ತಿಪಟೂರು:ಕಲ್ಪತರು ನಾಡಿನ ಹೆಮ್ಮಯ ನಾಡಹಬ್ಬ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ಮುಕ್ತಾಯಗೊಂಡಿದೆ.ರಾಜ್ಯದ ಪ್ರಸಿದ್ದ ಉತ್ಸವಗಳಲ್ಲಿ ಒಂದಾದ ಶ್ರೀ ಸತ್ಯಗಣಪತಿ ಜಾತ್ರೆ ನಮ್ಮ ಕಲ್ಪತರು ನಾಡಿನ ಹೆಮ್ಮಯೂ ಹೌದು. ಶ್ರೀ ಸತ್ಯಗಣಪತಿ ಸೇವಾ ಸಮಿತಿ ಗಣೇಶೋತ್ಸವದ ಯಶಸ್ವಿಗೆ ಹಗಲಿರಳು ಶ್ರಮಿಸಿದ್ದು. ಟ್ರಸ್ಟ್ ನಷ್ಟೆ ಶ್ರಮವಹಿಸಿದ್ದು ಮಾತ್ರ ಪೋಲಿಸ್ ಇಲಾಖೆ. ಬೆಸ್ಕಾಂ ಇಲಾಖೆ ನಗರಸಭೆ.ನಗರಸಭೆ ಪೌರಕಾರ್ಮಿಕರ ಸೇವಾಕಾರ್ಯ ಮಾತ್ರ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದೆ.

ಗಣೇಶೋತ್ಸವ ಆರಂಭದಲ್ಲಿ ಕಲ್ಯಾಣಿ ಸ್ವಚ್ಚತೆಯಿಂದ ಮೊದಲ್ಗೊಂಡು. ಗಣೇಶೋತ್ಸವ ಸಂಚರಿಸುವ ಮಾರ್ಗದ ಸ್ವಚ್ಚತೆ.ಬಿ.ಹೆಚ್ ರಸ್ತೆ ಸೌದರ್ಯಕರಣ.ಸ್ವಚ್ಚಗೊಳಿಸುವಮೂಲಕ ಗಣೇಶೋತ್ಸವಕ್ಕೆ ಅಣಿಗೊಳಿಸಿದ ಸಿಬ್ಬಂದಿ ಗಣೇಶೋತ್ಸವದ ಅನ್ನಸಂತರ್ಪಣೆಯಲ್ಲಿ ಸ್ವಚ್ಚತೆ ನಿರ್ವಹಿಸಿ,ಗಣೇಶ ಉತ್ಸವ ಸಾಗುವ ಬಿ.ಹೆಚ್ ರಸ್ತೆಯಲ್ಲಿ ತಾತ್ಕಾಲಿಕ ಕಸದ ಡ್ರಮ್ ಅಳವಡಿಸಿ ಸಾರ್ವಜನಿಕರು ಉಪಯೋಗಿಸಿದ ವಸ್ತುಗಳನ್ನ ಕಸದ ಡ್ರಮ್ ಗಳಲ್ಲಿ ಹಾಕುವಂತೆ ವ್ಯವಸ್ಥೆ ಮಾಡಿದಲ್ಲದೆ. ಉತ್ಸವ ಸಾಗುವ ಮಾರ್ಗದಲ್ಲಿ ಪ್ಲಾಸ್ಟಿಕ್ ಬ್ಯಾಂಗ್ ಗಳನ್ನ ಅಳವಡಿಸಿ ಉತ್ಸವದಲ್ಲಿ ಉಪಯೋಗಿಸಿದ ನೀರಿನ ಗ್ಲಾಸ್ ಗಳು.ನೀರಿನ ಬಾಟಲ್ ಗಳು. ಭಕ್ತರು ತಿಂದು ಬಿಸಾಡಿದ ಆಹಾರದ ಪ್ಲೇಟ್ ಗಳು ಹಾಕಲು ವ್ಯವಸ್ಥೆ ಮಾಡಲಾಗಿತ್ತು.

ಉತ್ಸವದ ಹಿಂದೆ ಸಾಗುತ್ತಿದ್ದ ಸಿಬ್ಬಂದಿ ತಕ್ಷಣ.ಭಕ್ತರು ಬಿಸಾಡಿದ ಪ್ರಸಾದದ ತಟ್ಟೆ ಲೋಟಗಳನ್ನ ಹಾಗೂ ಉಳಿದ ಪ್ರಸಾದ ಕಾಲಿನಿಂದ ತುಳಿಯದಂತೆ ಸಂಗ್ರಹಿಸಿ ಕಸದ ಬ್ಯಾಗ್ ಗಳಿಗೆ ತುಂಬಿ ವಿಲೇವಾರಿ ಮಾಡುತ್ತಿದ್ದ ಪೌರ ಕಾರ್ಮಿಕ ಕೆಲಸ ಕಟ್ಟು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಸಾಮಾನ್ಯವಾಗಿತ್ತು.ನಗರಸಭೆ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಎಲ್ಲಾ ಪೌರಕಾರ್ಮಿಕರನ್ನ ಒಂದೆಡೆ ಸೇರಿಸಿ ,ಎರಡು ಪಾಳಿಯಲ್ಲಿ ನೇಮಿಸುವ ಜೊತೆಗೆ ನಾನೇ ಮುಂದೆ ನಿಂತು ಪೌರಕಾರ್ಮಿಕರನ್ನ ಹುರಿದುಂಬಿಸುತ್ತಾ ನಗರದಾದ್ಯಂತ ಯಾವುದೇ ಅನೈರ್ಮಲ್ಯ ಉಂಟಾಗದಂತೆ ಕೆಲಸ ನಿರ್ವಹಿಸಿ.ಗಣೇಶೋತ್ಸವ ಹಾಗೂ ಕಲ್ಪೋತ್ಸವದ ಯಶಸ್ಸಿನಲ್ಲಿ ಪ್ರಶಂಶಸೆಗೆ ಪಾತ್ರರಾಗಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ







