ತಿಪಟೂರು:ನಗರದ ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಆವರಣದಲ್ಲಿ ಅಕ್ಟೋಬರ್ 09ರಿಂದ ಐದು ದಿನಗಳ ಕಾಲ ಬಾಲಾಜಿ ಇವೆಂಟ್ಸ್ ಆಯೋಜಿಸಿದ ಕೃಷಿ ಉತ್ಸವ ಹಾಗೂ ಕರಕುಶಲ ವಸ್ತು ಪ್ರದರ್ಶನ ಹಾಗೂಆಹಾರ ಮೇಳ ಕಾರ್ಯಕ್ರಮವನ್ನ ಶಾಸಕರ ಸೂಚನೆ ಮೇರೆಗೆ ರದ್ದುಗೊಳಿಸಲಾಗಿದೆ.ಕನಿಷ್ಠ ಮಾನವೀತೆಯನ್ನ ನೋಡದೆ,ಕೃಷಿ ಉತ್ಸವರದ್ದುಗೊಳಿಸಿದ್ದಾರೆ.ಉತ್ಸವಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದು.ನೂರಾರು ಜನ ಬಡವ್ಯಾಪಾರಿಗಳು. ಕೃಷಿಕರು ಉತ್ಸವದಲ್ಲಿ ಭಾಗವಹಿಸುವ ದೃಷ್ಠಿಯಿಂದ ತಂದಿದಂತಹ ವಸ್ತುಗಳ ನಷ್ಟವಾಗಿವೆ ಎಂದು ಕಣೀರಿಟ್ಟ ಘಟನೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಆವರಣದಲ್ಲಿ ನಡೆಯಿತು.

ಪತ್ರಿಕಾ ಘೋಷ್ಠಿಯಲ್ಲಿ ಬಾಲಾಜಿ ಇವೆಂಟ್ಸ್ ಮುಖ್ಯಸ್ಥ ನವೀನ್ ಮಾತನಾಡಿ ತಿಪಟೂರು ನಗರದಲ್ಲಿ ಬಾಲಾಜಿ ಇವೆಂಟ್ಸ್ ಸಹಯೋಗದಲ್ಲಿ ಕೃಷಿ ಉತ್ಸವ ನಡೆಸಲು ಶಾಸಕರೊಂದಿಗೆ ಚರ್ಚೆ ಮಾಡಿದ್ದು ಶಾಸಕರ ನೇತೃತ್ವದಲ್ಲಿಯೇಕೃಷಿ ಉತ್ಸವ ನಡೆಸಲಾಗುತ್ತಿದ್ದು,ಶಾಸಕರೇ ಅಧೀಕೃತವಾಗಿ ಪತ್ರ ನೀಡಿದ್ದಾರೆ.ಕಾರ್ಯಕ್ರಮ ಆಯೋಜನೆಗೆ ಸಂಬಂದಿಸಿದಂತೆ ಸುಮಾರು 70 ಸಾವಿರ ಹಣ ಕಟ್ಟಿ ರಸೀತಿ ಪಡೆದಿದ್ದೇವೆ. ವಿವಿಧ ಇಲಾಖೆಯಿಂದ ಅನುಮತಿ ಪಡೆದು. ರಾಜ್ಯದ ವಿವಿಧ ಭಾಗಗಳಿಂದ ಕೃಷಿ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಗಾರು ತಿಪಟೂರಿಗೆ ಆಗಮಿಸಿದ್ದಾರೆ.ವಿವಿಧ ಜಾತಿ ಹಣ್ಣು ತರಕಾರಿ ಸಸ್ಯಗಳು ಮಾರಾಟಕ್ಕಾಗಿ ಬಂದಿವೆ. ಆದರೆ ಶಾಸಕರು ಏಕಾಏಕಿಯಾಗಿ ಕಾರ್ಯಕ್ರಮ ರದ್ದುಗೊಳಿಸಿ ಎಂದು ತಮ್ಮ ಆಪ್ತ ಕಾರ್ಯದರ್ಶಿಯ ಮೂಲಕ ಹೇಳಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕಾರ್ಯಕ್ರಮ ಆಯೋಜನೆ ಮಾಡಿರುವ ನಮ್ಮ ಬದುಕು ಬೀದಿಗೆ ಬೀಳುವಂತ್ತಾಗಿದೆ

.ಹಲವಾರು ಬಗೆಯ ರೈತರ ಹಾಗೂ ಕುಶಲಕರ್ಮಿಗಳ ಉತ್ಪನ್ನಗಳು ಹಾಳಾಗುತ್ತಿವೆ.ಬಡವರ ಹೊಟ್ಟೆಯ ಮೇಲೆ ಹೊಡೆಯುವುದು ಸರಿಯಲ್ಲ.ನಮಗೆ ಆಗಿರುವ ಅನ್ಯಾಯ ಬೇರೆಯಾರಿಗೂ ಆಗಬಾರದು.ನಾವು ಸ್ಟಾಲ್ ಬಾಡಿಗೆ ಹೊರತುಪಡಿಸಿ ಯಾರಿಂದಲೂ ಹಣಪಡೆದಿಲ್ಲ.ಶಾಸಕರು ನಮ್ಮೊಂದಿಗೆ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಬಹುದಿತ್ತು.ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.ಇದರಿಂದ ನೂರಾರು ಕಾರ್ಮಿಕರು ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂದು ಕಣ್ಣೀರಿಟ್ಟರು.

ಕೆಲ ವ್ಯಾಪಾರಿಗಳಂತು ನಾವು ದೂರದ ಊರುಗಳಿಂದ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ.ವಾಪಾಸ್ ಹೋಗಲು ಹಣವಿಲ್ಲ. ವ್ಯಾಪಾರಕ್ಕೆ ತಂದ ಉತ್ಪನ್ನಗಳು ಹಾಳಾಗುತ್ತಿವೆ ಎಂದು ಅವಲತ್ತುಕೊಂಡ ಘಟನೆ ಪತ್ರಿಕಾ ಘೋಷ್ಠಿಯಲ್ಲಿ ನಡೆಯಿತು.ಇನ್ನೂ ನಗರಸಭೆ ಅಧಿಕಾರಿಗಳು ಪ್ರಚಾರಕ್ಕಾಗಿ ಹಣಕಟ್ಟಿಸಿಕೊಂಡು ನಮ್ಮ ಬ್ಯಾನರ್ ಕಿತ್ತುಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ










