ತಿಪಟೂರು : – ಆದಿ ಜಾಂಬವ ಪರಿಶಿಷ್ಟ ಜಾತಿ ವಿವಿದೋದ್ದೇಶ ಸಹಕಾರ ಸಂಘ ತಿಪಟೂರು ವತಿಯಿಂದ ಆದಿ ಜಾಂಬವ ( ಮಾದಿಗ ) ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ
.
ತಿಪಟೂರು ಮತ್ತು ತುರುವೇಕೆರೆ ತಾಲೂಕಿನಲ್ಲಿ ವಾಸವಾಗಿರುವ ಆದಿ ಜಾಂಬವ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದು 2024 -2025 ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಯಲ್ಲಿ ಶೇ .80 ಕಿಂತ ಹೆಚ್ಚಿನ ಅಂಕ
ಗಳಿಸಿರುವ ಅಭ್ಯರ್ಥಿಗಳು ಸೆ .10 ಒಳಗೆ ಸಂಘದ ಕಚೇರಿ ಶ್ರೀ ಆದಿ ಜಾಂಬವ ಪರಿಶಿಷ್ಟ ಜಾತಿ ವಿವಿದೋದ್ದೇಶ ಸಹಕಾರ ಸಂಘದ ಕಚೇರಿ ‘ ಶ್ರೀ ಕಾಲಭೈರವೇಶ್ವರ ನಿಲಯ ಎರಡನೇ ಮಹಡಿ ಐದನೇ ಮುಖ್ಯರಸ್ತೆ ಅಮರವತಿ ರೆಸಿಡೆನ್ಸಿ ಹಿಂಭಾಗ ವಿನಾಯಕ ನಗರ ತಿಪಟೂರು ” , ಇಲ್ಲಿಗೆ ಅಂಕಪಟ್ಟಿಗಳ ಜೆರಾಕ್ಸ್ ಜಾತಿ ಪ್ರಮಾಣ ಪತ್ರ ಹಾಗೂ ಎರಡು ಇತ್ತೀಚಿನ ಭಾವಚಿತ್ರ ಗಳೊಂದಿಗೆ ಅರ್ಜಿ ಸಲ್ಲಿಸಬೇಕು . ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ನಂಬರ್. 9972333942 , 8050963585 ಸಂಪರ್ಕಿಸಲು ಕೋರಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ







