Spread the love

ತಿಪಟೂರು:ತಿಪಟೂರು ಜಿಲ್ಲಾಕೇಂದ್ರವಾಗ ಬೇಕು ಎನ್ನುವುದು ಕಲ್ಪತರು ನಾಡಿನ ಜನರ ಬಹುದಿನಗಳ ಹೋರಾಟ,ತಿಪಟೂರು ಜಿಲ್ಲಾಕೇಂದ್ರದ ಹೋರಾಟಕ್ಕೆ ನಮ್ಮ ಬೆಂಬಲವಿದೆ,ಸೂಕ್ತ ಸಂದರ್ಭದಲ್ಲಿ ಎಲ್ಲಾ ಶಾಸಕರು ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ತಿಳಿಸಿದರು


ನಗರದ ಜಿ.ಕೆ ಎಂ ನಗರದಲ್ಲಿ ಟೀಮ್ ಹಲ್ಕ್ ವತಿಯಿಂದ ಆಯೋಜಿಸಿದ ಮಿಸ್ಟರ್ ತಿಪಟೂರು ದೇಹಧಾಡ್ಯ ಸ್ಪರ್ಧೆ ಉದ್ಘಾಟಿಸಿದ ಅವರು ತಿಪಟೂರು ಜಿಲ್ಲೆಯಾಗಬೇಕು ಎನ್ನುವುದು ಈ ಭಾಗದ ಜನರ ಒತ್ತಾಸೆಯಾಗಿದೆ,ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ,ಅಗತ್ಯ ಸಮಯದಲ್ಲಿ ಎಲ್ಲಾ ಶಾಸಕರು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ.ಕಲ್ಪತರು ನಾಡಿನ ಜೀವನಾಡಿಯಾದ ಕೊಬ್ಬರಿಗೆ ನಮ್ಮ ನಿರೀಕ್ಷೆಗಿತ ಹೆಚ್ಚಿನ ಬೆಲೆದೊರೆಯುತ್ತಿದೆ,ಆದರೆ ಕೆಂಪುಹುಳು ಬಾದೆ,ಬಿಳಿನೊಣಗಳ ಬಾದೆ ಸೇರಿದಂತೆ ಅನೇಕ ರೋಗಗಳು,ಆವರಿಸಿದು,ರೈತರನ್ನ ಆತಂಕಕ್ಕೆ ದೂಡಿವೆ.ತಿಪಟೂರು .ಅರಸೀಕೆರೆ.ಚನ್ನರಾಯಪಟ್ಟಣ್ಣ.ಚಿಕ್ಕನಾಯ್ಕನಹಳ್ಳಿ.ತುರುವೇಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ರೋಗಕ್ಕೆ ಒಳಗಾಗಿರುವ ತೆಂಗಿಗೆ ಸೂಕ್ತ,ಔಷಧೋಪಚಾರಕ್ಕೆ ಕೇರಳದಿಂದ ಬಂದ ತಜ್ಞರ ತಂಡಸೂಚನೆ ನೀಡಿದ್ದು ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳು ,ಉಪಮುಖ್ಯಮಂತ್ರಿಗಳ ಹಾಗೂ ಅನೇಕ ಜನ ಮಂತ್ರಿಗಳು ಅರಸೀಕೆರೆಗೆ ಆಗಮಿಸುತ್ತಿದ್ದು, ತೆಂಗುಬೆಳೆಗಾರರಿಗೆ ಆಗಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ಮನವರಿಕೆ,ಮಾಡಲಾಗುವುದು.ತೆಂಗಿಗೆ ಆವರಿಸಿರುವ ರೋಗ ನಿವಾರಣಗೆ ಕನಿಷ್ಟ 250ರಿಂದ300ಕೋಟಿ ಖರ್ಚಾಗುತ್ತದೆ.ಆಗ ಸರ್ಕಾರ ನೀಡುತ್ತಿರುವ ಯಾವುದಕ್ಕೂ ಸಾಲುವುದಿಲ್ಲ,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿದಬೇಕು,ಈ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ಅಗತ್ಯವಿದ್ದು,ರೈತರ ಹಿತಕ್ಕಾಗಿ ಎಲ್ಲರೂ ಸಂಘಟಿತ ಹೋರಾಟ ಮಾಡಬೇಕಿದೆ ಎಂದು ತಿಳಿಸಿದ ಅವರು ಮನುಷ್ಯನಿಗೆ ಆರೋಗ್ಯ ಮುಖ್ಯ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿರಂತರ ವ್ಯಾಯಾಮಗಳು ಮುಖ್ಯವಾಗುತ್ತವೆ.ಮನುಷ್ಯ ವಯಸ್ಸು 40ವರ್ಷ ದಾಟಿದ ಮೇಲೆ ನಮ್ಮ ಅಂಗಾಂಗಗಳು ನಮ್ಮ ಮಾತುಕೇಳುವುದಿಲ್ಲ,ನಿರಂತರ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳ ಬಹುದು. ಯುವಕರು ದುಶ್ಚಟಗಳಿಗೆ ಬಿದ್ದು ಹಾಳಾಗದೆ ಸಧೃಡ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮಗಳಿಗೆ ಒತ್ತು ನೀಡಬೇಕು, ಟೀಮ್ ಹಲ್ಕ್ ಆಯೋಜನೆ ಮಾಡಿರುವ ದೇಹದಾಡ್ಯ ಸ್ಪರ್ಧೆ ಸ್ಪೂರ್ಥಿದಾಯಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ನಿವೃತ್ತ ಎಸಿಪಿ. ಲೋಕೇಶ್ವರ್ ಮಾತನಾಡಿ ಯುವಕರು ದುಶ್ಚಟಗಳಿಗೆ ಬಲಿಯಾಗದೆ,ವ್ಯಾಯಮ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳ ಬೇಕು.ಆಗ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಸಮಾಜದಿಂದಲ್ಲು ಗೌರವಕ್ಕೆ ಪಾತ್ರರಾಗುತ್ತಿರ ಎಂದು ತಿಳಿಸಿದರು
ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್.ಉಪಾಧ್ಯಕ್ಷೆ ಮೇಘನಾ ಭೂಷಣ್.ಅರಸೀಕೆರೆ ನಗರಸಭೆ ಅಧ್ಯಕ್ಷ ಸಮ್ಮಿಉಲ್ಲಾ.ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಸೈಫುಲ್ಲ.ಜಿ.ಕೆ.ನಟರಾಜ್.ಮುತ್ತಾವಲ್ಲಿ ಮಹಮದ್ ದಸ್ತಗೀರ್.ಸಮೀಉಲ್ಲಾ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!