ತಿಪಟೂರು:ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ 39ನೇ ರಾಜ್ಯಮಟ್ಡದ ಮಹಿಳಾ ಹಾಗೂ ಪುರುಷರ ಹೊನಲು ಬೆಳಕಿನ ಖೋ ಖೋ ಚಾಂಪಿಯನ್ ಕ್ರೀಡಾಕೂಟದಲ್ಲಿ ಆಳ್ವಾಸ್ ತಂಡ ಪುರುಷ ವಿಭಾಗದಲ್ಲಿ ಪ್ರಥಮಸ್ಥಾನಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ ದ್ವಿತೀಯ ಸ್ಥಾನವನ್ನ ಬೆಂಗಳೂರು ಪೈನಿಯರ್ ಕ್ಲಬ್ ತಂಡ ಪಡೆದುಕೊಂಡಿತು.

ಮಹಿಳೆಯರ ವಿಭಾಗದಲ್ಲಿ ಕುರುಬೂರು ಕಪಿಲಾ ಸ್ಪೋರ್ಡ್ಸ್ ಕ್ಲಬ್ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನ ಬಿಇವೈಎ ಕ್ಲಬ್ ಪಡೆದುಕೊಂಡಿತು.ವಿಜೇತ ತಂಡಗಳಿಗೆ ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಮಠದ ಅಭಿನವ ಶ್ರೀಕಾಡಸಿದ್ದೇಶ್ವರಸ್ವಾಮೀಜಿ .ಕರ್ನಾಟಕ ಖೋಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್,ಕೆಪಿಸಿಸಿ ಸದಸ್ಯ ವಿ.ಯೋಗೇಶ್ .ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಶಿವಪ್ರಸಾದ್ ವಿತರಣೆ ಮಾಡಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೊಣವಿನಕೆರೆ ಕಿರಿಯ ಶ್ರೀಗಳಾದ ಅಭಿನವ ಶ್ರೀ ಕಾಡಸಿದ್ದೇಶ್ವರಸ್ವಾಮೀಜಿ ಕ್ರೀಡೆ ಮನುಷ್ಯನ ಶಕ್ತಿ ಸಾಮರ್ಥ್ಯ ಹಾಗೂ ಬುದ್ದಿಶಕ್ತಿಯ ಪ್ರತೀಕವಾಗಿದೆ. ಮನುಷ್ಯ ದೈಹಿಕವಾಗಿ ಸಧೃಡವಾಗಿದರೆ ಮಾತ್ರ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ.ಪೋಷಕರು ಮಕ್ಕಳನ್ನ ಕ್ರೀಡೆಗಳ ಕಡೆ ಆಸಕ್ತಿ ಬೆಳೆಯುವಂತೆ ಮಾಡಬೇಕು,ಕ್ರೀಡೆ,ದೈಹಿಕ ಕಸರತು ಹಾಗೂ ಯೋಗ ಮನುಷ್ಯನ ಧೀರ್ಘಾಯುಷ್ಯಕ್ಕೆ ಸಹಕಾರಿಯಾಗುತ್ತವೆ.ಕಲ್ಪತರು ನಾಡು ಕ್ರೀಡೆಗೆ ಉತ್ತೇಜನ ನೀಡುತ್ತಾ ಬಂದಿದೆ. ಹಿಂದಿನಿಂದಲೂ ನಡೆದುಕೊಂಡ ಪರಂಪರೆಯನ್ನ ಲೋಕೇಶ್ವರ್ ಮುಂದುವರೆಸುತ್ತಿದ್ದಾರೆ.ನಮ್ಮ ಊರಿನ ಯುವಕರನ್ನ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಜೊತೆಗೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವೇದಿಕೆ ಕಲ್ಪಿಸುತ್ತಾ,ಕ್ರೀಡೆಗೆ ಪ್ರೋತ್ಸಹ ನೀಡುತ್ತಿದ್ದಾರೆ ಎಂದು ತಿಳಿಸಿದರು
ಕರ್ನಾಟಕ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಮಾತನಾಡಿ ಪೋಷಕರು ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು,ಶಾಲೆಯಿಂದ ಮಕ್ಕಳು ಮನೆಗೆ ಬಂದಾಗ ಪಠ್ಯಪುಸ್ತಕ ಪರಿಶೀಲನೆ ಮಾಡದೆ. ಮಕ್ಕಳ ತಿಂಡಿಡಬ್ಬಿ ಪರಿಶೀಲನೆ ಮಾಡಿ. ಅವರು ಹೆಚ್ಚು ದೈಹಿಕವಾಗಿ ಶ್ರಮವಹಿಸಿದ್ದಾಗ ಹಸಿವು ,ಬಾಯಾರಿಕೆ ಜಾಸ್ತಿಯಾಗುತ್ತದೆ.ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ.ತಿಪಟೂರು ಹಿಂದಿನಿಂದಲೂ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿದೆ,ಕಬ್ಬಡಿ ವಾಲಿಬಾಲ್ .ಖೋಖೋ ,ಪುಟ್ ಬಾಲ್ ಸೇರಿದಂತೆ ಅನೇಕ ಕ್ರೀಡೆಗಳನ್ನ ನಡೆಸುವ ಮೂಲಕ ರಾಜ್ಯ ರಾಷ್ಟ್ರ ಮಟ್ಟದ ಆಟಗಾರರನ್ನ ತಾಲ್ಲೋಕಿನಿಂದ ಕೊಡುಗೆ ನೀಡಿದ್ದಾರೆ.ಇನ್ನೂ ಹೆಚ್ಚಿನ ಪ್ರೋತ್ಸಾಹದೊಂದಿಗೆ ನಮ್ಮ ಯುವಕರಿಗೆ ಉತ್ತಮ ಕ್ರೀಡಾವೇದಿಕೆ ನೀಡಲು ಶ್ರಮಪಡುವುದ್ದಾಗಿ ತಿಳಿಸಿದರು

ಕಾರ್ಯಕ್ರಮದಲ್ಲಿ ಮುಖಂಡರಾದ ಕೆಪಿಸಿಸಿ ಸದಸ್ಯ ವಿ.ಯೋಗೇಶ್ವರ್.ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಶಿವಪ್ರಸಾದ್.ಜಗದೀಶ್.ಕಾಂಗ್ರೇಸ್ ಮುಖಂಡ ಮಲ್ಲೇನಹಳ್ಳಿ ಕಾಂತರಾಜು.ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪುಗಣೇಶ್.ತಿಪಟೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಟಿ.ಎಸ್ ಬಸವರಾಜು.ಕಸಪಾ ಅಧ್ಯಕ್ಷ ಬಸವರಾಜು ಮುಂತ್ತಾದವರು ಉಪಸ್ಥಿತರಿದರು
ನಾಲ್ಕುದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 210ಪಂದ್ಯಾವಳಿ ನಡೆಸುವ ಮೂಲಕ ಖೋಖೋ ಇತಿಹಾಸದಲ್ಲಿಯೇ ಇತಿಹಾಸ ನಿರ್ಮಿಸಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ





