Spread the love

ತುಮಕೂರು :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ತುಮಕೂರು ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷರಾದ ಶ್ರೀ ಎನ್‌ . ನರಸಿಂಹರಾಜುರವರು ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಹುದ್ದೆಯ ಪ್ರಭಾರವನ್ನು ತಾತ್ಕಾಲಿಕವಾಗಿ ಮತ್ತೊಬ್ಬರಿಗೆ ವಹಿಸಿಕೂಡುವಂತೆ ಉಲ್ಲೇಖಿತ ಪತ್ರದಲ್ಲಿ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿರುತ್ತಾರೆ .


ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀ ಎನ್‌ . ನರಸಿಂಹರಾಜುರವರ ಉಲ್ಲೇಖಿತ ಮನವಿಯಂತೆ ಹಾಗೂ ಸಂಘದ ಬೈಲಾ ನಿಯಮ 18 ( ಎ ) ( 31 ) ( 32 ) ರ ರೀತ್ಯಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ತಾಲ್ಲೂಕು ಶಾಖೆ, ತಿಪಟೂರು ಅಧ್ಯಕ್ಷರಾದ ಶ್ರೀ ಹೆಚ್. ಈ ರಮೇಶ್ , ಸಹ ಶಿಕ್ಷಕರು , ಶಾಲಾ ಶಿಕ್ಷಣ ಇಲಾಖೆ , ತಿಪಟೂರು ತಾಲ್ಲೂಕು , ತುಮಕೂರು ಜಿಲ್ಲೆ ಇವರನ್ನು ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ , ತುಮಕೂರು ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ ಹುದ್ದೆಗೆ ಪ್ರಭಾರದಲ್ಲಿ ನೇಮಿಸಿ ಆದೇಶಿಸಿದೆ .
ಪ್ರಭಾರ ಜಿಲ್ಲಾಧ್ಯಕ್ಷರು ರಾಜ್ಯ ಸಂಘದ ನಿರ್ದೇಶನದಂತೆ ಹಾಗೂ ಬೈಲಾ ರೀತ್ಯಾ ಜಿಲ್ಲಾ ಶಾಖೆಯ ಜವಾಬ್ದಾರಿಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!