆ ಸೇರುವ ರಸ್ತೆಯ ಕಿ.ಮೀ .7.00 ರಿಂದ 14,00 ಕಿಮೀವರೆಗೆಆಯ್ದಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತುದಾಸಿಹಳ್ಳಿಕೈದಾಳ ಗೇಟ್ ನಿಂದ ಕೈದಾಳ ಗ್ರಾಮದವರೆಗೆ
( ಕರಡಾಳು ಸಂತೆ ಸರ್ಕಲ್‌ ಅಭಿವೃದ್ಧಿ ) ಕರಡಾಳು ಸಂತೆ ಮೈದಾನ ಕರಡಾಳು ಸಂತೆ ಸರ್ಕಲ್ ನಿಂದಈಚನೂರು ವರೆಗೆತಿಪಟೂರು ತಾಲೋಕು ಮಂಡ್ಯ – ಹಡಗಲಿ ರಸ್ತೆಯಿಂದ ಹುಲಿಕಟ್ಟೆ , ಈಚನೂರು , ಕೊಂಡ್ಲಘಟ್ಟ , ದೇವರಹಳಿ ಮಾರ್ಗ ಎನ್.ಹೆಚ್ -206 ಸೇರುವ ರಸ್ತೆ ಸರಪಳಿ 6.00 ರಿಂದ 9.00 ಕಿಮೀ ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ,ಕೊಂಡ್ಲಘಟ್ಟ ಸರ್ಕಲ್ ಕೊಂಡ್ಲಘಟ್ಟದಿಂದ ದೇವರಹಳ್ಳಿ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.


ತಾಲ್ಲೋಕಿನ ಕಸಬಾ ಹೋಬಳಿ ದಾಸೀಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ರಸ್ತೆ ಕಾಮಗಾರಿಗಳಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿಲ್ಲ,ತಾಲ್ಲೋಕಿನ ಸಮಗ್ರ ಯೋಜನೆಗೆ ಹಲವಾರು ಕಾರ್ಯಕ್ರಮಗಳನ್ನ ರೂಪಿಸಲಾಗಿದೆ,ಲೋಕೋಪಯೋಗಿ ಇಲಾಖೆಯಿಂದ ಸುಮಾರು 100ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ. ಆದೇರೀತಿ ಜಿಲ್ಲಾಪಂಚಾಯ್ತಿಯಿಂದ 100ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ,ಸುಮಾರು 340ಕೋಟಿ ವೆಚ್ಚದ ಬಹುಗ್ರಾಮ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದ್ದು ಡಿಸೆಂಬರ್ ಮಾಹೆ ವೇಳೆಗೆ ಕಾಮಗಾರಿ ಮುಕ್ತಾಯಗೊಳ್ಳಲಿದ್ದು ಗ್ರಾಮೀಣ ಭಾಗದ ಪ್ರತಿಮನೆಗಳಿಗೆ ಶುದ್ದಕುಡಿಯುವ ನೀರು ದೊರೆಯಲಿದೆ.ಇನ್ನೂ ತಿಪಟೂರು ನಗರಕ್ಕೆ ಕುಡಿಯುವ ನೀರುಪೂರೈಕೆ ಮಾಡುವ ನೊಣವಿನಕೆರೆ ಕುಡಿಯುವ ನೀರಿನ ಯೋಜನೆ,ಅನುಮೋದನೆ ಹಂತದಲ್ಲಿದು, ಶೀಘ್ರವಾಗಿ ಮಾನ್ಯ ಮುಖ್ಯಮಂತ್ರಿಗಳಿಂದ ತಾಲ್ಲೋಕಿನ ಎಲ್ಲಾ ಅಭಿವೃದ್ದಿ ಯೋಜನೆಗಳ ಲೋಕಾರ್ಪಣೆ ಹಾಗೂ ಕೆಲ ಹೊಸ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಲಾಗುವುದು.ತಾಲ್ಲೋಕಿನಲ್ಲಿ ಅಭಿವೃದ್ದಿ ಯೋಜನೆಗಳು ಹಿಂದೆ ಬಿದ್ದಿಲ್ಲ, ಆದರೂ ಕೆಲವು ವ್ಯಕ್ತಿಗಳು ಅನಾಗತ್ಯವಾಗಿ ವಾಟ್ಸಾಪ್,ಫೇಸ್ ಬುಕ್ ಗಳಲ್ಲಿ ಅನಾಗತ್ಯ ಅಪಪ್ರಚಾರದ ಕಾಮಿಟ್ ಹಾಕುತ್ತಾರೆ,ಇಂತಹ ಕುಹಕಗಳಿಗೆ ತಲೆ ಕೆಡಿಸಿಕೊಳೊದಿಲ್ಲ. ನಮ್ಮ ತಾಲ್ಲೋಕಿನ ಅಭಿವೃದ್ದಿ ನಮ್ಮ ಜನರ ಸಮಸ್ಯೆ ಪರಿಹಾರ ಮಾಡುವುದೇ ನಮ್ಮ ಆಧ್ಯತೆ,ನಾನು ಮಾತಾಡುವುದಕ್ಕಿಂತ ನಾನು ತಾಲ್ಲೋಕಿನಲ್ಲಿ ಮಾಡಿರುವ ಅಭಿವೃದ್ದ ಕೆಲಸಗಳು ಮಾತನಾಡುತ್ತವೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ದಸರೀಘಟ್ಟ ಗ್ರಾಮಪಂಚಾಯ್ತಿ ಅಧ್ಯಕ್ಷೆ ಫಾಜಿಲ್ಲಾ ಬಾನು.ಪಾಷಾ.ಡಿ.ಆರ್.ಗುತ್ತಿಗೆದಾರರಾದ ಕೇಶವಮೂರ್ತಿ .ಗ್ರಾಮಪಂಚಾಯ್ತಿ ಸದಸ್ಯ ಗೋವಿಂದಪ್ಪ.ಮೋಹನ್.ಲೋಕೋಪಯೋಗಿ ಇಲಾಖೆ ಎಇಇ ನಟರಾಜ್.ಕೃಷಿಕ ಸಮಾಜದ ಸದಸ್ಯ ವಗನಘಟ್ಟ ಯೋಗಾನಂದ್‌.ನಗರಸಭೆ ಸದಸ್ಯ ಲೋಕನಾಥ್ ಸಿಂಗ್ ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!