ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.ತಿಪಟೂರು ಶ್ರೀಕೆಂಪಮ್ಮ ದೇವಿ ರಥಕ್ಕೆ ಪೂಜೆಸಲ್ಲಿಸಿ ಶ್ರೀ ಕೆಂಪಮ್ಮ ದೇವಿ,ಮಾರನಗೆರೆ ಶ್ರೀ ಕೆಂಪಮ್ಮದೇವಿ,ಶ್ರೀಕೊಲ್ಲಾಪುರದಮ್ಮ ದೇವಿ ಹಾಗೂ ಶ್ರೀ ಚಿಕ್ಕಮ್ಮ ದೇವಿಯವರನ್ನ ಅಲಂಕೃತ ತೇರಿನಲ್ಲಿ ಕೂರಿಸಿ ಪೂಜೆಸಲ್ಲಿಸಿ,ನಂತರ ಕೋಡಿ ಸರ್ಕಲ್ ವರೆಗೆ ತೇರನ್ನ ಎಳೆಯುವ ಮೂಲಕ ರಥೋತ್ಸವ ನೆರವೇರಿಸಲಾಯಿತು.
ಹರಕೆಹೊತ್ತ ಭಕ್ತರು ತೇರಿಗೆ ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.ನಂತರ ಶ್ರೀ ಕೆಂಪಮ್ಮ ದೇವಿ,ಮಾರನಗೆರೆ ಶ್ರೀ ಕೆಂಪಮ್ಮ ದೇವಿ ಶ್ರೀ ಕೊಲ್ಲಾಪುರದಮ್ಮ ದೇವಿ ಶ್ರೀ ಚಿಕ್ಕಮ್ಮ ದೇವಿ.ಶ್ರೀ ಧೂತರಾಯಸ್ವಾಮಿ ರವರಿಗೆ ಮಣೇವು ಸೇವೆ ನೆರವೇರಿಸಲಾಯಿತು,ಸಂಜೆ ಸಿಡಿ ಉತ್ಸವ ಹಾಗೂ ಉಯ್ಯಾಲೆ ಉತ್ಸವ ನೆರವೇರಿಸಲಾಯಿತು.
ಜಾತ್ರೆಯಲ್ಲಿ ಆರತಿ ಬಾನ,ಸೇರಿದಂತೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು ಸಾವಿರಾರು ಜನ ಭಕ್ತರು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ಪೂಜೆಸಲ್ಲಿಸಿದರು.




