ತಿಪಟೂರು:ನಗರದ ಡಿ.ದೇವರಾಜು ಅರಸು ಆಡಳಿತ ಭವನದ ಆವರಣದಲ್ಲಿ ತಾಲ್ಲೋಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜು ಅರಸು ರವರ ದಿನಾಚರಣೆ ಆಚರಿಸಲಾಯಿತು.
ಶಾಸಕ ಕೆ.ಷಡಕ್ಷರಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಿ.ದೇವರಾಜು ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ,ರಾಜಕೀಯ ಸಿದ್ದಾಂತಗಳೊಂದಿಗೆ ಯಾರೊಂದಿಗೂ ರಾಜಿಮಾಡಿಕೊಳ್ಳದ ಅವರು ದಿಟ್ಟತನದಿಂದ ಅಧಿಕಾರ ನಡೆಸಿದ್ದಾರೆ,ಹಲವಾರು ಯೋಜನೆಗಳನ್ನ ನೀಡಿ ಅಜರಾಮರರಾಗಿದ್ದಾರೆ. ನಮ್ಮ ಸರ್ಕಾರ ಅರಸುರವರ ಆಶಯಗಳೊಂದಿಗೆ ಆಡಳಿತ ನಡೆಸುತ್ತಿದೆ.ನಾನು ನನ್ನ ಅಧಿಕಾರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ,ಮೂಲಸೌಕರ್ಯಗಳಿಗೆ ಹೆಚ್ಚು ಆಧ್ಯತೆ ನೀಡಿದ್ದೇನೆ.ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಬೇಕು,ಮಕ್ಕಳು ನಿಮ್ಮ ಜವಾಬ್ದಾರಿ ಅರಿತು ವಿದ್ಯಾಭ್ಯಾಸ ಮಾಡಬೇಕು,ತಮ್ಮ ತಂದೆತಾಯಿಗಳು ನಿಮ್ಮ ಬಗ್ಗೆ ನೂರಾರು ಕನಸು ಕಟ್ಟಿಕೊಂಡು ಶಾಲೆಗೆ ಕಳಿಸುತ್ತಾರೆ, ನೀವು ಕಾಲೇಜು ದಿನಗಳನ್ನ ವ್ಯರ್ಥಮಾಡಿಕೊಂಡು ಜೀವನ ಹಾಳುಮಾಡಿಕೊಳ್ಳ ಬೇಡಿ.ಉತ್ತಮ ಶಿಕ್ಷಣ ಪಡೆದ ತಂದೆ ತಾಯಿಗಳಿಗೆ ನೆರವಾಗಿ. ತಿಪಟೂರು ತಾಲ್ಲೋಕು ಶೈಕ್ಷಣಿಕವಾಗಿ ಮುಂದುವರೆದಿರುವ ಕಾರಣ ನಂಜುಡಪ್ಪ ವರದಿಯಲ್ಲಿ ಮುಂದುವರೆದ ತಾಲ್ಲೋಕಿಗೆ ಸೇರಿದು. ಕೆಲವು ಅನುದಾನಗಳು ನಮ್ಮ ಕೈ ತಪ್ಪುತ್ತಿವೆ ಆದರಿಂದ ತಾಲ್ಲೋಕನ್ನ ನಂಜುಂಡಪ್ಪ ವರದಿಯಿಂದ ಕೈ ಬಿಡಬೇಕು ಎಂದು ಅನೇಕಬಾರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಮಾತನಾಡಿ ಡಿ.ದೇವರಾಜ ಅರಸು ಕರ್ನಾಟಕದ ಮರುನಾಮಕರಣದಲ್ಲಿ ಪ್ರಮುಖ ಪಾತ್ರವಹಿಸಿದ ಮಹಾನಾಯಕ,ಉಳುವವನೇ ಭೂಮಿಯ ಒಡೆಯ ಜೀತ ವಿಮುಕ್ತಿಕಾಯ್ದೆ,ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೂಗದಲ್ಲಿ ಮೀಸಲಾತಿ ನೀಡಿ ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣೀಭೂತರಾಗಿದ್ದಾರೆ.ಕರ್ನಾಟಕದ ಸರ್ಕಾರದ ಅನ್ನಭಾಗ್ಯ ಸೇರಿ ಹಲವಾರು ಯೋಜನೆಗಳು ಅರಸುರವರ ಪ್ರೇರಣಿಯಿಂದ ಜಾರಿಗೊಂಡ ಯೋಜನೆಗಳು ಎಂದು ತಿಳಿಸಿದರು.

ತಹಸೀಲ್ದಾರ್ ಮೋಹನ್ ಕುಮಾರ್ ಮಾತನಾಡಿ ಡಿ.ದೇವರಾಜ ಅರಸು ರವರು ತಮ್ಮ ಆಡಳಿತದಲ್ಲಿ ಜಾರಿಗೊಳಿಸಿದ ಯೋಜನೆಗಳು ಸರ್ವಜನಾಂಗಕ್ಕೂ ಮಾದರಿಯಾಗಿವೆ, ಭೂಸುಧಾರಣ ಕಾಯ್ದೆ,ಉಳುವವನೇ ಭೂಮಿಯ ಒಡೆಯ.ಜೀತವಿಮುಕ್ತಿ ಕಾಯ್ದೆ.ಲಕ್ಷಾನೂಲಕ್ಷ ಕುಟುಂಬಗಳಿಗೆ ದಾರಿದೀಪವಾಗಿವೆ. ಬಡಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಿದ ಅವರು ಬಡಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಿದರು. ಹಿಂದುಳಿದವರ್ಗಗಳ ಹರಿಕಾರರಾಗಿ ಪ್ರಾಥಃಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಇಒ ಸುದರ್ಶನ್ ಮಾತನಾಡಿ ಡಿ.ದೇವರಾಜು ಅರಸು ರವರು ಜಾರಿಗೊಳಿಸಿದ ಜನಪರ ಯೋಜನೆಗಳುಜನಮಾನಸದಲ್ಲಿ ಸದಾಕಾಲ ಉಳಿಯುವಂತ್ತೆ ಮಾಡಿವೆ.ಕರ್ನಾಟಕ ಭೂ ಸುಧಾರಣ ಕಾಯ್ದೆ ಲಕ್ಷಾಂತರ ಕುಟುಂಬಗಳಿಗೆ ಜೀವನಕ್ಕೆ ದಾರಿಯಾಗಿವೆ.ಭ್ರಷ್ಠಚಾರ ರಹಿತ ಆಡಳಿತ ನೀಡಿದ ಪ್ರಾಮಾಣಿಕ ರಾಜಕಾರಣಿ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಜಲಜಾಕ್ಷಮ್ಮ ಮಾತನಾಡಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರು ಉಳುವವನೇ ಭೂಮಿ ಒಡೆಯ ಕಾರ್ಯಕ್ರಮದ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಮ ಸಮಾಜ ನಿರ್ಮಾಣದ ರೂವಾರಿಯಾಗಿ ಹಿಂದುಳಿದ ವರ್ಗದವರ ಏಳಿಗೆಗೆ ಧ್ವನಿಯಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯೊಂದಿಗೆ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಅವರು ಕೈಗೊಂಡ ಕಾರ್ಯಕ್ರಮಗಳನ್ನ ಮುಂದುವರೆಸಿರುವ ಸರ್ಕಾರ ಹಲವಾರು ಯೋಜನೆಗಳ ಮೂಲಕ ಹಿಂದುಳಿದ ವರ್ಗಗಳನ್ನ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎನ್ ಕಾಂತರಾಜು.ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್ .ಮುಖಂಡರಾದ ಲೋಕನಾಥ್ ಸಿಂಗ್ ಗೋವಿಂದರಾಜು.ಬಜಗೂರು ಮಂಜುನಾಥ್. ಹಳೇಪಾಳ್ಯ ರವಿಕುಮಾರ್.ಮುಂತ್ತಾದವರು ಉಪಸ್ಥಿತರಿದರು.ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ








