ತಿಪಟೂರು:ನಗರದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬಸವಜಯಂತಿ ಅಂಗವಾಗಿ ನಡೆದ ವೀರಶೈವ ಲಿಂಗಾಯಿತ ಯುವಜನೋತ್ಸವ ಸಂಭ್ರಮ ಸಡಗರದಿಂದ ನಡೆಯಿತು,ತಿಪಟೂರು ವೀರಶೈವ ಲಿಂಗಾಯಿತ ಸಂಘಟನೆ ಹಾಗೂ ವೀರಶೈವ ಲಿಂಗಾಯಿತ ಯುವವೇದಿಕೆಯಿಂದ ನಡೆಯುತ್ತಿರುವ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಆಯೋಜಿಸಿರು ಯುವಜನೋತ್ಸವದಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಅಗ್ಗ ಜಗ್ಗಾಟ.ಮಡಿಕೆ ಹೊಡೆಯುವ ಸ್ಪರ್ಧೆ. ಗೋಣಿ ಚೀಲ ಓಟ,ರಂಗೀಲಿ ಸ್ಪರ್ಧೆ,ವಚನಗಾಯನ,ರಂಗಗೀತೆ ಗಾಯನ,ಸೇರಿದಂತೆ ಹವಾರು ಕಾರ್ಯಕ್ರಮಗಳು ನಡೆದವು ಥಟ್ ಅಂತ ಹೇಳಿ ಖ್ಯಾತಿಯ ನಾ.ಸೋಮೇಶ್ವರ ರವರು ಮುಖ್ಯಾತಿಥಿಗಳಾಗಿ ಭಾಗವಹಿಸಿ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿಕೊಟ್ಟರು.ತಿಪಟೂರು ಶೇಖರ್ ಬ್ಲಡ್ ಬ್ಯಾಂಕ್ ವತಿಯಿಂದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಭಿರ ನಡೆಸಲಾಯಿತು.

ಕಾರ್ಯಕ್ರಮವನ್ನ ಉದ್ಘಾಟಿಸಿದ ಕಂಚಾಘಟ್ಟ ಷಡಕ್ಷರ ಮಠದ ಪರಮಪೂಜ್ಯ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ ವಿಶ್ವಗುರು ಬಸವಣ್ಣ ನವರ ಚಿಂತನೆಗಳು.ಶರಣಾಧಿ ಪ್ರಮತರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿದೆ,ವೀರಶೈವ ಲಿಂಗಾಯಿತ ಸಮಾಜ ಬಸವಣ್ಣ ನವರ ಆದರ್ಶಗಳನ್ನ ಮೈಗೂಡಿಸಿಕೊಳ್ಳಬೇಕು,ಸಮಾಜ ಹೆಚ್ಚು ಹೆಚ್ಚು ಸಂಘಟಿತರಾಗುವ ಮೂಲಕ ಸಮಾಜದ ಅಶಕ್ತರಿಗೆ ಸಹಾಯಮಾಡಬೇಕು ಎಂದು ತಿಳಿಸಿದರು.

ಯುವಜನೋತ್ಸವದಲ್ಲಿ ಸ್ಪರ್ಶ ಆಸ್ಪತ್ರೆ ವೈದ್ಯ ಚಂದ್ರಮೌಳಿ, ಪೋಲೀಸ್ ಅಧಿಕಾರಿ ದಿನೇಶ್ ಪಾಟೀಲ್, ಬಿಜೆಪಿ ವಕ್ತಾರ ಎಚ್.ಎನ್.ಚಂದ್ರಶೇಖರ್, ದೈಹಿಕ ಶಿಕ್ಷಣ ತಾಲ್ಲೂಕು ಅಧಿಕಾರಿ ಶಮಂತ ಹಾಗೂ ಶೇಖರ್ ಆಸ್ಪತ್ರೆ ವೈಧ್ಯ ಸೋಮ ಶೇಖರ್. ವೀರಶೈವ ಲಿಂಗಾಯಿತ ಸಂಘಟನೆಯ ಅಧ್ಯಕ್ಷ ರೇಣುಕಾರಾಧ್ಯ ಸಂಘಟನೆಯ ಉಪಾಧ್ಯಕ್ಷ ರಘುನಂದನ್, ದಿಬ್ಬನಹಳ್ಳಿ ಶ್ಯಾಮ್‌ಸುಂದರ್, ಕಾರ್ಯದರ್ಶಿ ,ಬ್ಯಾಂಕ್ ಕುಮಾರಸ್ವಾಮಿ, ರಾಜಶೇಖರ್, ಗುರುಸ್ವಾಮಿ, ಮಂಜುನಾಥ್, ದಿವಾಕರ್, ವಸಂತ್ ಕುಮಾರ್, ರೇಣು ಮಾದಿಹಳ್ಳಿ, ಸಿರಿಗಂಧ ಗುರು, ಉಪಸ್ಥಿತರಿದರು
ತೀರ್ಪುಗಾರರಾಗಿ ಶೈಲಜಾ ಶಿವಮೂರ್ತಿ, ಬಸವರಾಜಪ್ಪ, ಶಿವಗಂಗಪ್ಪ ಉದಯ್‌ಶಂಕರ್, ಮಧುಚಂದ್ರ ಕಾರ್ಯ ನಿರ್ವಹಿಸಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ




