ತಿಪಟೂರು: ಪಕ್ಷದ ಸಿದ್ದಾಂತ ಹಾಗೂ ಪಕ್ಷದ ನಾಯಕ ನಿಲುವು ಬೆಂಬಲಿಸುವುದು, ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಕರ್ತವ್ಯ,ನಮ್ಮ ಪಕ್ಷದ ವರಿಷ್ಠನಾಯಕ ರಾಹುಲ್ ಗಾಂಧಿಯವರ ನಿಲುವಿಗೆ ನಮ್ಮ ಬೆಂಬಲವಿದೆ ಈ ನಿಟ್ಟಿನಲ್ಲಿ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಟ್ರಸ್ಟ್ ನ ಟ್ರಸ್ಟಿಯಾಗಿ ಆರ್.ಎಸ್.ಎಸ್ ಕಾರ್ಯಕರ್ತ ಡಾ//ಶ್ರೀಧರ್ ನೇಮಕಕ್ಕೆ ನಾನು ಸೇರಿದಂತೆ ನಮ್ಮ ಪಕ್ಷದ ಕಾರ್ಯಕರ್ತರ ವಿರೋಧವಿದ್ದು,ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಾಗೂ ಸರ್ಕಾರಕ್ಕೆ ಪತ್ರಬರೆಯಲಾಗಿತ್ತು.ಕಾಂಗ್ರೇಸ್ ಕಾರ್ಯಕರ್ತರ ಭಾವನೆಗೆ ಸ್ವಂದಿಸಿದ್ದು,ಸರ್ಕಾರ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆಗಳು ಎಂದು ಮಾಜಿ ಟೂಡ ಅಧ್ಯಕ್ಷ ಹಾಗೂ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸಿ.ಬಿ ಶಶಿಧರ್ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು ಡಾ//ಶ್ರೀಧರ್ ಬಗ್ಗೆ ನನಗೆ ವಯುಕ್ತಿಕವಾಗಿ ವಿರೋಧವಿಲ್ಲ.ಆದರೆ ಆರ್.ಎಸ್ .ಎಸ್ ಕಾರ್ಯಕರ್ತರು ಹಾಗೂ ಆರ್.ಎಸ್.ಎಸ್ ಬಗ್ಗೆ ಮೃದು ಧೋರಣೆ ಹೊಂದಿರುವವರನ್ನ ಸರ್ಕಾರದ ಹಾಗೂ ಪಕ್ಷದ ಯಾವುದೇ ಚಟುವಟಿಕೆಯಿಂದ ಹೊರಗಿಡಬೇಕು ಎನ್ನುವುದು ನಮ್ಮ ಪಕ್ಷ ಹಾಗೂ ನಮ್ಮ ನಾಯಕರ ನಿಲುವು,ನಾಯಕರ ನಿಲುವಿಗೆ ಬೆಂಬಲ ಹಾಗೂ ಸಹಕಾರ ನೀಡುವುದು ಕಾಂಗ್ರೇಸ್ ಕಾರ್ಯಕರ್ತರ ಜವಾಬ್ದಾರಿಯಾಗಿದೆ.
ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ.ಆರ್.ಎಸ್.ಎಸ್. ಸಂಘಟನೆ ಕಾಂಗ್ರೇಸ್ ಪಕ್ಷದ ಸಮಾನತೆ ಸಿದ್ದಾಂತಕ್ಕೆ ವಿರೋಧವಾಗಿದೆ.ಅಲ್ಲದೆ.ದೇಶದ ಸಂವಿಧಾನ,ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದ್ದು.ಮಹತ್ಮಾಗಾಂಧೀಜಿಯವರ ಚಿಂತನೆಗಳಿಗೆ ವಿರೋಧವಿರುವ ಸಂಘಟನೆಯನ್ನ ನಾವು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.ಈ ಹಿಂದೆ ನಮ್ಮ ತಾಲ್ಲೋಕಿನ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪಠ್ಯಪುಸ್ತಕ ಪರೀಷ್ಕರಣೆ ವಿಚಾರದಲ್ಲೂ ನಮ್ಮ ಪ್ರಬಲವಾಗಿ ಪಕ್ಷದ ಸೈದಾಂತಿಕ ನೆಲೆಗಟ್ಟಿನಲ್ಲಿ ಹೋರಾಟಮಾಡಿದ್ದೇವೆ.ನಾವು ನಮ್ಮ ಸಿದ್ದಾಂತಕ್ಕೆ ಬದ್ದವಾಗಿದ್ದು ಕಾಂಗ್ರೇಸ್ ಪಕ್ಷ ಹಾಗೂ ಮುಖ್ಯಮಂತ್ರಿಗಳು ಕಾಂಗ್ರೇಸ್ ಪಕ್ಷದ ಭಾವನೆಗಳಿಗೆ ಸ್ಪಂದಿಸಿರುವುದು ಸ್ವಾಗರ್ತಾರ್ಹವಾಗಿದೆ.ನಾನು ಮುಖ್ಯಮಂತ್ರಿಗಳಾದಿಯಾಗಿ ಸರ್ಕಾರ ಹಾಗೂ ಪಕ್ಷವನ್ನ ಅಭಿನಂದಿಸುತ್ತೇನೆ.ಎಂದು ತಿಳಿಸಿದರು.









