ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ನವಂಬರ್ .30 ಭಾನುವಾರ ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆ ವತಿಯಿಂದ ರಾಜ್ಯೋತ್ಸವ ಕನ್ನಡ ಹಬ್ಬ ಹಾಗೂ ಪುನೀತಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಏಕಪೋಷಕ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ನಗರದ ಖಾಸಗೀ ಹೋಟೆಲ್ ನಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಕನ್ನಡ ರಕ್ಷಣಾ ವೇದಿಕೆ ಹಾಗೂ ಅಪ್ಪು ಸೇನೆ ರಾಜ್ಯಾಧ್ಯಕ್ಷ ವಿಜಯ್ ಕುಮಾರ್ ಸಿದ್ದಾಪುರ . ಶುದ್ದಕನ್ನಡ ಭಾಷೆ ಉಳಿದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ,ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಗ್ರಾಮೀಣ ಭಾಗದಲ್ಲಿ ಆಚರಣೆ ಮಾಡಬೇಕು.ಕನ್ನಡ ಜಾಗೃತಿ .ಕನ್ನಡ ಭಾಷೆ ನೆಲಜಲಗಳ ಅಭಿಮಾನ ಹೆಚ್ಚಾಗುವಂತೆ ಮಾಡಬೇಕು ಎನ್ನುವ ಉದೇಶದಿಂದ ತಾಲ್ಲೋಕಿನ ಹೊನ್ನವಳ್ಳಿ ಗ್ರಾಮದಲ್ಲಿ
ರಾಜ್ಯೋತ್ಸವ ಅಂಗವಾಗಿ ಪುನೀತಶ್ರೀ ರಾಜ್ಯ ಪ್ರಶಸ್ತಿ ಯನ್ನು ಸಮಾಜ ಸೇವಕ ವಿ.ಯೋಗೀಶ್ , ವೈದ್ಯಕೀಯ ರತ್ನ ಪ್ರಶಸ್ತಿ ಡಾ.ಪವನ್ ಕುಮಾರ್ , ಶಿಲ್ಪಕಲಾ ರತ್ನ ಪ್ರಶಸ್ತಿ ಎಚ್.ಎಸ್.ಆನಂದ್‌ಕುಮಾರ್ , ಗ್ರಾಮಿಣ ಪತ್ರಿಕಾ ವರದಿಗಾರ ಹೊನ್ನವಳ್ಳಿ ಎ.ಆರ್.ನಂಜಪ್ಪನವರಿಗೆ ವಿತರಿಸಲಾಗುವುದು .

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಷಡಕ್ಷರಿ , ನೇರವೇರಿಸಲಿದ್ದು , ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ , ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ , ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಜಿ ಸಚಿವ ಬಿ.ಸಿ.ನಾಗೇಶ್ , ಸಾಲುಮರದ ತಿಮ್ಮಕ್ಕ ಭಾವಚಿತ್ರಕ್ಕೆ
ಮಾಲಾರ್ಪಣೆ ಸಮಾಜ ಸೇವಕ ಲೋಕೇಶ್ವರ್ , ಮುಖ್ಯ ಅತಿಥಿಗಳು ಜೆ.ಡಿ.ಎಸ್.ಮುಖಂಡ ಕೆ.ಟಿ.ಶಾಂತ ಕುಮಾರ್ , ಜಿ.ಪಂ ಮಾಜಿ ಸದಸ್ಯ ಅಶ್ವಥ್‌ನಾರಾಯಣ್ , ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ , ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಆರ್.ವಿಜಯ್ ಕುಮಾ ಸಿದ್ದಾಪುರವಹಿಸಲಿದ್ದು , ಧ್ವಜಾರೋಹಣ ಡಿ.ವೈ. ಎಸ್.ಪಿ. ಜಯಲಕ್ಷ್ಮಿ ನೇರವೇರಿಸಲಿದ್ದು , ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಹೊನ್ನವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸದಸ್ಯರು ನೇರ ವೇರಿಸಲಿದ್ದಾರೆ .
ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಸಂಜೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ . ಹಾಗೂ ಸರಿಗಮಪ , ಕಾಮಿಡಿ ಕಿಲಾಡಿ ತಂಡದಿಂದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ಯುವ ಘಟಕದ ರಾಜ್ಯಾಧ್ಯಕ್ಷ ಏಜೇಶ್ , ಗೌರವಾಧ್ಯ ದಶರಥರಾಜ್ , ಹೋಬಳಿ ಅಧ್ಯಕ್ಷ ಜ್ಞಾನೇಶ್ , ತಾಲ್ಲೂಕು ಅಧ್ಯಕ್ಷ ಪ್ರತಾಪ್ , ನಗರದ ಅಧ್ಯಕ್ಷ ವೆಂಕಟೇಶ್ , ಜಿಲ್ಲಾ ಮುಖಂಡ ಗಣೇಶ್ , ವಿನಯ್ , ಸಹಕಾರ ಸಂಘದ ನಿರ್ಧೇಶಕ ಗಂಗಾಧರ್ ಉಪಸ್ಥಿತರಿದ್ದರು .
ವರದಿ:ಮಂಜುನಾಥ್ ಹಾಲ್ಕುರಿಕೆ







