ತಿಪಟೂರು:ವಿಧಾನಸಭಾ ವ್ಯಪ್ತಿಯಲ್ಲಿ ಒಟ್ಟು 3890ಜನ ಪದವೀಧರ ಮತದಾರರು ನೋಂದಣಿಯಾಗಿದ್ದಾರೆ.2132 ಪುರುಷ ಹಾಗೂ 1758 ಮಹಿಳಾ ಪದವೀಧರ ಮತದಾರರು ನೊಂದಣಿತಾಗಿದ್ದು 16ಅರ್ಜಿಗಳು ಅನೂರ್ಜಿತವಾಗಿವೆ ಎಂದು ತಹಸೀಲ್ದಾರ್ ಮೋಹನ್ ಕುಮಾರ್ ತಿಳಿಸಿದರು
ತಾಲ್ಲೋಕು ಆಡಳಿತ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಧಾನ ಪರೀಷತ್ ಆಗ್ನೇಯ ಪದವೀಧರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಕುರಿತು ಸಭೆ ನಡೆಸಿ ಮಾತನಾಡಿದ ಅವರು ತಿಪಟೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ 3951 ಅರ್ಜಿಗಳು ಸಲ್ಲಿಯಾಗಿದು.16ಅರ್ಜಿ ಅನೂರ್ಜಿತಗೊಂಡು 3890ಅರ್ಜಿಗಳು ಪುರಸ್ಕೃತಗೊಂಡಿವೆ ಎಂದು ತಿಳಿಸಿದರು.
ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಭಾರತ ಚುನಾವಣಾ ಆಯೋಗ ಪಕಟಿಸಿರುವ ವೇಳಾಪಟ್ಟಿಯ ಅನುಸಾರ ದಿನಾಂಕ : 30.09.2025 ರಿಂದ ದಿನಾಂಕ : 06.11.2025 ರವರೆಗೆ ಹಾಗೂ ನಂತರದಲ್ಲಿ ಹಕ್ಕು , & ಆಕ್ಷೇಪಣಾ ಅವಧಿ ದಿನಾಂಕ ; 25.11.2025 ರಿಂದ 10.12.2025 ರವರೆಗೆ ಸಹ ನಮೂನೆ -18 ರಲ್ಲಿ ಹಕ್ಕುಗಳನ್ನು ಹಾಗೂ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದ್ದು , ಚುನಾವಣಾ ಆಯೋಗದ ನಿರ್ದೇಶನಗಳಿಗೆ ಅನುಗುಣವಾಗಿ ಕರ್ನಾಟಕ ವಿಧಾನ ಪರಿಷತ್ತಿನ ಆತ್ಮೀಯ ಪದವೀಧರರ ಕ್ಷೇತ್ರದ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿರುತ್ತದೆ .

ತಿಪಟೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಪರಿಷತ್ತಿನ, ಪದವೀಧರ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 3335 ಮತದಾರರು ಇದ್ದು , ನಂತರದಲ್ಲಿ ಹಕ್ಕು , & ಆಕ್ಷೇಪಣಾ ಅವಧಿಯಲ್ಲಿ ಒಟ್ಟು 562 ಅರ್ಜಿಗಳನ್ನು ಅಂಗೀಕರಿಸಲಾಗಿರುತ್ತದೆ ಹಾಗೂ 07 ನಮೂದುಗಳನ್ನು ಆಕ್ಷೇಪಣೆಯಕಾರಣತೆಗೆದು ಹಾಕಲಾಗಿರುತ್ತದೆ . ಅಂತಿಮವಾಗಿ ತಿಪಟೂರು ತಾಲ್ಲೂಕಿನಲ್ಲಿ ಒಟ್ಟು 3890 ( ಪುರುಷರು -2312 , ಮಹಿಳೆಯರು -1758 ) ಮತದಾರರು ಇರುತ್ತಾರೆ .
ಸದರಿ ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ : 30.12.2025 ರಂದು ಸಾರ್ವಜನಿಕವಾಗಿ ತಾಲ್ಲೋಕು ಕಚೇರಿ ಹಾಗೂ ನಗರಸಭೆ ಕಛೇರಿಯಲ್ಲಿ ಪ್ರಕಟಿಸಲಾಗಿದ್ದು ಕಛೇರಿ ವೇಳೆಯಲ್ಲಿ ಪರಿಶೀಲನೆಗಾಗಿ ದೊರೆಯುತ್ತದೆಂದು ಈ ಮೂಲಕ ತಿಳಿಯಪಡಿಸಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್ .ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ





