Spread the love

:ಮಾದಕವಸ್ತುಗಳಿಂದವಿದ್ಯಾರ್ಥಿಗಳು,ದೂರವಿರಬೇಕು,ಮಾದಕವಸ್ತುಗಳಿಂದ ಮನುಷ್ಯನ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ಜೊತೆಗೆ,ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳುವ ಸಂಭವವಿರುತ್ತದೆ ಮಾದಕ ಚಟಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ತಿಪಟೂರು ನಗರಪೊಲೀಸ್ ಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್ ಕರೆ ನೀಡಿದರು.


ತಿಪಟೂರು ನಗರಠಾಣೆಯಲ್ಲಿ ಮಾದಕವಸ್ತುಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ನಡೆಸಲಾಯಿತು.ವಿದ್ಯಾರ್ಥಿಗಳನ್ನ ಉದೇಶಿಸಿ ಮಾತನಾಡಿದ ಅವರು ಬೀಡಿಸಿಗರೇಟು,ಗಾಂಜಾ.ಅಫೀಮು,ಚಾರಸ್ ಸೇರಿದಂತೆ ನಶೆಏರಿಸುವವಸ್ತುಗಳಿಂದ, ವಿದ್ಯಾರ್ಥಿಗಳು ದೂರವಿರಬೇಕು.ಮಾದಕವಸ್ತುಗಳು ಮನುಷ್ಯನ ಮಾನಸಿಕ ಸ್ಥಿಮಿತವನ್ನ ಹಾಳುಮಾಡುವ ಜೊತೆಗೆ,ಆರೋಗ್ಯದ ಮೇಲೆ ಕೆಟ್ಟಪರಿಣಾಮ ಉಂಟುಮಾಡಿ ಜೀವನವನ್ನೇ ಹಾಳುಮಾಡುತ್ತದೆ.ಮಾದಕವಸ್ತುಗಳಿಂದ ದೂರವಿದ್ದು,ವಿದ್ಯಾಭ್ಯಾಸದ ಕಡೆಹೆಚ್ಚು ಆಸಕ್ತಿವಹಿಸಿ,ನಿಮ್ಮ ತಂದೆತಾಯಿಗಳು ನಿಮ್ಮ ಭವಿಷ್ಯದ ಬಗ್ಗೆ ಹೆಚ್ಚು ಕನಸುಹೊತ್ತು ಕಾಲೇಜುಗಳಿಗೆ ಕಳಿಸುತ್ತಾರೆ,ಅವರ ಕನಸ್ಸುಗಳಿಗೆ ಕೊಳ್ಳಿಹಿಡುವ ಕೆಲಸ ಮಾಡಬಾರದು.ವಿದ್ಯಾರ್ಥಿ ಜೀವನದಲ್ಲಿ ಎಚ್ಚರತಪ್ಪಿದರೆ.ಜೀವನ ಪರ್ಯಾಂತ ಕಷ್ಟ ಅನುಭವಿಸಬೇಕಾಗುತ್ತದೆ,ವಿದ್ಯಾರ್ಥಿ ಜೀವನ ಅಮೂಲ್ಯವಾದ ಜೀವನ ಹಾಳುಮಾಡಿಕೊಳ್ಳ ಬೇಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಬ್ ಇನ್ಪೆಕ್ಟರ್ ಕೃಷ್ಣಪ್ಪ.ಸಿಬ್ಬಂದಿಗಳಾದ ಅಶೋಕ್.ಸೋಮಶೇಖರ್.ಶೋಭಾ.ಚನ್ನೆಗೌಡ.ಹಾಗೂ.ಎಸ್‌,ಪಿಯು ಕಾಲೇಜ್ ಮತ್ತು ದೀಕ್ಷಾ
ಹೆರಿಟೇಜ್ ಸ್ಕೂಲ್ ತಿಪಟೂರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!