Spread the love

ತಿಪಟೂರು:ಸಹಕಾರಿ ಸಂಘಗಳು ಪರಸ್ಪರ ಸಹಕಾರದೊಂದಿಗೆ ನಡೆದಾಗಿ ಸಂಘ ಹಾಗೂ ಸದಸ್ಯರು ಅಭಿವೃದ್ದಿ ಸಾಧ್ಯ,ಸಂಘದ ಎಲ್ಲಾ ಸದಸ್ಯರು ಹೆಚ್ಚಿನ ಉಳಿತಾಯ ಮಾಡಿ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಬಯಲು ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎನ್ ಭಾನುಪ್ರಶಾಂತ್ ತಿಳಿಸಿದರು


ನಗರದ ಬಯಲು ಸೀಮೆ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅಯೋಜಿಸಿ 1ನೇ ವರ್ಷದ ಸರ್ವಸದಸ್ಯರ ಮಹಾಸಭೆಯಲ್ಲಿ ಮಾತನಾಡಿ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಹಲವಾರು ಸಾಮಾಜಿಕ ಕೆಲಸಗಳನ್ನ ಕಳೆದ 25 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದೆ,ಇನ್ನೂ ಹೆಚ್ಚಿನ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು,ಸಹಕಾರಿ ಸೇವೆಯಲ್ಲಿಯೂ ಹೆಚ್ಚಿನ ಕೆಲಸ ಮಾಡಬೇಕು ಎನ್ನುವ ದೃಷ್ಟಿಯಿಂದ ಸಹಕಾರ ಸಂಘ ಸ್ಥಾಪನೆ ಮಾಡಿದ್ದು.ಸಹಕಾರ ಸಂಘ ಯಶಸ್ವಿಗೊಳ್ಳಬೇಕಾದರೆ,ಶೇರುದಾರರ ಸಹಕಾರ ಅತ್ಯಾಗತ್ಯವಾಗಿದ್ದು, ಸಂಘದಲ್ಲಿ ಹೆಚ್ಚಿನ ಖಾತೆತೆರೆಯುವ ಮೂಲಕ ಹಾಗೂ ಹೆಚ್ಚಿನ ಠೇವಣಿ ಇಡುವ ಮೂಲಕ ಸಂಘದ ಅಭಿವೃದ್ದಿಗೆ ಕೈಜೋಡಿಸ ಬೇಕು ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ವೈಭವಿ ಆಸ್ಪತ್ರೆ ಖ್ಯಾತವೈದ್ಯರಾದ ಡಾ//ಮಧುಸೂಧನ್ ಮಾತನಾಡಿ ಸಹಕಾರ ಸಂಘಗಳ ಅಭಿವೃದ್ದಿಗೆ ಸದಸ್ಯರಲ್ಲಿನ ಪರಸ್ಪರ ಸಹಕಾರಿ ಮನೋಭಾವನೆ ಅಗತ್ಯವಾಗಿದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಹಣಕಾಸಿನ ವ್ಯವಹಾರ ನಡೆಸಬೇಕು, ನಾವು ನಮ್ಮ ದೈನಂದಿನ ಬದುಕಿನಲ್ಲಿ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು, ದುಡಿಯುವ ಆಧಾಯದಲ್ಲಿ ಅಲ್ಪಭಾಗವನ್ನ ಉಳಿತಾಯ ಮಾಡಿದರೆ,ಕಷ್ಟಕಾಲದಲ್ಲಿ ನೆರವಿಗೆ ಬರುತ್ತದೆ ನಿಮ್ಮ ಅಭಿವೃದ್ದಿಗೆ ನೆರವಾಗುತ್ತದೆ.ಎಂದು ತಿಳಿಸಿದರು


ಸಂಘದ ಅಧ್ಯಕ್ಷ ಎಂ.ಆರ್ ಕುಮಾರಸ್ವಾಮಿ ಮಾತನಾಡಿ ಬಯಲು ಸೀಮೆ ಪತ್ತಿನ ಸಹಕಾರ ಸಂಘ ಸ್ಥಾಪನೆಗೊಂಡ ಮೊದಲ ವರ್ಷದಲ್ಲಿಯೇ ಉತ್ತಮ ಸ್ಥಿತಿಯಲ್ಲಿ ನಡೆಯುತ್ತಿದ್ದು,ಸುಮಾರು 65ಲಕ್ಷ ಸಾಲ ನೀಡುವ ಜೊತೆಗೆ ಶೇಕಡ 100ರಷ್ಟು ಮರುಪಾವತಿ ಹೊಂದುತ್ತಿದ್ದು,ಸದಸ್ಯರು ಸಂಘ ಹೆಚ್ಚಿನ ಅಭಿವೃದ್ದಿ ಹೊಂದಲು, ಹೆಚ್ಚಿನ ಹಣ ಠೇವಣಿ ಮಾಡುವ ಜೊತೆಗೆ ಸಂಘದ ವ್ಯವಹಾರದ ಜೊತೆ ಸಕ್ರೀಯವಾಗಿ ತೊದಗಿಸಿಕೊಳ್ಳಬೇಕು.ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಹಳೇಪಾಳ್ಯ ಸದಣ್ಣ,ಹೆಚ್.ಸಿ ನಾಗರಾಜು.ರಂಜಿತ.ಕವಿತಾ ಲತಾಮಣಿ ಯಲಿಗಾರ್ ಪ್ರಾಂಶುಪಾಲರಾದ ಕೆ.ಎನ್ ರೇಣುಕಯ್ಯ.ಮುಖ್ಯಕಾರ್ಯನಿವಾಹಣಾಧಿಕಾರಿ ಪ್ರಶಾಂತ್ ಕರೀಕೆರೆ. ಮುಂತ್ತಾದವರು ಉಪಸ್ಥಿತರಿದರು ಸಭೆಯಲ್ಲಿ ಖ್ಯಾತ ಕಾದಂಬರಿಕಾರ ಸರಸ್ಪತಿ ಸನ್ಮಾನ್ ಎಸ್.ಎಲ್ ಭೈರಪ್ಪ ನವರಿಗೆ ಸಂತಾಪ ಸೂಚಿಸಲಾಯಿತು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!