Spread the love

ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ವತಿಯಿಂದ ಸರ್ಕಾರಿ ಶಾಲೆಗೆ ಒಂದು ಕೋಟಿ ದಾನ

ತಿಪಟೂರು : ಬೆಂಗಳೂರಿನ ಜಯನಗರದ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ವತಿಯಿಂದ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ ವಿಭಾಗ) ಶಾಲೆಯಲ್ಲಿ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ 6 ತರಗತಿ ಕೊಠಡಿಗಳ ನಿರ್ಮಾಣ ಕಾರ್ಯಕ್ರಮದ ಭೂಮಿ ಪೂಜೆಯನ್ನು ಗುರುವಾರ ಶಾಸಕ ಕೆ.ಷಡಕ್ಷರಿ ನೇರವೇರಿಸಿದರು.


ಭೂಮಿ ಪೂಜೆಯ ನೇರವೇರಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ನೊಣವಿನಕೆರೆ ಶಾಲೆಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಒಂದು ಕೋಟಿ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣವನ್ನು ಮಾಡುತ್ತಿರುವುದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿನ ಮಕ್ಕಳ ಪ್ರಗತಿಗೆ ತುಂಬಾ ಅನುಕೂಲವಾಗಿದೆ, ಇಲ್ಲಿಯ ಶಿಕ್ಷಕರು ಶ್ರಮವಹಿಸಿ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ಪ್ರತಿವರ್ಷ ಇಲ್ಲಿಯ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಅರ್ಥಪೂರ್ಣ ಎಂದು ತಿಳಿಸಿದರು.


ಪ್ರಸ್ತುತ ಈ ಶಾಲೆಯಲ್ಲಿ 702 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಶಾಲೆಯ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದು, ಹೆಚ್ಚಿನ ಆಸಕ್ತಿ ತೋರಿದ್ದಾರೆ. ಅವರು ಉತ್ತಮ ನಿಯಂತ್ರಣವನ್ನು ಕಾಪಾಡಿಕೊಂಡಿದ್ದಾರೆ ಹಾಗೂ ಬೋಧನಾ ಗುಣಮಟ್ಟ ಶ್ಲಾಘನೀಯವಾಗಿದೆ. ಅಲ್ಲದೆ, ಸಂಪೂರ್ಣ ಆವರಣದಲ್ಲಿ ಅತ್ಯುತ್ತಮ ಶಿಸ್ತು ಕಂಡುಬAದಿದೆ.
ಈ ಯೋಜನೆಗೆ ಅಗತ್ಯವಿರುವ ನಿಧಿಯನ್ನು (ಔSಂAಖಿ ) ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ವತಿಯಿಂದ ದಾನಿಗಳಾದ ಶ್ರೀಮತಿ ಅನುರಾಧಾ ಜಗದೀಶ್ ಮತ್ತು ಶ್ರೀ ಬಿ.ವಿ. ಜಗದೀಶ್ (ಅಮೇರಿಕಾ), (ಅಮೇರಿಕಾ) ಹಾಗೂ ಶ್ರೀ ಸಂಜೀವ್ ಸರ್ದಾನ ಇವರಿಂದ ಸಂಗ್ರಹಿಸಿದ್ದು ಭೂಮಿ ಪೂಜೆ ಸಮಾರಂಭವನ್ನು 4ನೇ ಸೆಪ್ಟೆಂಬರ್ ಗುರುವಾರ ನೇರವೇರಿತು. ಹಾಗೂ 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಉದ್ದೇಶವಿದೆ.
ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಔಟಿe Sಛಿhooಟ ಚಿಣ ಚಿ ಖಿime Iಟಿಛಿ. (ಔSಂAಖಿ”) ಭಾರತದಲ್ಲಿ ಗ್ರಾಮೀಣ ಶಾಲೆಗಳನ್ನು ಪುನರ್‌ನಿರ್ಮಿಸಲು ಮತ್ತು ಉತ್ತಮ ಶಿಕ್ಷಣವನ್ನು ಎಡ್‌ಟೆಕ್ ವೇದಿಕೆಯ ಮೂಲಕ ಒದಗಿಸಲು ಬದ್ಧವಾಗಿರುವ ಒಂದು ಎನ್‌ಜಿಒ. ಇದು 2003ರಲ್ಲಿ ಅಮೇರಿಕಾದಲ್ಲಿ ಸ್ಥಾಪಿತವಾಗಿದ್ದು, 2011ರಲ್ಲಿ ಬೆಂಗಳೂರಿನಲ್ಲಿ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಶೈಕ್ಷಣಿಕ ಧರ್ಮದತ್ತಿ ಅನ್ನು ಸ್ಥಾಪಿಸಲಾಯಿತು.
ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಉದ್ದೇಶವೆಂದರೆ ಗ್ರಾಮೀಣ ಭಾರತದಲ್ಲಿ ಮಕ್ಕಳಿಗೆ ಸುರಕ್ಷಿತ ಹಾಗೂ ಸ್ವಚ್ಛವಾದ ಕಲಿಕಾ ವಾತಾವರಣ ಒದಗಿಸುವ ಮೂಲಕ ಶಿಕ್ಷಣದಲ್ಲಿ ನಗರ-ಗ್ರಾಮ ಅಂತರವನ್ನು ಕಡಿಮೆ ಮಾಡುವುದು. ಇದಕ್ಕಾಗಿ ತರಗತಿ ಕೊಠಡಿಗಳು. ಶೌಚಾಲಯಗಳು ಮತ್ತು ಅಡುಗೆಮನೆಗಳನ್ನು ನಿರ್ಮಿಸಲಾಗುತ್ತದೆ.
ಔSಂAಖಿ 3 ಔಆISI (ಔSಂAಖಿ ಆigiಣಚಿಟ Sಛಿhooಟ Iಟಿಜಿಡಿಚಿsಣಡಿuಛಿಣuಡಿe) ಎಂಬ ಎಡ್‌ಟೆಕ್ ಕಾರ್ಯಕ್ರಮವನ್ನು ಪ್ರತಿ 10 ಶಾಲೆಗಳ ಕ್ಲಸ್ಟರ್‌ಗಳಿಗೆ ಒದಗಿಸುತ್ತದೆ. ಇದರ ಅಡಿಯಲ್ಲಿ ಜಾಲ ಸಂಪರ್ಕ, ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳು, ಶಿಕ್ಷಕರಿಗೆ ಲ್ಯಾಪ್‌ಟಾಪ್‌ಗಳು, ಶಾಲೆಗಳಿಗೆ ಸ್ಮಾರ್ಟ್ ಟಿವಿಗಳು ಹಾಗೂ ಎಐ ಸಾಧನಗಳು ಮತ್ತು ಗೇಮಿಫಿಕೇಶನ್‌ನೊಂದಿಗೆ ನಿಯಮಿತ ತರಬೇತಿಗಳನ್ನು ನೀಡಲಾಗುತ್ತದೆ.
ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಭಾರತದಲ್ಲಿ 10 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಝಾರ್ಖಂಡ್, ಬಿಹಾರ, ಮೇಘಾಲಯ, ಮಣಿಪುರ ರಾಜ್ಯಗಳ 1,35.000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದೆ. ಇದಕ್ಕೆ ನಿಷ್ಠಾವಂತ ಸ್ವಯಂಸೇವಕರು, ವೃತ್ತಿಪರರು, ವೈಯಕ್ತಿಕ ದಾನಿಗಳು, ಅSಖ ಕಾರ್ಯಕ್ರಮಗಳು ಹಾಗೂ ರಾಜ್ಯ ಸರ್ಕಾರಗಳ ಸಹಾಯ ದೊರಕಿದೆ.
ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಶಾಲೆಗಳ ಆಯ್ಕೆ ಪ್ರಕ್ರಿಯೆಯನ್ನು ಕಟ್ಟುನಿಟ್ಟಾದ ಮಾನದಂಡಗಳನ್ನು ಅನುಸರಿಸುತ್ತದೆ. ಮೂಲ ತಂಡದ ಮಾರ್ಗದರ್ಶನದೊಂದಿಗೆ, ಇಂಜಿನಿಯರಿAಗ್ ಮತ್ತು ಕಾನೂನು ಪರಿಶೀಲನೆಗಳನ್ನು ಒಳಗೊಂಡಿವೆ. ಪ್ರತಿ ಹಂತದಲ್ಲಿಯೂ ಗುಣಮಟ್ಟದ ಪರಿಶೀಲನೆಗಳು ಮತ್ತು ಸ್ಥಿರ ನಿರ್ಮಾಣ ಕ್ರಮಗಳೊಂದಿಗೆ ಯೋಜನೆಯನ್ನು ಸಂಪೂರ್ಣಗೊಳಿಸಿ ಹಸ್ತಾಂತರಿಸುವವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಆಡಳಿತ ವೆಚ್ಚಗಳು ಅತ್ಯಂತ ಕಡಿಮೆ ಇರುತ್ತವೆ ಮತ್ತು ಆರಂಭದಿAದ ಅಂತ್ಯವರೆಗೂ ಸಂಪೂರ್ಣ ಪಾರದರ್ಶಕತೆ ಕಾಪಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಹಿರಿಯ ಸ್ವಯಂಸೇವಕ ಮತ್ತು ಚಾಂಪಿಯನ್ ವೀರಣ್ಣಗೌಡರು, ಸಲಹೆಗಾರ ಬಾಲಕೃಷ್ಣರಾವ್, ಕಾರ್ಯಾಚರಣೆಯ ಉಪಾಧ್ಯಕ್ಷ ಅಶ್ವಿನ್‌ರಾವ್, ಎಂಜಿನಿಯರ್ ಶ್ರೀನಿವಾಸ್, ಐಐಎಮ್ ದರ್ಶನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ್, ಸದಸ್ಯರಾದ ಹರೀಶ್, ರಘುಚಂದನ್, ಎಸ್‌ಡಿಎಂಸಿ ಉಪಾಧ್ಯಕ್ಷ ದೊಡ್ಡರಂಗಪ್ಪ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರ್, ಪ್ರಾಂಶುಪಾಲರಾದ ಮಂಜುನಾಥ್, ಮುಖ್ಯೋಪಾಧ್ಯಾಯ ಮಧುಸೂದನ್, ಪದವೀಧರ ಮುಖ್ಯ ಶಿಕ್ಷಕರಾದ ಎಸ್.ಆರ್.ಸುರೇಶ್, ಎಸ್‌ಡಿಎಂಸ ಸದಸ್ಯರು , ಗ್ರಾಮಸ್ಥರು, ಪೋಷಕರು, ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!