ತಿಪಟೂರು:ಕಲ್ಪತರು ನಾಡ ಹಬ್ಬ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಲ್ಪೋತ್ಸವ ಜಂಬೂಸವಾರಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ನಗರದ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಾಲಯದಲ್ಲಿ ಪೂಜೆಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಶ್ರೀ ಕೆಂಪಮ್ಮ ದೇವಾಲಯದಿಂದ ಹೊರಟ ಮೆರವಣಿಗೆ ಕೋಡಿಸರ್ಕಲ್,ದೊಡ್ಡಪೇಟೆ ಮೂಲಕ ಬಿ.ಹೆಚ್ ರಸ್ತೆ .ಡಾ//ಬಿ.ಆರ್ ಅಂಬೇಡ್ಕರ್ ವೃತ್ತ. ಹಾಸನ ಸರ್ಕಲ್,ಮೂಲಕ ಕಲ್ಪತರು ಕ್ರೀಡಾಂಗಣದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮಿ ಆನೆ ನಾಡದೇವತೆ ಭುವನೇಶ್ವರಿ ಭಾವಚಿತ್ರ ಹೊತ್ತು ಸಾಗುವಮೂಲಕ ಜನಸಾಗದ ನಡುವ ಹೆಜ್ಜೆ ಹಾಕಿದಳು.

ಮೆರವಣಿಗೆಯಲ್ಲಿ ಪುರದಬಸವೇಶ್ವರ ಬೆಳ್ಳಿರಥದ ಉತ್ಸವ.ನಂದಿ ಧ್ವಜ ಕುಣಿತ.ಲಿಂಗದ ವೀರರ ಕುಣಿತ .ನಾಸೀಕ್ ಡೋಲ್.ಡೊಳ್ಳು ಕುಣಿತ.ತಮಟೆವಾಧ್ಯ.ಚಿಟ್ಟೆಮೇಳ ಸೇರಿದಂತೆ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದರೆ.ಪೂರ್ಣಕುಂಭಹೊತ್ತ ಮಹಿಳೆಯರು ಹಾಗೂ ಸಾಂಪ್ರದಾಯಿಕ ಪೇಟಧರಿಸುವ ಮೂಲಕ ಯುವತಿಯರು ಹಾಗೂ ಮಹಿಳೆಯರು ಗಮನಸೆಳೆದರೆ. ಮೆರವಣಿಗೆಯಲ್ಲಿ ಕುದುರೆ ಸಾವರಿ.ಬಸವನ ಸವಾರಿ ಗಮನ ಸೆಳೆದವು.
ಶಾಸಕ ಕೆ.ಷಡಕ್ಷರಿ ಜಂಬೂಸವಾರಿಗೆ ಪೂಜೆಸಲ್ಲಿಸಿದರು
ಮೆರವಣಿಗೆಯಲ್ಲಿ ಖ್ಯಾತ ವೈದ್ಯರಾದ ಡಾ//ಶ್ರೀಧರ್.ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ .ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್.ನಗರಸಭೆ ಆಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಡಿವೈಎಸ್ಪಿ ಜಯಲಕ್ಷ್ಮಿ ಶಿವಾನಂದ್.ವಲಯ ಅರಣ್ಯ ಸಂರಕ್ಷಣಾಧಿಕಾರಿ ಭರತ್.ಅರಣ್ಯಾಧಿಕಾರಿ ಮಧು.ಕಾಂಗ್ರೇಸ್ ಯುವ ಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ.ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ







