Spread the love

ತಿಪಟೂರು:ನೆನ್ನೆ ರಾತ್ರಿನಗರದ ಶ್ರೀ ಕಲ್ಲೇಶ್ವರಸ್ವಾಮಿದೇವಾಲಯದ ಆವರಣದಲ್ಲಿ ಯೂರಿಯಾ ತುಂಬಿದ ಲಾರಿಯೊಂದು ಅಕ್ರಮವಾಗಿ ಅಧಿಕ ಬೆಲೆಗೆ ಯೂರಿಯಾ ಮಾರಾಟ ಮಾಡುತ್ತಿದ್ದು,ಸರ್ಕಾರ ನಿಗಧಿಗೊಳಿಸಿದ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ಪತ್ರಿಕಾ ಮಾಧ್ಯಮಗಳಲ್ಲಿ ವರದಿಪ್ರಸಾರವಾಗಿತ್ತು,ತಕ್ಷಣ ತಿಪಟೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಕುಮಾರ್ ನೇತೃತ್ವದ ಕೃಷಿ ಇಲಾಖೆ ಅಧಿಕಾರಿಗಳ ತಂಡ ಕೋಡಿ ಸರ್ಕಲ್ ಶ್ರೀ ಲಕ್ಷ್ಮಿವೆಂಕಟೇಶ್ವರ ಫರ್ಟಿಲೈಸರ್ಸ್ ತಿಪಟೂರು ಗೊಬ್ಬರ ಮಾರಾಟ ಅಂಗಡಿಯಲ್ಲಿ ಮೇಲೆ ದಾಳಿಮಾಡಿದ ಅಧಿಕಾರಿಗಳು,ಅಂಗಡಿಯಲ್ಲಿ ಸರ್ಕಾರದಿಂದ ನಿಗದಿಪಡಿಸಿರುವ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿರುವುದು ಕಂಡುಬಂದಿದೆ.ಅಲ್ಲದೆ ಅಂಗಡಿಯ ಫಲಕದಲ್ಲಿ ಗೊಬ್ಬರದ ಬೆಲೆ ಹಾಗೂ ದಾಸ್ತಾನು ಹಾಕಿತುವುದಿಲ್ಲ.ಸರ್ಕಾರ ನಿಗದಿ ಪಡಿಸಿದ ಸ್ಥಳ ಹೊರತುಪಡಿಸಿ ಬೇರೆಸ್ಥಳದಲ್ಲಿ ವ್ಯಾಪಾರ ಮಾಡಿರುತ್ತಾರೆ,ಕೃಷಿ ಇಲಾಖೆಯ ಅಧಿಕಾರಿಗಳು ಅಂಗಡಿ ಪರಿಶೀಲನೆ ವೇಳೆ ಅಧಿಕಾರಿಗಳಿದಾಖಲೆ ಪತ್ರಗಳನ್ನ ತೋರಿಸದೇ ನಿರ್ಲಕ್ಷ್ಯ ವಹಿಸಿದ್ದು.ಗೊಬ್ಬರ ಮಾರಾಟಕ್ಕೆ ಸೂಕ್ತರಸೀದಿ ಕೊಟ್ಟಿರುವುದಿಲ್ಲ,ಆದರಿಂದ ಶ್ರೀಲಕ್ಷ್ಮಿವೆಂಕಟೇಶ್ವರ ಫರ್ಟಿಲೈಸರ್ಸ್ ಲೈಸನ್ಸ್ ಅಮಾನತ್ತು ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಕುಮಾರ್ ,ತಾಲ್ಲೋಕಿನಲ್ಲಿ ರಸಗೊಬ್ಬರದ ಕೊರತೆ ಇಲ್ಲ,ಈಗಾಗಲೇ ಸಹಕಾರ ಸಂಘಗಳು ಹಾಗೂ ಲೈಸೆನ್ಸ್ ಹೊಂದಿರುವ ಗೊಬ್ಬರ ಮಾರಾಟಗಾರರಿಂದ ಗೊಬ್ಬರ ಮಾರಾಟ ಮಾಡಲಾಗುತ್ತಿದೆ,ಪ್ರತಿ ಎಕರೆ ರಾಗಿ ಬೆಳೆಗೆ 22ಕೆ.ಜಿ ಯೂರಿಯಾ ಹಾಕಿದರೆ ಸಾಕು,ಆದರೆ ರೈತರು ಹೆಚ್ಚು ಹೆಚ್ಚು ಗೊಬ್ಬರ ಹಾಕುವುದರಿಂದ, ಯಾವುದೇ ಪ್ರಯೋಜನ ಆಗುವುದಿಲ್ಲ.ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ಗೊಬ್ಬರ ದೊರೆಯುವಂತ್ತೆ, ಕ್ರಮವಹಿಸಲಾಗುವುದು.ತಾಲ್ಲೋಕಿನಲ್ಲಿ ನಿಯಮಬಾಹಿರವಾಗಿ ಗೊಬ್ಬರ ಮಾರಾಟ ಪ್ರಕರಣಗಳು ಕಂಡುಬಂದರೆ ತಕ್ಷಣ ಕೃಷಿ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!