Spread the love

ತಿಪಟೂರು:ನೊಣವಿನಕೆರೆಯಿಂದ ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು,ತಾಂತ್ರಿಕ ಸಮಸ್ಯೆಗಳ ನಿವಾರಣೆಯಾಗಿವೆ,ಶೀಘ್ರದಲ್ಲಿಯೇ ಯೋಜನೆಗೆ ಚಾಲನೆ ನೀಡಲಾಗುವುದು,ತಿಪಟೂರಿನಿಂದ ಪೈಪ್ ಲೈನ್ ಕಾಮಗಾರಿ ಪ್ರರಂಭಿಸಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ತಾಲ್ಲೋಕು ಪಂಚಾಯ್ತಿ ಆವರಣದಲ್ಲಿ ಆಯೋಜಿಸಿದ ತಾಲ್ಲೋಕು ಯೋಜನೆ ಮತ್ತು ಅಭಿವೃದ್ದಿ ಸಮಿತಿ ಅಧ್ಯಕ್ಷತೆವಹಿಸಿದ ಅವರು ನಗರ ಹಾಗೂ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ನಗರಕ್ಕೆ ನೊಣವಿನಕೆರೆಕೆರೆಯಿಂದ ನೀರು ಪೂರೈಸುವ ಯೋಜನೆಯ ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು.ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು.ನಗರದ ಅಮಾನೀಕೆರೆ ಸೌದರ್ಯಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದ್ದು,ಅಮಾನೀಕೆರೆ ಆವರಣದಲ್ಲಿ 200×300 ಅಳತೆಯ ಗ್ಲಾಸ್ ಹೌಸ್ ನಿರ್ಮಾಣಕ್ಕೆಅನುದಾನ ನೀಡಲಾಗಿದ್ದು.ಎಲ್ಲಾ ಮಹನೀಯರ ಪುತ್ಥಳಿಗಳ ನಿರ್ಮಾಣಕ್ಕೆ ಜಾಗಗುರ್ತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಅಮಾನೀಕೆರೆ ಕೆರೆ ಏರಿ ಶಿಥಿಲವಾಗಿದ್ದು, ದುರಸ್ತಿ ಕಾರ್ಯಕ್ಕೆ ಸೋಮವಾರ ಗುದ್ದಲಿಪೂಜೆ ನೆರವೇರಿಸಲಾಗುವುದು,ತಾಲ್ಲೋಕಿನಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ 400ಕೋಟಿ ಯೋಜನೆ ರೂಪಿಸಲಾಗಿದೆ‌.ಸುಮಾರು 5ಕೋಟಿ ವೆಚ್ಚದಲ್ಲಿ ನಗರದ ಹೃದಯಭಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ.9.5ಕೋಟಿ ವೆಚ್ಚದಲ್ಲಿ ಬೃಹತ್ ಬಂಧಿಖಾನೆ ನಿರ್ಮಾಣಕ್ಕೆ ಜಾಗಗುರ್ತಿಸಲಾಗಿದೆ.ನಗರದ ಸೌದರ್ಯಿಕರಣಕ್ಕೆ ನಗರಸಭೆ ಮೂಲಕ ಕ್ರಮವಹಿಸಲಾಗಿದೆ.ನಗರದ ನಿರ್ಮಾಣವಾಗಿರುವ ಡಾ//ಬಿ.ಆರ್ ಅಂಬೇಡ್ಕರ್ ಭವನ ಹಾಗೂ ಡಾ// ಜಗಜೀವನ್ ರಾಮ್ ಭವನಗಳನ್ನ ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು.ತಾಲ್ಲೋಕಿನ ಅಭಿವೃದ್ದಿಗೆ ಆದ್ಯತೆ ನೀಡಿದ್ದು. ಅಧಿಕಾರಿಗಳು ಸರ್ಕಾರ ನೀಡಿರುವ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಬೇಕು. ತಾಲ್ಲೋಕಿನಲ್ಲಿ ಚಿರತೆ ಹಾವಳಿಹೆಚ್ಚಾಗಿದೆ.ಜನವಸತಿ ಪ್ರದೇಶದಲ್ಲಿ ಪೊದೆಗಳು. ತೆರವುಗೊಳಿಸಿ,ಜನಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು‌ ಎಂದು ಸೂಚಿಸಿದ ಶಾಸಕರು ಹಾಲ್ಕುರಿಕೆ ಸಾರ್ಥವಳ್ಳಿ ಪಶು ಹಾಸ್ಪತ್ರೆಗಳು ಶಿಥಿವಾಗಿದ್ದು ಮರು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು.ತಾಲ್ಲೋಕಿಗೆ ಪ್ರಗತಿಪಥ ಯೋಜನೆ ಅಡಿ28.7ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ 22ಕೋಟಿ ಅನುದಾನ ಮುಂಜೂರು ಮಾಡಲಾಗಿದೆ.ನಗರ ದಿನೇದಿನೆ ಬೆಳವಣಿಗೆ ಹೊಂದುತ್ತಿದ್ದು.ಕಲ್ಲೇಗೌಡನಪಾಳ್ಯ ಎಸ್ಟಿಪಿ ಘಟಕದ ಒತ್ತಡ ಕಡಿಮೆ ಮಾಡಲು,ಪರ್ಯಾಯವಾಗಿ ತಾಲ್ಲೋಕಿನ ಚನ್ನನಕೆರೆ ಬಳಿ ಸಬ್ ಎಸ್ಟಿಪಿ ಘಟಕ ಸ್ಥಾಪನೆಗೆ ಕ್ರಮವಹಿಸಲಾಗುವುದು.ತಾಲ್ಲೋಕಿನ ಅಭಿವೃದ್ದಿಗೆ ಪೂರಕವಾಗಿ ಯೋಜನೆ ಮತ್ತು ಅಭಿವೃದ್ದಿ ಸಮಿತಿ ರಚನೆ ಮಾಡಲಾಗಿದೆ.ಅಧಿಕಾರಿಗಳು ತಮ್ಮ ಇಲಾಖೆಯ ಕೆಲಸಗಳಿಗೆ ವೇಗ ನೀಡಬೇಕು.ಸಭೆಗಳಿಗೆ ತಪ್ಪದೆ ಇಲಾಖೆಯ ಮುಖ್ಯಸ್ಥರುಗಳೇ ಭಾಗವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು
ಸಭೆಯಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್. ಇಒ ಸುದರ್ಶನ್. ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ .ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!