ತಿಪಟೂರು : ನಗರದ ಸತ್ಯ ಗಣಪತಿ ಮಹೋತ್ಸವದ ಅಂಗವಾಗಿ ನ.19 ರಿಂದ ನ.23 ರವರೆಗೆ ಕಲಾಕೃತಿ ಹಾಗೂ ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ರಕ್ಷಣಾ ವೇದಿಕೆಯ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಲ್ಪತರು ಕ್ರೀಡಾಂಗಣದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ವೇದಿಕೆ ಹೆಸರಿನಲ್ಲಿ ಐದು ದಿನಗಳ ಕಾಲ ಕಲ್ಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಅವರು ಕಲ್ಪೋತ್ಸವ 2025ರ ಅಂಗವಾಗಿ ಸಿನಿಮಾ ನಟಿ ಉಮಾಶ್ರೀಗೆ ಕಲ್ಪತರು ರತ್ನ ಪ್ರಶಸ್ತಿ ಪ್ರಧಾನ, ಸಮಾಜ ಸೇವಕರಿಗೆ, ಸಾಧಕರಿಗೆ, ನಾನಾ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಕಾರ್ಯಕ್ರಮ, ಕ್ರೀಡಾಕೂಟ, ನಾನಾ ಸಾಂಸ್ಕೃತಿಕ ಮತ್ತು ಜಾನಪದ ಸ್ಪರ್ಧೆಗಳು ಜರುಗಲಿದೆ ಎಂದರು.

ಕಲಾಕೃತಿ ಸಂಸ್ಥೆಯ ಅಧ್ಯಕ್ಷ ಕುಮಾರ್ ಆಸ್ವತ್ರೆಯ ವೈದ್ಯ ಶ್ರೀಧರ್ ಮಾತನಾಡಿ ಸಂಸ್ಥೆಯ ವತಿಯಿಂದ ಕಳೆದ ಮೂರು ವರ್ಷಗಳಿಂದ ಒಂದು ದಿನದ ಕಾರ್ಯಕ್ರಮವನ್ನು ಮಾಡಲಾಗುತ್ತಿತ್ತು ಆದರೆ ತುಮಕೂರು ದಸರಾ ರೀತಿಯಲ್ಲಿ ಈ ಬಾರಿ ತಾಲ್ಲೂಕಿನಲ್ಲಿ ಮೂರು ದಿನಗಳ ಕಲ್ಪೋತ್ಸವ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿದ್ದು ಸಾರ್ವಜನಿಕರಿಗೆ ನ.21, 22 ಮತ್ತು 23 ರಂದು 10 ನಿಮಿಷಗಳ ಕಾಲದ ಹೆಲಿಕ್ಯಾಪ್ಟರ್ ರೈಡ್ ಹಾರಾಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರತಿ ನಿತ್ಯ ಸಂಜೆ ಅನುಶ್ರೀ ನಿರೂಪಣೆಯಲ್ಲಿ, ಮಿಮಿಕ್ರಿ ದಯಾನಂದ್, ಗಾಯಕರಾದ ರಾಜೇಶ್‌ಕೃಷ್ಣನ್, ಅನುರಾಧ ಭಟ್, ಸರಿಗಮಪ ತಂಡದಿಂದ ಸಂಗೀತ ಮನರಂಜನಾ ಕಾರ್ಯಕ್ರಮ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡದಿಂದ ನೃತ್ಯ, ಕಾಮಿಡಿ ಕಿಲಾಡಿಗಳ ತಂಡದಿಂದ ಹಾಸ್ಯ ಸಂಜೆ ಮನರಂಜನಾ ಕಾರ್ಯಕ್ರಮಗಳು ಜರುಗಲಿದ್ದು, ವಿಶೇಷ ಆಕರ್ಷಣೆಯಾಗಿ ಸಾರ್ವಜನಿಕರಿಗೆ ನ.21, 22 ಮತ್ತು 23 ಹೆಲಿಕ್ಯಾಪ್ಟರ್ ರೈಡ್ ಹಾರಾಟದ ವ್ಯವಸ್ಥೆ ಮಾಡಲಾಗಿದೆ.
ನ.19 ಬುಧವಾರದಂದು ಯುವ ಸಂಭ್ರಮ ಆಯೋಜಿಸಿದ್ದು ಬೆಳಗ್ಗೆ 9.00ಕ್ಕೆ ಗ್ರಾಮದೇವತೆ ಕೆಂಪಾAಬ ದೇವಾಲಯದಿಂದ ಕಲ್ಪತರು ಕ್ರೀಡಾಂಗಣದವರೆಗೆ ಹೆಲ್ಮೆಟ್ ಧರಿಸಿ, ಜೀವ ಉಳಿಸಿ ಜನ ಜಾಗೃತಿಗಾಗಿ ಮಹಿಳೆಯರಿಂದ ನಗರದಲ್ಲಿ ಬೈಕ್ ರ‍್ಯಾಲಿ, 10:30ಕ್ಕೆ ತೆಂಗು ಉತ್ಪನ್ನಗಳು, ಕೃಷಿ ಸುಧಾರಿಕ ಉಪಕರಣಗಳು, ಆಹಾರ ಪದಾರ್ಥಗಳು, ಕೈಗಾರಿಕೆ ಯಂತ್ರೋಪಕರಗಳು, ಗೃಹ ಬಳಕೆ ವಸ್ತುಗಳು, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟನೆ. ಬೆಳಗ್ಗೆ 11.00 ರಿಂದ ಶಾಲಾ ಮಕ್ಕಳಿಂದ ಚರ್ಚಾಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಸಂಜೆ4.00 ದಾಂಡಿಯಾ ನೃತ್ಯ ಸಂಭ್ರಮ, 6.00ರಿಂದ ಮನರಂಜನಾ ಕಾರ್ಯಕ್ರಮ.
ನ.20 ಗುರುವಾರ ಜಾನಪದ ಸಂಭ್ರಮ ಆಯೋಜನೆಯಿದ್ದು ವಿವಿಧ ಜಾನಪದ ಕಲಾ ತಂಡಗಳೊAದಿಗೆ ಕನ್ನಡಾಂಭೆ ಭಾವಚಿತ್ರ ಹೊತ್ತ ಆನೆ ಅಂಬಾರಿಯ ಅದ್ದೂರಿ ಮೆರವಣಿಗೆ, ಶಾಲಾ ಮಕ್ಕಳಿಗೆ ಸ್ಥಳದಲ್ಲಿ ಚಿತ್ರಕಲೆ ಸ್ಪರ್ಧೆ, ಸಾಕು ಪ್ರಾಣಿಗಳ ಪ್ರದರ್ಶನ, ಶಾಲಾ ಮಕ್ಕಳಿಂದ ಚರ್ಚಾ ಸ್ಪರ್ಧೆ, ಹಿರಿಯ ನಾಗರೀಕರಿಗೆ, ನಿವೃತ್ತ ನೌಕರರಿಗೆ, ಪೌರ ಕಾರ್ಮಿಕರಿಗೆ ಕ್ರೀಡಾಕೂಟ, ಮಕ್ಕಳ ಸಾಹಿತ್ಯ ಸಮ್ಮೇಳನ, ಆರೋಗ್ಯಕ್ಕಾಗಿ ಯೋಗ, ರಂಗಗೀತೆ. ಎಲ್ಲಾ ಕಾರ್ಯಕ್ರಮಗಳ ಉದ್ಘಾಟನೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರು ವಿ.ಸೋಮಣ್ಣ ನೇರವೇರಿಸಲಿದ್ದಾರೆ.
ನ.21 ಶುಕ್ರವಾರ ಕಲಾ ಸಂಭ್ರಮದಲ್ಲಿ ಬೆಳಗ್ಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಪುರುಷರಿಗಾಗಿ ಕ್ರಿಕೆಟ್ ಟೂರ್ನಿ, ಕರಾಟೆ, ಯಕ್ಷಗಾನ ಮತ್ತು ಭರತ ನಾಟ್ಯ, ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ಸಾಧಕರಿಗೆ ಗೌರವ ಸಮರ್ಪಣೆ,

ಸಂಜೆ 5ಕ್ಕೆ ಕಲ್ಪತರು ರತ್ನ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ಉದ್ಘಾಟನೆ. ದಿವ್ಯ ಸಾನಿಧ್ಯ ಕೆರಗೋಡಿ-ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ, ಗುರುಕುಲಾನಂದಾಶ್ರಮ ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಲಿದ್ದು ಉದ್ಘಾಟನೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್. ಅಧ್ಯಕ್ಷತೆಯನ್ನು ಶಾಸಕ ಕೆ.ಷಡಕ್ಷರಿ, ಖ್ಯಾತ ಚಲನಚಿತ್ರ ನಟಿ ಉಮಾಶ್ರೀ, ಕಲಾಕೃತಿ ಅಧ್ಯಕ್ಷ ಡಾ.ಶ್ರೀಧರ್, ಯುವಜನ ಸಬಲೀಕರಣ ಆಯುಕ್ತ ಚೇತನ್.ಆರ್, ಜಿಲ್ಲಾಧಿಕಾರಿಗಳು ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಶೋಕ್.ಕೆ.ವಿ. ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು.ಜಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಟೀಯಲ್ಲಿ ಕಸಾಪ ಅಧ್ಯಕ್ಷ ಬಸವರಾಜಪ್ಪ, ಕರವೇ ರಾಜ್ಯಾಧ್ಯಕ್ಷ ವಿಜಯ್‌ಕುಮಾರ್, ತಾ.ಪಂ ಮಾಜಿ ಅಧ್ಯಕ್ಷ ಸುರೇಶ್, ಶಫೀಉಲ್ಲಾ, ಸಮೀಉಲ್ಲಾ, ಸೊಪ್ಪು ಗಣೇಶ್, ನವಿಲೆ ಪರಮೇಶ್, ರಾಜಣ್ಣ, ಜ್ಯೋತಿ ಗಣೇಶ್, ಮತ್ತಿತ್ತರು ಹಾಜರಿದ್ದರು
ವರದಿ:ಮಂಜುನಾಥ್ ಹಾಲ್ಕುರಿಕೆ








