ತಿಪಟೂರು:ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮನಿಯಮಿತ.ತುಮಕೂರು,ಕರ್ನಾಟಕ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಅಡಿ ರೈತರಿಂದ ನೇರವಾಗಿ,ರಾಗಿ ಖರೀದಿ ಮಾಡಲು ತಿಪಟೂರು ನಗರದ ಎಪಿಎಂಸಿ ಯಾರ್ಡ್ ನಲ್ಲಿ ಖರೀದಿ ಕೇಂದ್ರ ಪ್ರರಂಭಿಸಿದೆ.

ಪ್ರತಿ ಕ್ವಿಂಟಲ್ ರಾಗಿ ದರ ರೂ 4886.00ರೂಪಾಯಿ ನಿಗಧಿಗೊಳಿಸಲಾಗಿದೆ.
ನಾಳೆಯಿಂದ ರಾಗಿ ಖರೀದಿ ನೋಂದಣಿ ಪ್ರಾರಂಭವಾಗುತ್ತಿದ್ದು, ಪ್ರತಿ ರೈತರಿಂದ ಒಂದು ಎಕರೆಗೆ 10ಕ್ವಿಂಟಲ್ ನಂತೆ, 50ಕ್ವಿಂಟಲ್ ಮೀರದಂತೆ FAQ ಮಾನದಂಡದ ಗುಣಮಟ್ಟದಲ್ಲಿ ಖರೀದಿ ಮಾಡಲಾಗುತ್ತಿದೆ.ರಾಗಿ ಖರೀದಿ ನೋಂದಣಿ ಹಾಗೂ ಖರೀದಿ ವೇಳೆ ಬಯೋಮೆಟ್ರಿಕ್ ಕಡ್ಡಾಯವಾಗಿದ್ದು.ನೋಂದಾಯಿತ ರೈತನೇ ರಾಗಿ ತರುವುದು ಕಡ್ಡಾಯವಾಗಿದೆ.ರಾಗಿ ಖರೀದಿ ನೋಂದಣಿ ದಿನಾಂಕ 10.10.2025ರಿಂದ ಪ್ರಾರಂಭಗೊಳ್ಳುತ್ತಿದ್ದು,ದಿನಾಂಕ 15.12.2025ರ ವರೆಗೆ ನೋಂದಣಿ ನಡೆಯಲ್ಲಿದ್ದು.ನೋಂದಾಯಿತ ರೈತರಿಂದ ದಿನಾಂಕ 01.01.2026 ರಿಂದ ಖರೀದಿ ಪ್ರಕ್ರಿಯೆ ಆರಂಭವಾಗುತ್ತಿದ್ದು ದಿನಾಂಕ 31.03.2026 ಅಂತ್ಯಕ್ಕೆ ಖರೀದಿ ಪೂರ್ಣಗೊಳ್ಳಲಿದೆ.ನೋಂದಣಿಗಾಗಿ ರೈತರು ಕೃಷಿ ಇಲಾಖೆ ಪ್ರೂಟ್ ಐಡಿ,ಹಾಗೂ ಆಧಾರ್ ತರಬೇಕಾಗಿದ್ದು. ಪ್ರೂಟ್ ಐಡಿ ಇಲ್ಲದೆ ರೈತರ ನೋಂದಣಿಗೆ ಅವಕಾಶ ಇರುವುದಿಲ್ಲ,
ವರದಿ:ಮಂಜುನಾಥ್ ಹಾಲ್ಕುರಿಕೆ









