ತಿಪಟೂರು:ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಈರಲಗೆರೆ ಗ್ರಾಮದ ಶ್ರೀಕೃಷ್ಣ ಕ್ರಷರ್ ನಲ್ಲಿ ಜಲ್ಲಿತುಂಬಿದ ಲಾರಿ ಕಲ್ಲು ಕ್ರಷರ್ ಪ್ರಪಾತಕ್ಕೆ ಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದದೆ.
ಭದ್ರಾವತಿ ತಾಲ್ಲೋಕು ಗಾಂಧೀನಗರವಾಸಿ ಚನ್ನಕೇಶವ(48) ಮೃತದುರ್ದೈವಿ.
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತುಮಕೂರು ಅಡಿಷನಲ್ ಎಸ್ಪಿ ಗೋಪಾಲಕೃಷ್ಣ,ತಿಪಟೂರು ಅಡಿಷನಲ್ ಎಸ್ಪಿ ಯಶ್ ಕುಮಾರ್ ಶರ್ಮ.ಗ್ರಾಮಾಂತರ ವೃತ್ತನಿರೀಕ್ಷಕ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು.ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕ್ರಷರ್ ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನ ಗಾಳಿಗೆ ತೂರಿ ನಡೆಸಲಾಗುತ್ತಿದೆ,ಗಣಿ ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ನಿಯಮಗಳನ್ನ,ಪಾಲನೆ ಮಾಡುತ್ತಿಲ್ಲ, ಲಾರಿಗಳು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಸುಮಾರು 80ಅಡಿ ಪ್ರಪಾತವಿದ್ದರೂ ,ಗಣಿ ಕಂಪನಿ ತಡೆಗೋಡೆ ನಿರ್ಮಾಣ ಮಾಡದೆ ನಿರ್ಲಕ್ಷ್ಯವಹಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಮೃತ ಚನ್ನಕೇಶವ ಸಂಬಂದಿಕರು ಆರೋಪಿಸಿದ್ದಾರೆ.

ಕೃಷ್ಣಪ್ಪ ಕ್ರಷರ್ ಸದಾ ಒಂದಿಲೊಂದು ವಿವಾದದಲ್ಲಿಯೇ ನಡೆಯುತ್ತಿದ್ದು,ಶ್ರೀ ಕೃಷ್ಣ ಕ್ರಷರ್ ವಿರುದ್ದ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶ್ರೀ ಕೃಷ್ಣ ಕ್ರಷರ್ ಬಂಡೆ ಬ್ಲಾಸ್ಟ್ ಮಾಡಲು ಭಾರೀ ಪ್ರಮಾಣದಲ್ಲಿ ಸ್ಪೋಟಕ ಬಳಕೆ ಮಾಡಿ ಸ್ಪೋಟಿಸುತ್ತಿದ್ದು,ಸ್ಪೋಟಕದ ತೀವ್ರತೆಗೆ ಅಕ್ಕಪಕ್ಕದ ಜಮೀನುಗಳಲ್ಲಿ ಬೋರ್ವೆಲ್ ಗಳು ಬತ್ತಿಹೋಗಿವೆ,ಗೋಕಟ್ಟೆಗಳು ಬಿರುಕು ಬಿಟ್ಟಿದ್ದು ಜನಜಾನುವಾರುಗಳ ಕುಡಿಯುವ ನೀರು ಕಲೂಷಿತವಾಗಿದೆ.ರೈತರು ಬೆಳೆದ ರೇಷ್ಮೆ ,ಬಾಳೆ,ಸೇರಿದಂತೆ ರೈತರ ಬೆಳೆಗಳು ಗಣಿಧೂಳಿನಿಂದ ಹಾಳಾಗಿದೆ,ಎಂದು ತಿಪಟೂರು ತಹಸೀಲ್ದಾರ್ ಗೆ ದೂರು ನೀಡಿ ಪ್ರತಿಭಟನೆ ನಡೆಸಲಾಗಿತ್ತು,ಆದರೂ ಗಣಿ ಮಾಲೀಕರು ಕಾರ್ಮಿಕರ ಸುರಕ್ಷತೆಗೆ ಸೂಕ್ತ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಬಡಕಾರ್ಮಿಕ ಬಲಿಯಾಗಿದ್ದಾನೆ.ಗಣಿಸ್ಪೋಟದಿಂದ ಪ್ರಕೃತಿ ಸಂಪತ್ತು ಹಾಳಾಗುತ್ತುದ್ದು ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ







