ತಿಪಟೂರು : ತಿಪಟೂರು ತಾಲೂಕು ಹೊನ್ನವಳ್ಳಿ ಹೋಬಳಿ ಕರಿಕೆರೆ ಮಜುರೆ ಅಂಚೆಕೊಪ್ಪಲು ಗ್ರಾಮದಲ್ಲಿ ರಾತ್ರಿ 2:45ರ ಚಿರತೆಯೊಂದು ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ,

ಬಿದಿರೆಗುಡಿ.ಕರೀಕೆರೆ ಅಂಚೆಕೊಪ್ಪಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿತ್ತು, ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗುತ್ತಿದ್ದ ಚಿರತೆಗಳು ನಾಯಿಗಳು.ಕುರಿ,ಕೋಳಿ ಸೇರಿದಂತೆ ಸಾಕು ಪ್ರಾಣಿಗಳನ್ನ ತಿಂದುಹಾಕುತ್ತಿದ್ದವು. ಚಿರತೆ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಅಂಚೆಕೊಪ್ಪಲು ಗ್ರಾಮದ ತೋಟದ ಸಾಲಿನಲ್ಲಿ ಚಿರತೆ ಬೋನನ್ನು ಇಡಲಾಗಿತ್ತು, ಆದರೆ ಸುಮಾರು ನಾಲ್ಕೈದು ದಿನ ಆದರೂ ಚಿರತೆ ಬೋನಿಗೆ ಬೀಳದೆ ಗ್ರಾಮಕ್ಕೆ ನುಗ್ಗಿ ಸಾಕುಪ್ರಾಣಿಗಳನ್ನ ತಿಂದು ಹಾಕುತ್ತಿತು.ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಯುವಕರು ಪಹಳಿಯಲ್ಲಿ ಕಾವಲು ಕಾಯ್ದು,ಚಿರತೆ ಚಲನವಲನ ಗಮನಿಸಿ ಊರಿನಿಂದ ಹೊರಗಡೆ ಇಡಲಾಗಿದ, ಬೋನನ್ನು ಗ್ರಾಮದೊಳಗೆ ತಂದು ಚಿರತೆ ಸಂಚರಿಸುವ ಮಾರ್ಗದಲ್ಲಿ ಇಟ್ಟಿದ್ದು.ಆಹಾರ ಅರಸಿ ಬಂದ ಚಿರತೆಯನ್ನ ಬೋನಿನಲ್ಲಿ ಸೆರೆಯಾಗಿದ್ದು,ತಕ್ಷಣ ಚಿರತೆ ಸೆರೆಸಿಕ್ಕಿರುವ ವಿಷಯವನ್ನ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಚಿರತೆ ಬಿದ್ದ ಬೋನಿಗೆ ಸುತ್ತಮುತ್ತಲಿನ ಏಳೆಂಟು ಗ್ರಾಮದ ಗ್ರಾಮಸ್ಥರು ಬೆಳಗ್ಗೆ 5:00 ಘಂಟೆಯಿಂದ ಚಿರತೆಯನ್ನು ನೋಡಲು ಪುಟಾಣಿ ಮಕ್ಕಳೊಂದಿಗೆ ಗ್ರಾಮಕ್ಕೆ ಸಾವಿರಾರು ಜನ ಆಗಮಿಸಿದ್ದರು,
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೇಲಾಧಿಕಾರಿಗಳ ಸೂಚನೆಯಂತೆ ಚಿರತೆ ಸ್ಥಳಾಂತರಕ್ಕೆ ಕ್ರಮವಹಿಸಲಾಗಿದೆ.
ಇನ್ನೂ ಹೋಗದ ಆತಂಕ : ಇನ್ನು ಎರಡು ಮೂರು ಚಿರತೆಗಳು ಗ್ರಾಮಸ್ಥರ ಕಣ್ಣಿಗೆ ಕಂಡಿದ್ದು ಹಾಗಾಗಿ ಜನರಲ್ಲಿ ಭಯದ ವಾತಾವರಣ ಸಹ ಸೃಷ್ಟಿಯಾಗಿದೆ, ಚಿರತೆಯ ಹಾವಳಿಯಿಂದ ಸುಮಾರು ಟಗರು ಕುರಿ, ಮೇಕೆ,ಬಾತುಕೋಳಿ, ಕೋಳಿಯನ್ನು ತಿಂದಿದ್ದು ಗ್ರಾಮಸ್ಥರಾದ ಮಂಜುನಾಥ್ ಎಂಬವರಿಗೆ ಐವತ್ತು ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ,
ವರದಿ:ಮಂಜುನಾಥ್ ಹಾಲ್ಕುರಿಕೆ




