ತಿಪಟೂರು : ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳು ಬೆಳವಣಿಗೆ ಹೊಂದಬೇಕಾದರೆ ಪ್ರೋತ್ಸಾಹ ನೀಡುವ ಆಸಕ್ತ ಮನಸ್ಸುಗಳು ಮುಖ್ಯ ಎಂದು ಖ್ಯಾತ ಸಾಹಿತಿ ಹಾಗೂ ಕವಿ ಬಿ.ಆರ್ ಲಕ್ಷ್ಮಣ್ ರಾವ್ ತಿಳಿಸಿದರು.

ನಗರದ ಹೊರವಲಯದ ನಂದಪಾರಂ ಹೌಸ್ ಸಭಾಂಗಣದಲ್ಲಿ ಆಯೋಜಿಸಿದ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಬೆಳ್ಳಿ ಹಬ್ಬದ ಆಂಗವಾಗಿ ಗೌರವ ಸದಸ್ಯತ್ವ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿ ಕಲೆ ಸಾಹಿತ್ಯ ಸಾಮಾಜಿಕ ಕ್ಷೇತ್ರದ ಆಸಕ್ತಿ ಉಳ್ಳ ಮನಸ್ಸುಗಳಿಂದ ಪ್ರೋತ್ಸಾಹ ಸಾಧ್ಯವಾಗುತ್ತದೆ. ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಕಲೆ ಸಾಹಿತ್ಯ ಸೇವೆಯ ಮೂಲಕ ಇಪ್ಪತ್ತೈದು ವಸಂತ ಪೂರೈಸಿರುವುದು ಶ್ಲಾಘನೀಯ.ನಾಡಿನ ಹೆಸರಾಂತ ಕವಿಗಳು ಸಾಹಿತಿಗಳನ್ನ ಕಲ್ಪತರು ನಾಡಿಗೆ ಕರೆಸಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿ ಉತ್ತಮ ಸಾಹಿತ್ಯ ವಿಚಾರಧಾರೆಗಳನ್ನ ನೀಡುತ್ತಿರುವ ಪರಂಪರೆ ಮುಂದುವರೆಸುವ ಕೆಲಸ ಮಾಡಬೇಕು.ಬೆಳ್ಳಿ ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಸಂಘಸಂಸ್ಥೆಗಳ ಹುಟ್ಟಿಹಾಕುವುದಕ್ಕಿಂತ ಅವುಗಳನ್ನ ಸಾಮಾಜಿಕವಾಗಿ ಬೆಳೆಸುವ ಕೆಲಸ ಮಾಡುವುದು ಮುಖ್ಯ.ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ 25 ವರ್ಷಗಳ ಹಿಂದೆ, ಜ್ಯೋತಿಬೆಳಗಿಸುವಾಗ ಉತ್ತವಾದ ಕೆಲಸಗಳ ಮೂಲಕ ಹೆಸರುಗಳಿಸಲಿ.ಕಲೆ ಸಾಹಿತ್ಯ ಸಾಂಸ್ಕೃತಿಕ ಸಾಮಾಜಿಕ ಸೇವೆ ಮಾಡಲಿದೆ ಎಂದು ಆಶಯ ವ್ಯಕ್ತಪಡಿಸಿದ್ದೆ. ಅದರಂತೆ ಸಂಘ ಉತ್ತಮದಾರಿಯಲ್ಲಿ ಸಾಗಿ ಬೆಳ್ಳಿ ಹಬ್ಬ ಆಚರಿಸುತ್ತಿದೆ.ಇನ್ನೂ ಹೆಚ್ಚಿನ ಸಾಮಾಜಿಕ ಸೇವೆ ಮಾಡಲಿ ಎಂದು ತಿಳಿಸಿದರು.
ಖ್ಯಾತ ಪತ್ರಕರ್ತರಾದ ವೆಂಕಟನಾರಾಯಣ್ ಮಾತನಾಡಿ ಯುವ ಜನರಲ್ಲಿ ಸಾಹಿತ್ಯ ಆಸಕ್ತಿ ಕಡಿಮೆಯಾಗುತ್ತಿದೆ,ಕಲೆ ಸಾಹಿತ್ಯ ಗೀಳು ಹೆಚ್ಚಿವ ಕೆಲಸವನ್ನ ಸಂಘಸಂಸ್ಥೆಗಳು ಮಾಡಬೇಕು,ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳ್ಳಿ ಹಬ್ಬದ ಅಂಗವಾಗಿ ಗೌರವ ಸದಸ್ಯತ್ವ ನೀಡುವ ವಿನೂತನ ಕಾರ್ಯಕ್ರಮ ಸ್ವಾಗತಾರ್ಹ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್.ಗ್ರೇಡ್ 2ತಹಸೀಲ್ದಾರ್.ಜಗನ್ನಾಥ್.ಸಂಘದ ಅಧ್ಯಕ್ಷರಾದ ನಾಗರಾಜ್ ಲಾಯರ್ ಲಿಂಗಪ್ಪ.ಸಂಸ್ಥಾಪಕರಾದ ಎನ್ .ಬಾನುಪ್ರಶಾಂತ್,ಖ್ಯಾತ ಮಕ್ಕಳ ಸಾಹಿತಿ ನಾಗರಾಜ ಶೆಟ್ಟಿ ಪ್ರಾಂಶುಪಾಲರಾದ ಕೆ.ಎಂ ರೇಣುಕಯ್ಯ.ಉದಯರವಿ ಬ್ಯಾಂಕ್ ಅಧ್ಯಕ್ಷ ಕೆ.ಎಂ ರಾಜಣ್ಣ ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





