ತಿಪಟೂರು:ತಾಲ್ಲೋಕಿನಲ್ಲಿ ವಸತಿ ಹಾಗೂ ನಿವೇಷನ ರಹಿತರಿಗೆ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದು ತಿಪಟೂರು ನಗರದಲ್ಲಿ ನಗರಸಭೆ ನಿರ್ಲಕ್ಷ್ಯದಿಂದ ಬಡವರಿಗೆ,ವಸತಿ ರಹಿತರಿಗೆ ವಸತಿ ಹಾಗೂ ನಿವೇಷನ ರಹಿತರಿಗೆ ನಿವೇಷನ ನೀಡಲು ಒತ್ತಾಯಿಸಿ ಜೂನ್ 23 ರಂದು ಸೋಮವಾರ ಬೆಳಗ್ಗೆ 11.ಗಂಟೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋಪೇಷರ್ ಬಿ.ಕೃಷ್ಣಪ್ಪ ಸ್ಥಾಪಿತ ತಿಪಟೂರು ಶಾಖೆ ನೇತೃತ್ವದಲ್ಲಿ ತಿಪಟೂರು ನಗರಸಭೆ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಸುದ್ದಿಘೋಷ್ಠಿ ಉದೇಶಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋಫೇಸರ್ ಬಿ.ಕೃಷ್ಣಪ್ಪ ಸ್ಥಾಪಿತ .ತಾಲ್ಲೋಕು ಸಂಚಾಲಕ ಜಕ್ಕನಹಳ್ಳಿ ಮೋಹನ್ ಮಾತನಾಡಿ ಸರ್ಕಾರದ ನಿರ್ಲಕ್ಷ್ಯದಿಂದ ನಿವೇಷನ ರಹಿತರಿಗೆ ನಿವೇಷನ ಹಾಗೂ ವಸತಿ ರಹಿತ ಬಡವರಿಗೆ ವಸತಿದೊರೆಯದೆ ಪರದಾಡುವಂತ್ತಾಗಿದೆ.ಸರ್ಕಾರದ ಜನವಿರೋಧಿ ಮನಸ್ಥಿಯ,ತಾಲ್ಲೋಕು ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದ ತಿಪಟೂರು ತಾಲ್ಲೋಕಿನಲ್ಲಿ ಒಂದೇ ಒಂದು ನೀವೇಷನ ಮಂಜೂರಾಗಿಲ್ಲ.ಗ್ರಾಮಪಂಚಾಯ್ತಿಗಳಲ್ಲಿ ನಿವೇಷನಕ್ಕಾಗಿ ಸ್ಥಳಮೀಸಲಾಗಿದೆ ಎಂದು ಪಹಣಿಗಳಲ್ಲಿ ಮಾತ್ರ ನಮೂದಾಗಿದೆ,ಆದರೆ ಯಾರಿಗೂ ನಿವೇಷನ ನೀಡಿಲ್ಲ,ನಿವೇಷನ ಅಭಿವೃದ್ದಿ ಪಡಿಸುವ ಕೆಲಸ ಮಾಡಿಲ್ಲ.ತಿಪಟೂರು ನಗರದ ಇಂದಿರಾ ನಗರ.ಗಾಂಧೀನಗರ.ನೆಹರುನಗರ,ಸೇರಿದಂತೆ ಬಡವರು ನಿರ್ಗತಿಕರು ವಾಸಮಾಡಲು ಜಾಗವಿಲ್ಲದೆ.ಜನ ಪ್ರಾಣಿಗಳಿಗೂ ಕಡೆಯಾಗಿ ಜೀವನ ಮಾಡುತ್ತಿದ್ದಾರೆ.ಆದರೆ ಹಳೇಪಾಳ್ಯ ಬಳಿ 3ಎಕರೆ ಜಾಗವನ್ನ ಹಲೆಮಾರಿಗಳು ಹಾಗೂ ಸಾರ್ವಜನಿಕರ ವಸತಿ ಉದೇಶಕ್ಕೆ ಮೀಸಲಿಡಲಾಗಿದೆ,ಆದರೆ ಈ ಜಾಗ ಯಾವಸ್ಥಿತಿ ಎನ್ನುವುದೇ ಸಾರ್ವಜನಿಕರಿಗೆ ಮಾಹಿತಿಇಲ್ಲ,ನಗರಸಭೆ ನಿರ್ಲಕ್ಷ್ಯದ ಪರಿಣಾಮ ಜನ ಪರದಾಡುತ್ತಿದ್ದಾರೆ.ಮಡೇನೂರು ಗೇಟ್ ಬಳಿ9 ಎಕರೆ ಜಾಗ ವಸತಿ ಉದೇಶಕ್ಕೆ ಮೀಸಲಾಗಿದೆ,ಆದರೆ ಈ ಸ್ಥಳದಲ್ಲಿ ನಿವೇಷನ ನೀಡಲು ತಾಲ್ಲೋಕು ಆಡಳಿತ ಮೀನಾಮೇಷ ಏಣಿಸುತ್ತಿದ್ದು,ಅರ್ಹ ವಸತಿ ರಹಿತರಿಗೆ ನಿವೇಷನ ನೀಡದೆ.ಆರ್ಥಿಕ ಬಲಾಡ್ಯರು,ರಾಜಕೀಯ ಪ್ರಭಾವಿಗಳಿಗೆ ನಿವೇಷನ ನೀಡಿದ ಕಾರಣ.ಬಳಕೆ ಮಾಡಿಕೊಳ್ಳದೆ ಖಾಲಿಬಿದ್ದಿವೆ,ತಾಲ್ಲೋಕು ಆಡಳಿತ ಅರ್ಹಫಲಾನುಭವಿಗಳಿಗೆ ನಿವೇಷನ ಮಂಜೂರು ಮಾಡಬೇಕು.ನಗರವ್ಯಾಪ್ತಿಯಲ್ಲಿ ನಿವೇಷನ ನೀಡಲು ನಗರಾಡಳಿತ ವಿಫಲವಾಗಿದ್ದು.ಪ್ರತಿವರ್ಷ ಸಾವಿರಾರು ಮನೆ ನೀಡಿದ್ದೇವೆ ಎಂದು ಹೇಳುವ ಸರ್ಕಾರಗಳು ಬಡವರ ಕಣ್ಣೊರೆಸುವ ಕೆಲಸ ಮಾಡುತ್ತಿವೆ.ಸರ್ಕಾರ ಹಾಗೂ ತಾಲ್ಲೋಕು ಆಡಳಿತ.ನಗರಾಡಳಿತದ ವಿರುದ್ದ ಜೂನ್ 23ರಂದು ತಿಪಟೂರು ನಗರಸಭೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.ಸರ್ಕಾರ ಅರ್ಹಫಲಾನುಭವಿಗಳಿಗೆ ನಿವೇಷನ ನೀಡದಿದ್ದರೆ ತಾಲ್ಲೋಕು ಆಡಳಿತದ ವಿರುದ್ದ ಉಗ್ರಹೋರಾಟ ನಡೆಸಲಾಗುವುದು ಎಂದು ತಿಳಿಸಿದರು

.ಪತ್ರಿಕಾಘೋಷ್ಠಿಯಲ್ಲಿ ತಾಲ್ಲೋಕು ಸಂಘಟನಾ ಸಂಚಾಲಕ ಹತ್ಯಾಳ್ ಕೀರ್ತಿ.ನಗರಸಂಚಾಲಕ ಸತೀಶ್ ಮಾರನಗೆರೆ.ರಾಘು ನಗರಸಂಘಟನಾ ಸಂಚಾಲಕ.ಕವಿತಾ ಮಹೇಶ್ ಮಹಿಳಾ ಅಧ್ಯಕ್ಷರು.ಜಯಕುಮಾರ್ ಹಾಲ್ಕುರಿಕೆ ಸಂಘಟನಾ ಸಂಚಾಲಕ.ಇಂದ್ರನಗರ ಮಹೇಶ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




