:ತಾಲ್ಲೋಕಿನ ನೊಣವಿನಕೆರೆನಗರದ ಗುಂಗರಮಳೆ ರಸ್ತೆಯ ವಿನೋದಣ್ಯ ಬಿಲ್ಡಿಂಗ್ ನಲ್ಲಿ ಇರುವ ಮಂಜುಳ ಕೋಂ ಸಂತೋಶ್ ಎಂಬುವವರಿಗೆ ಸೇರಿದ ಭುವನರಾಶಿ ಟ್ರೇಡರ್ ನಲ್ಲಿ ಸುಮಾರು 1.30 ರ ಸಮಯದಲ್ಲಿ ಅಪರೀಚಿತ ವ್ಯಕ್ತಿಯೋರ್ವ ತೆಂಗಿನ ಕಾಯಿ ವ್ಯಾಪಾರದ ಸೋಗಿನಲ್ಲಿ ವ್ಯಾಪಾರಕ್ಕೆ ಬಂದಕಳ್ಳರು ಅಂಗಡಿಯಲ್ಲಿ ವ್ಯಾಪಾರಕ್ಕೆ ಇಟ್ಟಿದ ಸುಮಾರು 4ಲಕ್ಷ ರೂಪಾಯಿ ಹಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಮಧ್ಯಹ್ನ 1.30ರ ಸಮಯದಲ್ಲಿ ತೆಂಗಿನ ಕಾಯಿ ಅಂಗಡಿಗೆ ಬಂದ ಕಳ್ಳರು 100ತೆಂಗಿನಕಾಯಿ ಬೇಕು ಎಂದು ಕೇಳಿದ್ದು, ಅಂಗಡಿ ಮಾಲೀಕರಾದ ಮಂಜುಳಾ ರವರು ತೆಂಗಿನ ಕಾಯಿ ತುಂಬಲು ಗೋಡೋನ್ ಗೆ ಹೋದಾಗ ಕ್ಯಾಶ್ ಟೇಬಲ್ ಕೆಳಗೆ ಇಟ್ಟಿದ ವ್ಯಾನಿಟಿ ಬ್ಯಾಗ್ ಅನ್ನು ಕಳ್ಳತನ ಮಾಡಿರುತ್ತಾರೆ.ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟಿದ 4ಲಕ್ಷ ಹಣ,ಆಧಾರ್ ಕಾರ್ಡ್.ಕರ್ನಾಟಕ ಬ್ಯಾಂಕ್ ಎಟಿಎಂ ಕಾರ್ಡ್.ಹಾಗೂ ಫಿನ್ ಕೇರ್ ಫೈನಾನ್ಸ್ ಎಟಿಎಂ ಕಾರ್ಡ್ ಕಳ್ಳತನ ಮಾಡಿರುತ್ತಾರೆ.
ಮಧ್ಯಹ್ನ ಅತ್ತೆ ಹಾಗೂ ಪತಿ ಅಂಗಡಿಗೆ ಬಂದ ವೇಳೆ ಶುಗರ್ ಮಾತ್ರೆ ತೆಗೆದುಕೊಳ್ಳಲು ಹೋದಾಗ,ವ್ಯಾನಿಟಿ ಬ್ಯಾಗ್ ಕಳ್ಳತನವಾಗಿರುವಿದು.ಗೊತ್ತಾಗಿದೆ ತಕ್ಷಣಕ್ಕೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ದೂರಿನನ್ವಯ ನೊಣವಿನಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು.ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ









