ತಿಪಟೂರು:ಕರ್ನಾಟಕ ಸರ್ಕಾರದ ಯಶಸ್ವಿನಿ ಸಹಕಾರಿ ಆರೋಗ್ಯ ಟ್ರಸ್ಟ್ ನ ಟ್ರಸ್ಟಿಯಾಗಿ ತಿಪಟೂರು ಕುಮಾರ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ//ಶ್ರೀ ಧರ್ ರವರನ್ನ ಸರ್ಕಾರ ನೇಮಕ ಮಾಡಿರುವ ವಿಚಾರಕ್ಕೆ ಮುಖ್ಯಮಂತ್ರಿಗಳ ಬಳಿ ಕ್ಷಮೆಯಾಚನೆ ಮಾಡುವುದಾಗಿ ಶಾಸಕ ಕೆ.ಷಡಕ್ಷರಿ ತಿಳಿಸಿದರು
ನಗರದ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು ತಿಪಟೂರಿನ ಕುಮಾರ್ ಆಸ್ಪತ್ರೆಯ ಖ್ಯಾತ ವೈದ್ಯರು ಸಮಾಜ ಸೇವಕರು ಆದ ಡಾ//ಶ್ರೀ ಧರ್ ರವರ ಸಮಾಜಮುಖಿ ಕಾಳಜಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಗುರ್ತಿಸಿ.ಹಾಗೂ ಹೆಚ್ಚಿನ ಸೇವೆಗೆ ಅವಕಾಶವಾಗ ಬಹುದು ಎನ್ನುವ ದೃಷ್ಠಿಯಿಂದ ಯಶಸ್ವಿನಿ ಆರೋಗ್ಯ ರಕ್ಷಣಾ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಿದೆ,ಆದರೆ ಡಾ//ಶ್ರೀಧರ್ ಆರ್ ಆರ್ ಎಸ್ ಸಂಘಟನೆಯ ಕಾರ್ಯಕರ್ತ ಎನ್ನುವುದು ನನಗೆ ಗೊತ್ತಿರಲ್ಲಿಲ್ಲ.ಈ ವಿಚಾರದಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಬಳಿ ಕ್ಷಮೆಯಾಚನೆ ಮಾಡುತ್ತೇನೆ.
ಡಾ//ಶ್ರೀಧರ್ ಟ್ರಸ್ಟಿಯಾಗಿ ನೇಮಕ ವಿಚಾರದಲ್ಲಿ ನಮ್ಮ ಕಾಂಗ್ರೇಸ್ ಕಾರ್ಯಕರ್ತರಿಗೆ ಯಾವುದೇ ಅಸಮಾಧಾನವಿಲ್ಲ.ವಿರೋಧವಿಲ್ಲ.ಸಿ.ಬಿ.ಶಶಿಧರ್ ಎಂಬುವವರು ಮಾತ್ರ ವಿರೋಧ ಮಾಡಿದ್ದಾರೆ.ಡಾ//ಶ್ರೀಧರ್ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ.ತಾಲ್ಲೋಕಿನ ಯಾವುದೇ ಸಂಘ ಸಂಸ್ಥೆಗಳು ಮಾಡುವಂತಹ ಜನಪರವಾದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಜೊತೆಗೆ.ತಮ್ಮ ಶ್ರೀಸತ್ಯಕುಮಾರ್ ರಿಲೀಫ್ ಫೌಂಡೇಷನ್ ಮೂಲಕ ನಿರಂತರ ಉಚಿತ ಅನ್ನದಾಸೋಹ ಮಾಡುತ್ತಿದ್ದಾರೆ,ಅಲ್ಲದೆ.ಕೋವಿಡ್ ಕಾಲದಲ್ಲಿ ಯಾವುದೇ ಪಕ್ಷಬೇಧ ಮಾಡದೆ ಬಡರೋಗಿಗಳಿಗೆ ಸೇವೆ ಮಾಡುವ ಜೊತೆಗೆ,ಇಂದಿಗೂ ಸಹ ಸಾವಿರಾರು ರೋಗಿಗಳಿಗೆ ವೈದ್ಯಕೀಯ ಸೇವೆ ಮಾಡುತ್ತಿದ್ದು ಯಶಸ್ವಿನಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ಪರಿಣಾಮಕಾರಿಯಾಗಿ ದೊರೆಯಬೇಕು.ಹಾಗೂ ಅವರ ಅನುಭವ ಯೋಜನೆ ಯಶಸ್ವಿಗೆ ನೆರವಾಗಲಿ ಎನ್ನುವುದಷ್ಟೆ ನಮ್ಮ ಉದೇಶ, ಆದರೆ ಈ ವಿಚಾರದಿಂದ ಸರ್ಕಾರಕ್ಕಾಗಲಿ,ಮುಖ್ಯಮಂತ್ರಿಗಳಿಗಾಗಲಿ ಮುಜುಗರವಾಗಬಾರದು.ನಾನೇ ಖುದ್ದಾಗಿ ಮುಖ್ಯಮಂತ್ರಿಗಳ ಬಳಿ ತೆರಳಿ ಕ್ಷಮೆಯಾಚಿಸುತ್ತೇನೆ.ಘಟನೆ ಬಗ್ಗೆ ವಿವರಣೆ ನೀಡುವುದ್ದಾಗಿ ತಿಳಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ









