ತಿಪಟೂರು :ತಿಪಟೂರು ನಗರದ ಮಡೇನೂರು ಗೇಟ್ ಬಳಿ ಇರುವ ಶ್ರೀ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ.ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್ ನವದೆಹಲಿ ಯಿಂದ ಮಾನ್ಯತೆ ಪಡೆದಿದ್ದು,ಹಾಗೂ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಧ್ಯಾಲಯ ಬೆಳಗಾವಿಯಿಂದ ಅನುಮೋದನೆ ಪಡೆದಿದೆ. ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ್ತೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡಲಾಗುತ್ತಿದೆ.ಅತ್ಯಂತ ಬೇಡಿಕೆಯಾ ಕೋರ್ಸ್ ಆದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಶಿಕ್ಷಣವನ್ನ ಸರ್ಕಾರಿ ಶುಲ್ಕಕ್ಕಿಂತಲು ಕಡಿಮೆ ಶುಲ್ಕ ಕೇವಲ90 ಸಾವಿರ ರೂಪಾಯಿಗೆ ನೀಡಲಾಗುತ್ತದೆ.ಎಲೆಕ್ಟ್ರಾನಿಕ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ 80 ಸಾವಿರ.ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕಲ್ ಇಂಜಿನಿಯರಿಂಗ್ 80ಸಾವಿರ,ಸಿವಿಲ್ ಇಂಜಿನಿಯರಿಂಗ್ 50ಸಾವಿರ,ಮೆಕ್ಯಾನಿಕಲ್ ಇಂಜಿನಿಯರಿಂಗ್ 50ಸಾವಿರಕ್ಕೆ ಶಿಕ್ಷಣ ನೀಡಲಾಗುತ್ತಿದೆ.

ನಗರದ ಮಡೇನೂರು ಗೇಟ್ ಬಳಿ ಇರುವ ಶ್ರೀ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಶ್ರೀ ಬಸವೇಶ್ವರ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಹೆಚ್.ಎನ್ ಹಾಲಪ್ಪ .ಕೇವಲ ಶ್ರೀಮಂತ ವರ್ಗಗಳ ಸ್ವತ್ತಾಗಿದ್ದ ಇಂಜಿನಿಯರಿಂಗ್ ಶಿಕ್ಷಣವನ್ನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಡಬೇಕು.ಬಡವರು.ಶ್ರೀಸಾಮಾನ್ಯರು.ಕೂಲಿಕಾರ್ಮಿಕರು ರೈತರ ಮಕ್ಕಳು ಕಡಿಮೆ ಖರ್ಚಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡಬೇಕು ಎನ್ನುವ ಮಹದಾಸೆಯೊಂದಿಗೆ ಶ್ರೀ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ ಆರಂಭಿಸಿದ್ದು ನಮ್ಮ ಕಾಲೇಜಿನಲ್ಲಿ ಸರ್ಕಾರಿ ಶುಲ್ಕಕ್ಕಿಂತಲು ಕಡಿಮೆ ಶುಲ್ಕದಲ್ಲಿ ಮ್ಯಾನೇಜ್ಮೆಂಟ್ ಕೊಟಾದಡಿ ಇಂಜಿನಿಯರಿಂಗ್ ಶಿಕ್ಷಣ ನೀಡಲಾತ್ತಿದೆ.ಅಲ್ಲದೆ ಪೋಷಕರಿಗೆ ಅನುಕೂಲವಾಗುವಂತೆ ರಿಯಾಯಿತಿಸಹ ನೀಡುತ್ತಿದ್ದು,ಕಂತುಗಳಲ್ಲಿ ಶುಲ್ಕಪಾವತಿಗೆ ಅವಕಾಶ ನೀಡಲಾಗಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶ ಪಡೆದುಕೊಳ್ಳಬೇಕು.ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ,ಸ್ಪರ್ಧಾತ್ಮಕ ಶಿಕ್ಷಣಹಾಗೂ ಕ್ಯಾಂಪಸ್ ಸೆಲೆಕ್ಷನ್.ಸೇರಿದಂತೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ನಮ್ಮ ಸಂಸ್ಥೆಯೆ ಸಹಾಯಮಾಡುತ್ತದೆ.ಈಗಾಗಲೇ ನೂರಾರು ವಿದ್ಯಾರ್ಥಿಗಳು.ಸರ್ಕಾರಿ ಅರೆಸರ್ಕಾರಿ.ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿಉದ್ಯೋಗಪಡೆದು ಜೀವನರೂಪಿಸಿಕೊಂಡಿದ್ದಾರೆ.ಅಲ್ಲದೆ ನಮ್ಮ ಸಂಸ್ಥೆಯಿಂದ ಕಳೆದ ಶೈಕ್ಷಣಿಕ ಸಾಲಿನಲ್ಲಿ ಬಿ ಪಾರ್ಮಸಿ.ಡಿ.ಪಾರ್ಮಸಿ ಆರಂಬಿಸಿದ್ದು.ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಗ್ರಾಮೀಣ ವಿಧ್ಯಾರ್ಥಿಗಳಿಗೆ ಅನುಕೂಲವಾಗುವಂತೆ,ಬಿ.ಎಸ್.ಸಿ ಎಂ.ಐ.ಟಿ (ಮೆಡಿಕಲ್ ಇಮೇಜಿಗ್ ಟೆಕ್ನಾಲಜಿ )ಹಾಗೂ ಬಿಓಟಿ ಬ್ಯಾಚುಲರ್ ಆಫ್ ಆಕ್ಯುಪೇಷನ್ ಥೆರಫಿ ಮತ್ತು ಎಂ.ಎಲ್.ಟಿ (ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್)ಕೋರ್ಸ್ ಪ್ರಾರಂಭಿಸುತ್ತಿದ್ದು,ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು,ಜೀವನರೂಪಿಸಿಕೊಳ್ಳ ಬೇಕು ಎಂದು ತಿಳಿಸಿದರು

.ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಶ್ರೀ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ//ಟಿ.ಎಂ.ಪಿ ರಾಜಕುಮಾರ್ ಮಾತನಾಡಿ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದೆ. ಹೆಚ್.ಎನ್ ಹಾಲಪ್ಪನವರು ಕಲ್ಪತರು ನಾಡಿನ ಬಡವರು ಶ್ರೀಸಾಮಾನ್ಯರು.ಕೂಲಿಕಾರ್ಮಿಕ,ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು.ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಪಡೆದು.ನಮ್ಮ ಮಕ್ಕಳು ಮುಂದೆ ಬರಬೇಕು ಎನ್ನುವ ಉದೇಶದಿಂದ ಸ್ಥಾಪಿಸಿದ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಾವಿರರು ಬಡಮಕ್ಕಳಿಗೆ ಉದ್ಯೋಗ ಪಡೆಯಲು ಸಹಕಾರಿಯಾಗಿದೆ.ಶ್ರೀ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿದ್ದು ಲಾಭಗಳಿಕೆಗಿಂತ.ಬಡವರಿಗೆ ಶಿಕ್ಷಣ ನೀಡಿ ಅವರ ಜೀವನಕ್ಕೆ ದಾರಿಯಾಗಿದ್ದು ಗ್ರಾಮೀಣ ಭಾಗದ ಜನ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪತ್ರಿಕಾ ಘೋಷ್ಠಿಯಲ್ಲಿ ಸಂಸ್ಥೆ ನಿರ್ದೇಶಕರಾದ ಶಿವಾನಂದಯ್ಯ.ಪವನ್ ಕುಮಾರ್.ರೋಹಿತ್.ಚೇತನ್.ಕೀರ್ತಿ.ಹರ್ಷಿತಾ.ಗಗನ್.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




