Spread the love

ದಿನಾಂಕ : 12-12-2025ತಿಪಟೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ 03 ಜನ ಆರೋಪಿಗಳನ್ನು ಬಂಧಿಸಿ 9 ಲಕ್ಷ ರೂ ಬೆಲೆಬಾಳುವ ಸುಮಾರು 90 ಗ್ರಾಂ ತೂಕದ ಚಿನ್ನದ ವಡವೆಗಳ ವಶಪಡಿಸಿಕೊಳ್ಳಲಾಗಿದೆ.
ಹಿರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಚಲನಚಿತ್ರಹೇಮಲತಾರವರು ತನ್ನ ವಡವೆಗಳಾದ ಸುಮಾರು 60 ಗ್ರಾಂ ತೂಕದ ಮಾಂಗಲ್ಯ ಸರ , ಸುಮಾರು 8 ರಿಂದ 10 ಗ್ರಾಂ ತೂಕದ ಉಂಗುರ , ಸರ್ಕಾರದಿಂದ ಪ್ರಶಸ್ತಿಯಾಗಿ ಬಂದಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಪದಕ ಸುಮಾರು 9 ಲಕ್ಷ ರೂ ಬೆಲೆಬಾಳುವ ಸುಮಾರು 90 ಗ್ರಾಂ ತೂಕದ ಚಿನ್ನದ ವಡವೆಗಳನ್ನು ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದು , ದಿನಾಂಕ 10.12.2025 ರಂದು ರಾತ್ರಿ ಮಲಗುವಾಗ ತನ್ನ ಬ್ಯಾಗಿನಲ್ಲಿದ್ದ ವಡವೆಗಳನ್ನು ಪರಿಶೀಲನೆ ಮಾಡಿದಾಗ ಅವುಗಳು ಕಾಣೆಯಾಗಿರುತ್ತವೆ .

ದಿ : 10-12-2025 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಮನೆಯ ಕೆಲಸಕ್ಕೆಂದು ಬಂದಿದ್ದ ಶಂಕರಬಾಬು , ಗುರುರಾಜ @ ಮನು ಮತ್ತು ಇವರ ಜೊತೆ ಬಂದಿದ್ದ ಮನೋಜ್ ಎಂಬುವರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಅನುಮಾನವಿರುತ್ತದೆ . ಪತ್ತೆಮಾಡಿಕೊಡಲು ಕೋರಿ ನೀಡಿದ ದೂರನ್ನು ಪಡೆದು ತಿಪಟೂರು ನಗರ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ 241/2025 ಕಲಂ 305 ಬಿ.ಎನ್.ಎಸ್ . ರೀತ್ಯಾ ಪ್ರಕರಣ ದಾಖಲಿಸಿರುತ್ತೆ .
ಈ ಪ್ರಕರಣವನ್ನು ಪತ್ತೆಹಚ್ಚಲು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ.ಎಂ.ಎಲ್.ರವರ ನೇತೃತ್ವದಲ್ಲಿ , ತಿಪಟೂರು ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಶ್ರೀಮತಿ ಜಯಲಕ್ಷ್ಮಮ್ಮ.ಎನ್.ರ .ರವರ ಮಾರ್ಗಸೂಚನೆ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ರವರಾದ ರವಿ ಕುಮಾರ್ ಎ , ಎ.ಎಸ್.ಐ. ಚಿಕ್ಕಲಕ್ಕೇಗೌಡ ಎನ್.ಡಿ ಮತ್ತು ಸಿಬ್ಬಂದಿಯವರಾದ ಮೋಹನ್ ಕುಮಾರ್ ಜಿ.ಎಂ , ಅಶೋಕ್‌ , ಮಹೇಶ್ , ಮನೋಜ್ ರವರನ್ನು ಒಳಗೊಂಡ ಅಪರಾಧ ಪತ್ತೆ ತಂಡವನ್ನು ರಚಿಸಿದ್ದು ,
ಸದರಿ ತಂಡವು ಆರೋಪಿಗಳಾದಶಂಕರ್ ಬಾಬು ಬಿನ್ ಮಂಜುನಾಥ ಬಾಬು , 26 ವರ್ಷ , ಪೈಂಟಿಂಗ್ ಕೆಲಸ , ತಡಸೂರು , ಕಸಬಾ ಹೋಬಳಿ , ತಿಪಟೂರು ತಾಲ್ಲೋಕ್ ,ಗುರುರಾಜು @ ಮನು ಬಿನ್ ಮಂಜುನಾಥ ಬಾಬು , 33 ವರ್ಷ , ಪೈಂಟಿಂಗ್ ಕೆಲಸ , ತಡಸೂರು , ಕಸಬಾ ಹೋಬಳಿ , ತಿಪಟೂರು ತಾಲ್ಲೂಕ್ . ಮನೋಜ್ ಬಿನ್ ಯೋಗರಾಜ್ , 18 ವರ್ಷ , ಪೈಂಟರ್ ಕೆಲಸ , 2 ನೇ ಕ್ರಾಸ್ , ವಿದ್ಯಾನಗರ ಸರ್ಕಾರಿ ಆಸ್ಪತ್ರೆಹಿಂಭಾಗ , ತಿಪಟೂರು ಟೌನ್ .ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಒಟ್ಟು ಸುಮಾರು 9 ಲಕ್ಷ ರೂ ಬೆಲೆಬಾಳುವ ಸುಮಾರು 90 ಗ್ರಾಂ ತೂಕದ ಚಿನ್ನದ ವಡವೆಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ . ಸದರಿ ಪತ್ತೆತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್ , ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ .

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!