ತಿಪಟೂರು:ತಾಲ್ಲೋಕಿನ ಹಾಸನ ತಿಪಟೂರು ರಸ್ತೆ ಹಾಗೂ ತಿಪಟೂರು ಚಿಕ್ಕನಾಯ್ಕನಹಳ್ಳಿ ರಸ್ತೆ ಅಭಿವೃದ್ದಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು.
ನಗರದ ಹಾಸನ ರಸ್ತೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಕೆ.ಎಂ.ಆರ್.ಸಿ ಯೋಜನೆ ಅಡಿ ತಿಪಟೂರು ಹಾಸನ ರಸ್ತೆ ಯ ಗಡಿಭಾಗದ ವರೆಗೆ ಒಟ್ಟು 11ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ 41ಕೋಟಿ ಹಣ ಮುಂಜೂರಾಗಿದ್ದು.ಚಿಕ್ಕನಾಯ್ಕನಹಳ್ಳಿ -ತಿಪಟೂರು ರಸ್ತೆಯ ಚಿಕ್ಜನಾಯ್ಕನಹಳ್ಳಿ ಗಡಿವರೆಗೆ 10ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ 29 ಕೋಟಿ ಹಣಮುಂಜೂರಾಗಿದ್ದು,ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.

ನಗರದ ಅಭಿವೃದ್ದಿ ದೃಷ್ಠಿಯಿಂದ ತಿಪಟೂರು ಯಡೆಯೂರು ರಸ್ತೆ ಹಾಗೂ ಹಾಸನ ತಿಪಟೂರು ರಸ್ತೆಯನ್ನ ಹೆದ್ದಾರಿಯಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದ್ದು .ಶೀಘ್ರವೆ ಸರ್ಕಾರದಲ್ಲಿ ಯೋಜನೆ ಮುಂಜೂರಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಜಿಲ್ಲಾಯುವ ಜಿಲ್ಲಾಧ್ಯಕ್ಷ ನಿಖಿಲ್ ರಾಜಣ್ಣ.ಮಾಜಿ ತಾಲ್ಲೋಕು ಪಂಚಾಯ್ತಿ ಅಧ್ಯಕ್ಷ ಎಂ.ಎನ್ ಸುರೇಶ್.ನಗರಸಭೆ ಮಾಜಿ ಅಧ್ಯಕ್ಷ ತರಕಾರಿ ಪ್ರಕಾಶ್. ಶ್ರೀಮತಿ ಮೇಘಶ್ರೀ ಭೂಷಣ್.ಪಿಡಬ್ಲ್ಯುಡಿ ಎಇಇ.ನಟರಾಜ್ .ವಿರುಪಾಕ್ಷ.ಗುತ್ತಿಗೆದಾರರಾದ ಚಂದನ್ .ಸತೀಶ್. ಮುಖಂಡರಾದ ಆದಿತ್ಯ ಜಯಣ್ಣ.ಗಂಗಾಧರಯ್ಯ.ಲೋಕನಾಥ್ ಸಿಂಗ್ .ಸುಜಿತ್ ಭೂಷಣ್.ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ









