ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆಯ ಗ್ರಾಮದ ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಮತ್ತು ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಇಂದಿನಿಂದ ಮಾರ್ಚ್ 01-03-2026ರಿಂದ 04/03 /2026ರವರೆಗೆ ನಡೆಯಲಿದೆ.

ಮಾರ್ಚ್ 01.03.1026ರಂದು ಭಾನುವಾರ 5:00 ಗಂಟೆಗೆ ಧ್ವಜಾರೋಹಣ ಕಂಕಣಧಾರಣೆ ಹಾಗೂ ರಾತ್ರಿ 08 ಗಂಟೆಗೆ ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀಕರಿಯಮ್ಮ ದೇವಿ ಮಧುವಣಗಿತ್ತಿ ಶಾಸ್ತ್ರ ನಡೆಯಲಿದ್ದು
ದಿನಾಂಕ 02ರಂದು ಸೋಮವಾರ ರಂದು ರಾತ್ರಿ 8:00ಗೆ ಹಾಲ್ಕುರಿಕೆ ಶ್ರೀಚಿತ್ರಲಿಂಗೇಶ್ವರಸ್ವಾಮಿ ಹಾಗೂ ಶ್ರೀಕರಿಯಮ್ಮದೇವಿ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ,ಶ್ರೀಪ್ಲೇಗಿನಮ್ಮ ದೇವಿ.ಚೌಳುಕಟ್ಟೆ ಶ್ರೀಚಿತ್ರಲಿಂಗೇಶ್ವರಸ್ವಾಮಿ.ಗೊರಗೊಂಡನಹಳ್ಳಿ ಶ್ರೀ ಬೆಣ್ಣೆನಹಳ್ಳಿ ಪ್ಲೇಗಿನಮ್ಮ ದೇವರುಗಳ ಆಗಮನದೊಂದಿಗೆ ಗಂಗಾಸ್ನಾನ, ಪುಷ್ಪಾಲಂಕರ ಹಾಗೂ ಮಣೆವು.ನಡೆಯಲಿದ್ದು,
ಮಾರ್ಚ್ 03ರಂದು ಶ್ರೀ ಕರಿಯಮ್ಮ ದೇವಿಯವರ ಆರತಿ ಬಾನ. ಶ್ರೀಚಿತ್ರಲಿಂಗೇಶ್ವರಸ್ವಾಮಿ ನೂರೊಂದೆಡೆ ಬೇಟೆಮಣೇವು ಸೇವೆ,
ರಾತ್ರಿ ಗ್ರಾಮದ ಬೀದಿಗಳಲ್ಲಿ ಕಲಾ ತಂಡಗಳ ವಾದ್ಯದೊಂದಿಗೆ, ವಿಶೇಷ ಪುಷ್ಪಾಲಂಕಾರದೊಂದಿಗೆ ಶ್ರೀ ದೇವರುಗಳ ಉತ್ಸವ ನಡೆಯಲಿದೆ.
ಮಾರ್ಚ್ 04 ರಂದು ಮಹಾ ಮಂಗಳಾರತಿಯೊಂದಿಗೆ ಅದ್ದೂರಿ ದೇವರುಗಳ ಮಣೆವು ಹಮ್ಮಿಕೊಂಡಿದ್ದು,ಭಕ್ತಾದಿಗಳು ಮತ್ತು ಗ್ರಾಮಸ್ಥರು ಆಗಮಿಸಬೇಕೆಂದು ಹಾಗೂ ದೇವರುಗಳ ನೂತನ ದೇವಾಲಯದ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ಭಕ್ತಾದಿಗಳು ತನು-ಮನ- ಧನದೊಂದಿಗೆ ಸಹಕಾರ ನೀಡಬೇಕೆಂದು ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಶ್ರೀ ಕರಿಯಮ್ಮದೇವಿ ಸೇವಾ ಪ್ರತಿಷ್ಠಾನ ತಿಳಿಸಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ





