Spread the love

ತಿಪಟೂರು:ನಗರದ ಕೆ.ಎಸ್. ಆರ್. ಟಿ. ಸಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟಿನ್ ಗೆ ತಿಪಟೂರು ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಭೇಟಿ ನೀಡಿ ಕ್ಯಾಂಟಿನ್ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.ಸಾರ್ವಜನಿಕರೊಂದಿಗೆ ತಿಂಡಿ ಸೇವಿಸಿದ ಅಧ್ಯಕ್ಷರು ಕ್ಯಾಂಟಿನ್ ನಲ್ಲಿ ಶುಚ್ಚಿರುಚಿ ಆಹಾರ ಗುಣಮಟ್ಟಕ್ಕೆ ಆಧ್ಯತೆ ನೀಡಿ,ಯಾವುದೇ ಕಾರಣಕ್ಕು ಆಹಾರದ ಶುಚ್ಚಿ ರುಚಿ ಗುಣಮಟ್ಟ ಹಾಳಾದದಂತೆ ಕೆಲಸ ಮಾಡಿ,ಸಾರ್ವಜನಿಕರಿಂದ ದೂರುಗಳು ಬಂದರೆ ನಿರ್ದಾಕ್ಷ್ಯಣ್ಯವಾಗಿ ಗುತ್ತಿಗೆ ರದ್ದುಪಡಿಸುತ್ತೇವೆ.

ಬಡವರು ಹಾಗೂ ಶ್ರೀ ಸಾಮಾನ್ಯರು ಗುಣಮಟ್ಟದ ಆಹಾರ ತಿನ್ನಲಿ, ಯಾರು ಹಸಿವಿನಿಂದ ನರಳಬಾರದು ಎನ್ನುವ ಕಾರಣಕ್ಕೆ ಸರ್ಕಾರ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ನೀಡಲು ಇಂದಿರಾ ಕ್ಯಾಂಟಿನ್ ನಡೆಸುತ್ತಿದೆ.ಆದರೆ ಗುಣಮಟ್ಟ ,ಸ್ವಚ್ಚತೆ ಸೇರಿದಂತೆ ನಿರ್ವಹಣೆಯ ಬಗ್ಗೆ ದೂರು ಬಂದರೆ ಕ್ರಮಕೈಗೊಳ್ಳುತ್ತೇವೆ ಎಂದರು. ಅಧ್ಯಕ್ಷರೊಂದಿಗೆ ನಗರಸಭೆ ಆಹಾರ ನಿರೀಕ್ಷಕ ಶ್ರೀನಿವಾಸ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!