Spread the love

ತಿಪಟೂರು:ನಗರದ ದೀಕ್ಷಾ ಹೆರಿಟೇಜ್ ಶಾಲೆಯ ಅಪ್ರಸ್ಥಿ ಬಾಲಕನಿಗೆ ವಿಧ್ಯಾರ್ಥಿಯ ಪೋಷಕರಾದ ಸಿದ್ದರಾಮಯ್ಯ ಬೈಕ್ ಚಲಾಯಿಸಿಲು ಕೊಟ್ಟಿದರು. ತಿಪಟೂರು ನಗರಠಾಣೆ ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಜುಲೈ 01 ರಂದು ವಾಹನ ತಪಾಸಣೆ ವೇಳೆ, ಅಪ್ರಾಪ್ಥಾ ಬಾಲಕನ ವಾಹನ ದಾಖಲೆ ಹಾಗೂ ಡ್ರೈವಿಂಗ್ ಲೈಸೆಂಸ್ ಪರಿಶೀಲನೆ ಮಾಡಿದ್ದಾಗ,ಅಪ್ರಾಪ್ಥಾ ಬಾಲಕ ಬೈಕ್ ಚಲಾಯಿಸುತ್ತಿರುವುದು ಗೊತ್ತಾಗಿ,ಬಾಲಕನ ಪೋಷಕರಾದ ಸಿದ್ದರಾಮಯ್ಯ ಎಂಬುವವರ ಮೇಲೆ ಪ್ರಕರಣ ದಾಖಲಿಸಿ,ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದು, ತಿಪಟೂರು ಎಸ್.ಸಿ.ಜೆ&ಜೆಎಂಎಫ್ ಸಿ .ನ್ಯಾಯಾಲಯ ಬೈಕ್ ಚಾಲಾಯಿಸುತ್ತಿದ್ದ ಬಾಲಕನ ಪೋಷಕರಾದ ಸಿದ್ದರಾಮಯ್ಯನವರಿಗೆ 10 ಸಾವಿರ ರೂಪಾಯಿ ದಂಡವಿದಿಸಿದೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಸಬ್ ಇನ್ಪೆಕ್ಟರ್ ಕೃಷ್ಣಪ್ಪ ನ್ಯಾಯಾಲಯದ ತೀರ್ಪು ಅಪ್ರಾಪ್ಥಾ ಮಕ್ಕಳಿಗೆ ಬೈಕ್ ಹಾಗೂ ಕಾರುಗಳನ್ನ ಚಾಲಯಿಸಲು ಕೊಡುವವರಿಗೆ ಎಚ್ಚರಿಕೆಯ ಘಂಟೆಯಾಗಿದ್ದು.ಯಾವುದೇ ಕಾರಣಕ್ಕೂ ಮಕ್ಕಳಿಗೆ ಬೈಕ್ ಚಲಾಯಿಸಲು ಕೊಡಬೇಡಿ,ಅಪ್ರಾಪ್ಥಾ ಮಕ್ಕಳು ಮಾಡುವ, ಅಪರಾಧ ಹಾಗೂ ಅಪಘಾತಗಳಿಗೆ ಪೋಷಕರೇ ನೇರವಾಗಿ ಹೊಣೆಗಾರರಾಗ ಬೇಕಾಗುತ್ತದೆ.ಕಡ್ಡಾಯವಾಗಿ ವಾಹನಗಳ ದಾಖಲೆಗಳಾದ ಡ್ರೈವಿಂಗ್ ಲೈಸೆಂಸ್.ಇನ್ಯೂರೆನ್ಸ್.ಮಾಡಿಸಿಕೊಳ್ಳಿ.ವಾಹನ ಚಲಾಯಿಸುವಾಗ ಸರ್ಕಾರದ ರಸ್ತೆ ಸುರಕ್ಷತಾ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿದರೆ,ಯಾವುದೇ, ಅವಗಡಗಳು ಸಂಬವಿಸುವುದಿಲ್ಲ.ಅನಿರೀಕ್ಷಿತ ಅಪಘಾತಗಳಾದಾಗ,ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ರಕ್ಷಣೆ ದೊರೆಯುತ್ತದೆ ಎಂದು ತಿಳಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!