Spread the love

ತಿಪಟೂರು:-ನಗರದ ಎಸ್ ಎಸ್ ಪಿ ಯು ಕಾಲೇಜಿನ ಸಾವಿತ್ರಿಬಾಯಿ ಫೂಲೆ ವೇದಿಕೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಮತ್ತು 8ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷರಾದಂತಹ ನವಿಲೇ ಎನ್ ಪರಮೇಶ್ ಮಾತನಾಡಿ ನಾವು ಯಾವುದೇ ಭಾಷೆಯನ್ನ ಕಲಿತರು ನಮ್ಮ ತಾಯಿಭಾಷೆ ಕನ್ನಡ ಪ್ರೀತಿಸ ಬೇಕು,ನಮ್ಮ ನಾಡು ನುಡಿ ಕಲೆ ಸಾಹಿತ್ಯದ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ದುಡಿಯ ಬೇಕು. ವಿದ್ಯಾರ್ಥಿಗಳು ಓದಿನಕಡೆ ಹೆಚ್ಚು ಆಸ್ತಿ ಹೊಂದಬೇಕು,ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು.ನಿಮ್ಮ ಪೋಷಕರು ನಿಮ್ಮಗಳ ಮೇಲೆ ಬರವಸೆ ಇಟ್ಟು ಕಾಲೇಜಿಗೆ ಕಳಿಸುತ್ತಿದ್ದಾರೆ. ನಿಮಗೆ ಸಿಕ್ಕಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಿ,ಎಸ್.ಎಸ್.ಪಿಯು ಕಾಲೇಜು ನಿಮ್ಮ ಭವಿಷ್ಯದ ಬೆಳವಣಿಗೆಗೆ ಪೂರಕವಾದ ಶೈಕ್ಷಣಿಕ ಸೌಲಭ್ಯ ಒದಗಿಸಿದ್ದು,ಹೆಚ್ಚು ಹೆಚ್ಚು ಅಂಕಗಳಿಸಿ ನಿಮ್ಮ ಕಾಲೇಜಿಗೆ ಹಾಗೂ ನಿಮ್ಮ ಪೋಷಕರಿಗೆ ಉತ್ತಮ ಹೆಸರುತನ್ನಿ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಜಾನಪದ ಗಾಯಕರೂ ಮತ್ತು ಸಿನಿಮಾ ರಂಗಕರ್ಮಿಗಳೂ ಆದ ಶ್ರೀ ಗುರುರಾಜ್ ಹೊಸಕೋಟೆ ಕನ್ನಡ ಭಾಷೆ ಹೆಚ್ಚು ಹೆಚ್ಚು ಶ್ರೀಮಂತಗೊಳ್ಳಲು, ಜಾನಪದ ಕಲೆಯ ಸಾಹಿತ್ಯ ಮಹತ್ವದ ಕೊಡುಗೆ ನೀಡಿದೆ.ಜಾನಪದ ಮನುಷ್ಯನ ಜೀವನದೊಂದಿಗೆ ಬೆಸೆದುಕೊಂಡಿದೆ ಎಂದ ಅವರು .ತಮ್ಮ ಜನಪ್ರಿಯ ಹಾಡುಗಳಾದ ‘ಕಲಿತ್ತ ಹುಡುಗಿ ಕುದುರೆನಡಗಿ’, ‘ಮಗ ಹುಟ್ಟಾ ನಮ್ಮ ಎನ್ನೊಬ್ಬ ಮಗ ಹುಟ್ಟಾ ನಮ್ಮ’ ಜೋಗಿ ಚಿತ್ರದ ಗೀತೆಗಳನ್ನೊಳಗೊಂಡಂತೆ ಅವರ ಶೈಲಿಯ ಜನಪ್ರಿಯಗೀತೆಗಳ ಗಾಯನದೊಂದಿಗೆ ಜಾನಪದ ಶೈಲಿಯನ್ನು ಮೆಲುಕು ಹಾಕಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರು ಮತ್ತು ಸಾಹಿತಿಗಳೂ ಆದ ಬೆಂಗಳೂರಿನ ಶ್ರೀಮತಿ ಬಿ .ಎಸ್ ಪಾರ್ವತಿ ಮಾತನಾಡಿ ವಿದ್ಯಾರ್ಥಿಗಳ ಯಶಸ್ಸಿಗೆ ಅಗತ್ಯವಾದ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳು ನಿರ್ಧಿಷ್ಟವಾದ ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಿದರೆ,ನಿಗದಿತ ಗುರಿತಲುಪಲು ಸಾಧ್ಯವಾಗುತ್ತದೆ. ಎಂದು ತಿಳಿಸಿದರು.


ಶಿಕ್ಷಕರೂ ಹಾಗೂ ಯಕ್ಷಗಾನ ಭಾಗವತರಾದ ಶ್ರೀ ಎಂ ಎಂ ಮಂಜಪ್ಪ , ಆರಳಗುಪ್ಪೆಯ ಯಕ್ಷಗಾನ ಭಾಗವತರಾದ ಶ್ರೀ ಪುಟ್ಟಸ್ವಾಮಿ ಯವರನ್ನ ಸನ್ಮಾನಿಸಲಾಯಿತು.
ತಿಪಟೂರು ನಗರ ಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಪಿ ಜೆ ರಾಮ ಮೋಹನ್ ತಿಪಟೂರು ,ಮಾಜಿ ಸದಸ್ಯರಾದ ಶ್ರೀ ಸಂಗಮೇಶ ಕಳ್ಳಿಹಾಳ್ ರವರು ಮತ್ತು ಕೆಪಿಸಿಸಿ ಸದಸ್ಯರಾದ ಶ್ರೀ ಯೋಗೇಶ್ ಉಪಸ್ಥಿತರಿದರು.ಸಂಸ್ಥೆಯ ಕಾರ್ಯದರ್ಶಿ ಯಮುನಾ.ಎ.ಆರ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ, ತಿಪಟೂರು ಮತ್ತು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಎಸ್‌ವಿಪಿ ಶಾಲೆಯ ಡಿಂಪು ಕುಮಾರ್ (ಪ್ರಥಮ), ಕೆಸಿಎಸ್ ಶಾಲೆಯ ವರ್ಷ (ದ್ವಿತೀಯ) ಮತ್ತು ನೊಣವಿನಕೆರೆ ಕೆಪಿಎಸ್ ಶಾಲೆಯ ಸಹನ ಕೆ ಬಿ (ತೃತೀಯ) ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಯಮುನ ಎ ಆರ್. ಶ್ರೀ ಎ ಬಿ ರಾಜಶೇಖರ್, ಡಾ. ಬೊಮ್ಮೆಗೌಡ, ಶ್ರೀ ಹರೀಶ್ ಉಪಸ್ಥಿತರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!