Spread the love

ತಿಪಟೂರು:ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮಪಂಚಾಯ್ತಿಯಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ಅವ್ಯವಹಾರ ಹಾಗೂ ಅರಳಗುಪ್ಪೆ ಇಂದಿರಾಗಾಂಧೀ ವಸತಿ ಶಾಲೆಯಲ್ಲಿ ನಡೆಯುತ್ತಿರುವ ಅವ್ಯವಹಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿ,ತಿಪಟೂರು ತಾಲ್ಲೋಕು ಪಂಚಾಯ್ತಿ ಮುಂಭಾಗ ಬಿಜೆಪಿ ವತಿಯಿಂದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ತಾಲ್ಲೋಕು ಆಡಳಿತದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು‌.


ಪ್ರತಿಭಟನಾ ನಿರತರನ್ನ ಊದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಪ್ರಧಾನಕಾರ್ಯದರ್ಶಿ ಗಂಗರಾಜು. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಒಂದಾಗಿನಿಂದ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದು,ತಿಪಟೂರು ತಾಲ್ಲೋಕಿನಲ್ಲಿಯೂ ಭ್ರಷ್ಠಾಚಾರ ಮೇರೆ ಮೀರಿದೆ, ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮಪಂಚಾಯ್ತಿಯಲ್ಲಿ ಕಾಮಗಾರಿನಡೆಸದೆಯೇ ಬಿಲ್ ಪಡೆಯಲಾಗಿದೆ, ಕುಪ್ಪಾಳು ಗ್ರಾಮಪಂಚಾಯ್ತಿ ಅಧ್ಯಕ್ಷರು ಆರೋಪಿಸಿರುವಂತೆ ಮಾಜಿ ಸಚಿವ ಬಿ.ಸಿ ನಾಗೇಶ್ ಕಾಲಾವಧಿಯಲ್ಲಿ ನಿರ್ಮಾಣವಾಗಿದ, ಗಿಣಕಿಕೆರೆ ಗ್ರಾಮದ ಡಾ//ಬಿ.ಆರ್ ಅಂಬೇಡ್ಕರ್ ಭವನದ ಸುತ್ತಲೂ ಗ್ರಾಮಪಂಚಾಯ್ತಿಯಿಂದ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಠಿಯಾಡಿ ಬಿಲ್ ಪಡೆಯಲಾಗಿದೆ.ಕೊಡ್ಲಿಘಟ್ಟ ಗ್ರಾಮದಲ್ಲಿ ಬಸಿಕಾಲುವೆ ನಿರ್ಮಾಣ ಮಾಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಠಿಮಾಡಿ ಬಿಲ್ ಪಡೆಯಲಾಗಿದ್ದು ಈ ಹಿಂದೆ ತಾಲ್ಲೋಕು ಪಂಚಾಯ್ತಿ ಇಓ ಆಗಿದ ವ್ಯಕ್ತಿ ಕುಪ್ಪಾಳು ಪಂಚಾಯ್ತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲವಾರು ಭ್ರಷ್ಟಾಚಾರಗಳು ನಡೆದಿದ್ದು ಲಕ್ಷಾಂತರ ರೂಪಾಯಿ ಅವ್ಯವಹಾರಗಳಗಿದ್ದು ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳ ಬೇಕು.ಬಡಮಕ್ಕಳು ವಿದ್ಯಾಭ್ಯಾಸ ಮಾಡಲಿ ಎಂದು ಸರ್ಕಾರಗಳುಪ್ರತಿವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿವೆ ಆದರೆ ಅರಳಗುಪ್ಪೆ ಇಂದಿರಾಗಾಂಧಿ ವಸತಿಶಾಲೆಯಲ್ಲಿ ಮಕ್ಕಳು ತಿನ್ನುವ ಅನ್ನಕ್ಕೆ ಕನ್ನಹಾಕಲಾಗುತ್ತಿದೆ. ವಸತಿ ಶಾಲೆ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ,ಕಳಪೆ ಗುಣಮಟ್ಟದ ಆಹಾರ ಸೇವನೆ ಮಾಡಿ 6ಮಕ್ಕಳು ಅಸ್ಪಸ್ಥರಾಗಿದ್ದಾರೆ.ಹಾಸ್ಟೆಲ್ ನಲ್ಲಿ ದಾಸ್ತಾನು ಮಾಡಿದ್ದ ಸುಮಾರು 40ಕ್ವಿಂಟಲ್ ಗೋಧಿ ಹುಳು ಬಿದ್ದಿದೆ,ಆಹಾರ ಸಾಮಗ್ರಿಗಳು ಗುಣಮಟ್ಟ ಕಳೆದುಕೊಂಡಿದ್ದು ಕಳಪೆ ಆಹಾರ ಸಾಮಗ್ರಿಗಳಲ್ಲೇ.ಆಹಾರ ತಯಾರಿಸಲಾಗುತ್ತಿದೆ.ಆಹಾರ ರುಚಿಇಲ್ಲ. ಎಂದು ಕೇಳಿದರೆ ವಸತಿ ಶಾಲೆ ಪ್ರಾಚಾರ್ಯೇ ಮಕ್ಕಳಿಗೆ ಹೊಡೆಯುವುದು ಬಡಿದಿದು ಕ್ರೌರ್ಯಮೆರೆಯುತ್ತಿದ್ದಾರೆ. ಮಕ್ಕಳು ಪೋಷಕರಿಂದ ದೂರವಿದ್ದು ಮಾನಸಿಕ ಹಿಂಸೆಯ ವಾತವರಣದಲ್ಲಿ ವಿದ್ಯಾಭ್ಯಾಸ ಮಾಡಬೇಕಿದೆ.ವಸತಿಶಾಲೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆಯುತ್ತಿದರೂ ಮೇಲೆಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆ.ವಸತಿಶಾಲೆ ಪ್ರಾಚಾರ್ಯೆಯನ್ನ ಅಮಾನತ್ತಿನಲ್ಲಿ ಇಟ್ಟು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು


ಮುಖಂಡರಾದ ಹರೀಸಮುದ್ರ ಗಂಗಾಧರ್ ಮಾತನಾಡಿ ತಾಲ್ಲೋಕಿನಲ್ಲಿ ಅಭಿವೃದ್ದಿ ಶೂನ್ಯವಾಗಿದೆ,ಶಾಸಕರು ಮಾಜಿ ಸಚಿವರ ಕಾಲಾವಧಿಯಲ್ಲಿ ಮುಂಜೂರಾದ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡುವಕೆಲಸದಲ್ಲಿ ಕಾಲಕಳೆಯುತ್ತಿದ್ದಾರೆ. ಕೇಂದ್ರಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ಗುತ್ತಿಗೆಯಲ್ಲಿ ಪಕ್ಷಪಾತ ಮಾಡುತ್ತಿದ್ದು ಕಾಮಗಾರಿ ಮಾಡಲು ಗುತ್ತಿಗೆ ಪಡೆದ ಬಿಜೆಪಿ ಮುಖಂಡರಿಗೆ ಅನಾಗತ್ಯ ತೊಂದರೆ ನೀಡಲಾಗುತ್ತಿದೆ.ಕುಪ್ಪಾಳು ಗ್ರಾಮಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳಲು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೋಕು ಬಿಜೆಪಿ ಅಧ್ಯಕ್ಷ ಸತೀಶ್ .ನಗರಾಧ್ಯಕ್ಷ ಹಳೇಪಾಳ್ಯ ಜಗದೀಶ್ .ಮಾಜಿ ಅಧ್ಯಕ್ಷ ಬಳೆಕಟ್ಟೆ ಸುರೇಶ್.ಕುಪ್ಪಾಳು ಗ್ರಾಮಪಂಚಾಯ್ತಿ ಸದಸ್ಯೆ ರೂಪಾ ಮಂಜುನಾಥ್.ಮುಖಂಡರಾದ ಬೋಜೆಗೌಡ.ಈಚನೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಉದಯ್ ಕುಮಾರ್. ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ರಂಗಸ್ವಾಮಿ.ನಗರಸಭೆ ಸದಸ್ಯರಾದ ಶಶಿಕಿರಣ್.ಮೋಹನ್ ಕುಮಾರ್ .ಪದ್ಮತಿಮ್ಮೆಗೌಡ ಜಯಲಕ್ಷ್ಮಿ. ಬಿಜೆಪಿ ರೈತ ಮೋರ್ಚ ಅಧ್ಯಕ್ಷ ಹಾಲ್ಕುರಿಕೆ ನಾಗರಾಜು. ದಿಶಾ ಸಮಿತಿ ಸದಸ್ಯ ಆಯರಹಳ್ಳಿ ಶಂಕರಪ್ಪ.ಹಳೇಪಾಳ್ಯ ಮಂಜುನಾಥ್.ಬಾಲರಾಜ್ .ರಂಗಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ವಿಶ್ವನಾಥ್ .ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!