Spread the love

ತಿಪಟೂರು : ತಾಲೂಕಿನಲ್ಲಿ ಬಿಎಲ್‌ಓಗಳಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರರನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಿಂದ ಕೈಬಿಡಬೇಕೆಂದು ತಾಲ್ಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್‌ಗೆ ಬಿಎಲ್‌ಓ ಶಿಕ್ಷಕರು ಮನವಿ ಪತ್ರ ಸಲ್ಲಿಸಿದರು.


ತಾಲೂಕಿನಲ್ಲಿ 136 ಶಿಕ್ಷಕರು ಚುನಾವಣಾ ಬಿಎಲ್‌ಓಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಈಗ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣಾ ಕಾರ್ಯ ಪ್ರಾರಂಭವಾಗಿದ್ದು ಹಾಗೂ ಬುಧವಾರದಂದು ಚುನಾವಣಾ ಸಂಬAಧ ತರಬೇತಿಯನ್ನು ಆಯೋಜನೆ ಮಾಡಲಾಗಿದೆ ಇದೇ ಸಮಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೂ ನೇಮಕ ಮಾಡಿ ಆದೇಶವನ್ನು ನೀಡಿದ್ದು ಏಕಕಾಲದಲ್ಲಿ ಎರಡು ಕಾರ್ಯಗಳ ನಿರ್ವಹಿಸುವುದು ಕಷ್ಟಕರವಾಗಿದೆ.
ತಾಲೂಕಿನ 663 ಶಿಕ್ಷಕರು ಸಮೀಕ್ಷೆಯ ತರಬೇತಿಯಲ್ಲಿ ಭಾಗಿಯಾಗಿದ್ದು 490 ಜನರನ್ನು ನಿಯೋಜಿಸಲಾಗಿದೆ. ಉಳಿದ 173 ಶಿಕ್ಷಕರಿಗೆ ಯಾವುದೇ ಕಾರಣಕ್ಕೂ ನಿಯೋಜನೆ ಮಾಡಿರುವುದಿಲ್ಲ ಆದ್ದರಿಂದ ದಯವಿಟ್ಟು 136 ಜನ ಬಿಎಲ್‌ಓ ಶಿಕ್ಷಕರನ್ನು ಹೊರತುಪಡಿಸಿ ಯಾವುದಾದರೂ ಒಂದು ಕಾರ್ಯಕ್ಕೆ ನಿಯೋಜಿಸಬೇಕು ಮತ್ತು 136 ಜನ ಬಿಎಲ್‌ಒಗಳಲ್ಲಿ ಶೇಕಡ 70ರಷ್ಟು ಜನರು 50 ವರ್ಷದ ಮೇಲ್ಪಟ್ಟವರಾಗಿದ್ದು ಅನೇಕ ಕಾಯಿಲೆಗಳಲ್ಲಿ ಬಳಲುತ್ತಿದ್ದಾರೆ. ಸರ್ಕಾರ ನಡೆಸುತ್ತಿರುವ ಎರಡು ಸಮೀಕ್ಷೆಗಳು ಅತಿ ಸೂಕ್ಷ್ಮವಾಗಿದ್ದು ನಮ್ಮಗಳಿಗೆ ಅಸಾಧ್ಯವಾಗಿರುತ್ತದೆ ಅಥವಾ ಒಂದು ಸಮೀಕ್ಷೆ ಮುಗಿದ ನಂತರ ಮತ್ತೊಂದು ಸಮೀಕ್ಷೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಮನವಿ ಪತ್ರಸ್ವೀಕರಿಸಿದ ತಹಸೀಲ್ದಾರ್ ಮೋಹನ್ ಕುಮಾರ್ ಮಾತನಾಡಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಹಾಗೂ ಮತದಾರರ ಪಟ್ಟಿಪರೀಷ್ಕರಣೆ ಕರ್ತವ್ಯಕ್ಕೆ ಒಬ್ಬರನ್ನೆ ನಿಯೋಜನೆ ಮಾಡಿರುವ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಬರವಸೆ ನೀಡಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!