Spread the love

ತಿಪಟೂರು :ಪಂಚಪೀಠಗಳ ಸಂಸ್ಥಾಪಕರಾದ ರೇಣುಕಾಚಾರ್ಯರು ಮಾನವ ಕಲ್ಯಾಣಕ್ಕೆ ಶ್ರಮಿಸಿದ ಮಹಾಗುರುಗಳು ಅವರ ತತ್ವಗಳನ್ನ ಸಮಾಜ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.


ನಗರದ ತಾಲ್ಲೋಕು ಆಡಳಿತ ಭವನದಲ್ಲಿ ಆಯೋಜಿಸಿದ ಜಗದ್ಗುರು ರೇಣುಕಾಚಾರ್ಯರ ಜಯಂತಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕರು ಮಾತನಾಡಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾನೀಯರ ಆದರ್ಶನಗಳು ಮುಂದಿನ ಪೀಳಿಗೆಗೆ ತಿಳಿಸಬೇಕು. ಎಲ್ಲಾ ಸಮಾಜಗಳ ಮಹಾನೀಯರಿಗೆ ಗೌರವಿಸಬೇಕು ಎನ್ನುವ ದೃಷ್ಠಿಯಿಂದ ಸರ್ಕಾರ ಜಯಂತಿಗಳನ್ನ ಆಚರಿಸುತ್ತಿದೆ. ವೀರಶೈವ ಸಮಾಜದ ಬಂಧುಗಳು ರೇಣುಕಾಚಾರ್ಯರ ತತ್ವ ವಿಶ್ವಕಲ್ಯಾಣದ ಚಿಂತನೆ ಅಳವಡಿಸಿಕೊಳ್ಳಬೇಕು. ಎಂದು ತಿಳಿಸಿದರು.


ವೀರಶೈವ ಸಮಾಜದ ಮುಖಂಡ ಬಸವರಾಜ ಶಾಸ್ತ್ರಿ ಮಾತನಾಡಿ ರೇಣುಕಾಚಾರ್ಯರು ಅಗಸ್ತ್ಯ ಮೂನಿಗಳ ಮೂಲಕ ವೀರಶೈವ ಸಿದ್ದಾಂತ ಶಿಖಾಮಣಿ,ಬೋಧನೆ ಮಾಡಿ ಶಿಷ್ಯ ಸಂಕುಲವನ್ನ ಉದ್ದಾರ ಮಾಡಿದ್ದಾರೆ.ದೇಶದಾದ್ಯಂತ ಪಂಚಪೀಠಗಳನ್ನ ಸ್ಥಾಪನೆ ಮಾಡಿ ಧರ್ಮಭೋದನೆ ಜೊತೆಗೆ ಜಗತ್ತಿನ ಕಲ್ಯಾಣಕ್ಕೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಕಂದಾಯ ತನಿಖಾಧಿಕಾರಿ ರಂಗಪ್ಪ ಸಾಕ್ಷಾತ್ ದೇವರಾದ ರೇಣುಕಾಚಾರ್ಯರು ಪಂಚಪೀಠಗಳ ಸ್ಥಾಪನೆ ಮಾಡಿ, ತತ್ವ ಪ್ರಚಾರದ ಮೂಲಕ ಸಮಾಜದ ಉದ್ದಾರ ಮಾಡಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್.ವೀರಶೈವ ಸಮಾಜದ ಮುಖಂಡರಾದ ನಟರಾಜ್ .ಗಂಡಸಿ ಸುರೇಶ್.ಬಿಸ್ಲೇಹಳ್ಳಿ ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!