Spread the love

ತಿಪಟೂರು: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್ ಆರ್ ಟಿ.ಸಿ ಬಸ್ ನಿಲ್ದಾಣದ ಬಳಿ ಅಪರಿಚಿತ ಗಂಡಸು ಮೃತಪಟ್ಟಿರುವ ಬಗ್ಗೆ ನಗರಠಾಣೆ ಯುಡಿಆರ್ ನಂ 18/2025 ಕಲಂ : 194 ಬಿ.ಎನ್.ಎಸ್.ಎಸ್
ಮೃತ ಅಪರಿಚಿತ ಗಂಡಸಿನ ಚಹರೆ


ಅಪರಿಚಿತ ಗಂಡಸುದಿನಾಂಕ : 14-08-2025 ರಂದು ಮದ್ಯಾನ್ನ 1-30 ಗಂಟೆಗೆ ಪಿರ್ಯಾದಿದಾರರಾದ ಹೆಚ್.ಎಲ್.ಕೆಂಪರಾಯಪ್ಪ , ಬಿನ್ ಶೆಟ್ ತಂಗಣ ಸಂಚಾರಿ ನಿಯಂತ್ರಕರು , 58 ವರ್ಷ , ತಿಪಟೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ , ತಿಪಟೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಈ ದಿನ ದಿ : 14-08-2025 ರಂದು ಬೆಳಗ್ಗೆ ಸುಮಾರು 7-00 ಗಂಟೆಯಲ್ಲಿ ನಮ್ಮ ಬಸ್‌ ನಿಲ್ದಾಣದಲ್ಲಿ ಕಸಗುಡಿಸುವ ಕೆಲಸ ಮಾಡುವ ಕಮಲಮ್ಮ ಎಂಬುವರು ಬಂದು ಬಸ್‌ ನಿಲ್ದಾಣದಲ್ಲಿರುವ ಹೋಟೆಲ್ ಪಕ್ಷ ಯಾರೋ ಮಲಗಿದ್ದು , ಏಳಿಸಲು ಪ್ರಯತ್ನಿಸಿದರೂ ಏಳುತ್ತಿಲ್ಲ . ಬಂದು ನೋಡಿ ಎಂದಾಗ ನಾನು ಆಕೆಯೊಂದಿಗೆ ಹೋಗಿ ನೋಡಲಾಗಿ ಸುಮಾರು 50-55 ವರ್ಷ ವಯಸ್ಸುಳ್ಳ ಅಪರಿಚಿತ ಗಂಡಸಾಗಿದ್ದು , ಮಲಗಿದ್ದಲೆ ಮರಣ ಹೊಂದಿದ್ದು , ಆತನು ಯಾರೆಂದು ತಿಳಿದಿಲ್ಲ . ಆತನ ಮೈಮೇಲ್ ಒಂದು ಬಳಿ ಮತ್ತು ನೀಲಿ ಬಣದ ಅರ್ಧತಲ್ಲಿನ ಟಿ ಷರಟು ಒಂದು ಕಾಫಿಕಲರ್ ಪ್ಯಾಂಟ್ ಇರುತ್ತೆ .. ಆತ ಎಲ್ಲಿಂದಲೋ ಬಸ್‌ ನಿಲ್ದಾಣಕ್ಕೆ ಬದವನು ಯಾವುದೇ ಖಾಯಿಲೆಯಿಂದ ನರಳುತ್ತಿದ್ದವನು ಹೋಟೆಲ್ ಪಕ್ಕ , ಮಲಗಿದ್ದವನು ಮರಣ ಹೊಂದಿರುತ್ತಾನೆ . ಆದ್ದರಿಂದ ಮುಂದಿನ ಕ್ರಮದ ಬಗ್ಗೆ ಈ ದೂರು ನೀಡಿರುತ್ತೇ ನೀಡಿದ ದೂರನ್ನು ಪಡೆದು ಠಾಣಾ ಯುಡಿಆರ್ ನಂ -18 / 2025 ಕಲಂ : 194 ಬಿ.ಎನ್‌.ಎಸ್.ಎಸ್ ರೀತಾ ಪ್ರಕರಣ ದಾಖಲು ಮಾಡಿರುತ್ತದೆ .
ಈ ಚಹರೆವುಳ್ಳ , ಮೃತ ಗಂಡಸಿನ ಹೆಸರು ಮತ್ತು ವಿಳಾಸ ಪತ್ತೆಯಾದರೆ ಈ ಕೆಳಗಿನ ವಿಳಾಸಕ್ಕೆ ತಿಳಿಸಲು ಕೋರಿದೆ 1 ) ತಿಪಟೂರು ನಗರ ಪೊಲೀಸ್ ಠಾಣೆ ಪೋನ್ ನಂ – 08134-251041 / 9480802970
2 ) ತಿಪಟೂರು ಉಪವಿಭಾಗ ಡಿ ಎಸ್ ಪಿ ಕಚೇರಿ – 08134-251084
3 ) ತಿಪಟೂರು ಪೋಲೀಸ್ ಠಾಣೆ ಸಂಪರ್ಕಿಸಲು ಕೋರಿದೆ

error: Content is protected !!