Spread the love

ತಿಪಟೂರು:ನಗರದ ಡಾ//ಬಿ.ಆರ್ ಅಂಬೇಡ್ಕರ್ ಸರ್ಕಲ್ (ಐಬಿ ಸರ್ಕಲ್ ) ಕೆ.ಇ.ಬಿ ಕಚೇರಿ ಮುಂಭಾಗದ ಶ್ರೀ ಶನೇಶ್ವರಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ ಬೆಣ್ಣೆ ಅಲಂಕಾರ ನೆರವೇರಿಸಲಾಯಿತು.ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಸೇರಿದಂತೆ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿನೀಡಿ ಪೂಜೆಸಲ್ಲಿಸಿದರು


ದೇವಾಲಯದ ಮುಖ್ಯಸ್ಥರಾದ ಸ್ವಾಮಿ,ಮುಂತ್ತಾದವರು ಉಪಸ್ಥಿತರಿದರು.
ಶ್ರೀಗುರು ಶನೇಶ್ವರಸ್ವಾಮಿಯವರ 50ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜಾ ಮಹೋತ್ಸವದ ಅಂಗವಾಗಿ ದಿನಾಂಕ 16.08.2025ರಂದು ಶನಿವಾರ ಮಧ್ಯಾಹ್ನ 12.00ಗಂಟೆಗೆ ವಿಶೇಷ ಪೂಜೆ ಅರ್ಚನೆ,ಅಭಿಷೇಕ,ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗ ಬೇಕ್ಕಾಗಿ ಹಾಗೂ ಅನ್ನಸಂತರ್ಪಣೆಗೆ ದವಸ ,ಧಾನ್ಯ,ಸಹಾಯ ಮಾಡಲಿಚ್ಚಿಸುವವರು ದೇವಾಲಯ ಕಮಿಟಿ ಬಳಿ ನೀಡಬೇಕ್ಕಾಗಿ ದೇವಾಲಯ ಕಮಿಟಿ ಮುಖ್ಯಸ್ಥ ಶ್ರೀ ಶಿವಕುಮಾರಸ್ವಾಮಿ ಹಾಗೂ ಅರ್ಚಕರಾದ ಗುರುದಾಸ್ ಮನವಿ ಮಾಡಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!