Spread the love

ತಿಪಟೂರು: ಬೀದಿಯಲ್ಲಿ ಆಟವಾಡುತ್ತಿದ್ದ 6ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು ಮಗುವಿನ ತಲೆ ಹಾಗೂ ಹೊಟ್ಟೆಯನ್ನ ತಿಂದು ಹಾಕಿರುವ ಹೃದಯ ವಿದ್ರಾವಕ ಘಟನೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ನಡೆದಿದೆ.

https://youtu.be/tqWZveHV7Eo?si=L31KuSSt4-HFRk2j


ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯನವರ ಮಗಳು 6ವರ್ಷದ ನವ್ಯ ಬೀದಿನಾಯಿಗಳ ದಾಳಿಗೊಳಗಾದ ನತದೃಷ್ಟೆ .
ಮಧ್ಯಾಹ್ನ 04ಗಂಟೆ ಸಮಯದಲ್ಲಿ ಅಯ್ಯನ ಬಾವಿ ಗ್ರಾಮದ ತಮ್ಮ ಮನೆ ಮುಂದೆ ಆಟವಾಡುತ್ತಿದ್ದ ನವ್ಯಾಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿನಡೆಸಿವೆ. ದಾಳಿನಡೆಸಿದ ನಾಯಿಗಳು ಮಗುವಿನ ತಲೆಯ ಚರ್ಮವನ್ನ ಸಂಪೂರ್ಣವಾಗಿ ಕಿತ್ತುಹಾಕಿದ್ದು .ಹೊಟ್ಟೆಯನ್ನ ಕಿತ್ತು ಕರುಳು ಆಚೆಬರುವಂತೆ ಮಾಡಿವೆ. ಮಗುವಿನ ಮುಖ ಹಾಗೂ ಕೈ.ಕಾಲು ತೊಡೆಭಾಗವನ್ನ ಕಿತ್ತು ಹಾಕಿವೆ.ರಕ್ತದ ಮಡುವಿನಲ್ಲಿ ಕೀರಾಡುತ್ತಿದ್ದ ಮಗುವನ್ನ ಕಂಡ ಸಾರ್ವಜನಿಕರು.ನಾಯಿಹಿಂಡನ್ನ ಓಡಿಸಿ ಮಗುವನ್ನ ತಕ್ಷಣ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಗು ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ರಕ್ತಸ್ರವವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು. ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆಫಲಕಾರಿಯಾಗದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.


ತಾಲ್ಲೋಕಿನನಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದೆ. ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರೂ,ತಾಲ್ಲೋಕು ಆಡಳಿತ ನಿರ್ಲಕ್ಷ್ಯವಹಿಸಿದೆ. ತಾಲ್ಲೋಕಿಲ್ಲಿ ಎಪ್ರಿಲ್ ತಿಂಗಳೊಂದರಲ್ಲೆ ಸುಮಾರು 200 ಬೀದಿನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ.ಮೇ ತಿಂಗಳಿನಲ್ಲೂ ಸುಮಾರು 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನೇ ದಿನೇ ನಾಯಿ ಹಾವಳಿ ಜಾಸ್ತಿಯಾಗುತ್ತಿದ್ದರೂ ತಾಲ್ಲೋಕು ಆಡಳಿತ ಹಾಗೂ ನಗರಾಡಳಿದ ಮೌನವಹಿಸಿದ್ದು.ಬೀದಿನಾಯಿಗಳಿಗೆ ಬಡಮಕ್ಕಳು ಹಾಗೂ ಸಾರ್ವಜನಿಕರು ತುತ್ತಾಗುತ್ತಿದ್ದಾರೆ.ತಾಲ್ಲೋಕು ಆಡಳಿತ ಹಾಗೂ ನಗರಸಭೆ ಬೀದಿನಾಯಿಹಾವಳಿಗೆ ಕಡಿವಾಣಹಾಕಲು ವಿಫಲವಾಗಿದೆ.


ತಾಲ್ಲೋಕಿನ ಕಸಬಾ ಹೋಬಳಿ ಅಯ್ಯನಬಾವಿಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿನಾಯಿಗಳು ದಾಳಿಮಾಡಿ ಮಗುವಿನ ಜೀವ ತೆಗೆದಿವೆ. ಅಮಾಯಕ ಮಗುವಿನ ಸಾವಿಗೆ ಆಡಳಿತ ವ್ಯವಸ್ತೆಯ ಹೊಣೆಹೊರಬೇಕು. ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೂಡಲೇ ಮಗುವನ್ನ ಕಳೆದುಕೊಂಡ ಬಡಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು.ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!