ತಿಪಟೂರು:ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಜಿ. ನಾರಾಯಣ್ ಮತ್ತೆ ತಿಪಟೂರು ತಾಲ್ಲೋಕಿಗೆ ಎಂಟ್ರಿಯಾಗಿದ್ದು, ಈ ಭಾರಿ ಜಿಲ್ಲಾಪಂಚಾಯ್ತಿ ಚುನಾವಣೆ ನಡೆದರೆ ತಿಪಟೂರು ತಾಲ್ಲೋಕಿನ 5 ಜಿಲ್ಲಾಪಂಚಾಯ್ತಿ ಕ್ಷೇತ್ರ ಹಾಗೂ 17ತಾಲ್ಲೋಕು ಪಂಚಾಯ್ತಿ ಕ್ಷೇತ್ರಗಳಿಗೆ ನನ್ನ ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದು.ತಾಲ್ಲೋಕು ಪಂಚಾಯ್ತಿ ಗದ್ದುಗೆಯನ್ನ ನಮ್ಮ ಬೆಂಬಲಿಗರೆ ಹಿಡಿಯುತ್ತಾರೆ ಎಂದು ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಜಿ.ನಾರಾಯಣ್ ತಿಳಿಸಿದರು.

ಆಯುಧ ಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಹತ್ಯಾಳು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ನಾರಾಯಣ್ ನಾನು ಒಂದು ವರ್ಷದಿಂದ ವಯುಕ್ತಿಕ ಸಮಸ್ಯೆಯ ಕಾರಣದಿಂದ ತಾಲ್ಲೋಕಿಗೆ ಬರಲು ಸಾಧ್ಯವಾಗಿಲ್ಲ,ತಾಲ್ಲೋಕಿನ ಜನರ ಅಭಿಮಾನ ಪ್ರೀತಿಯ ಋಣತೀರಿಸಲು ಸಾಧ್ಯವಾಗಿಲ್ಲ,ತಾಲ್ಲೋಕಿನ ಜನರ ಸೇವೆ ಮಾಡುವ ಉದೇಶದಿಂದ ಜಿಲ್ಲಾಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು,ತಿಪಟೂರು ತಾಲ್ಲೋಕಿನ 5ಜಿಲ್ಲಾಪಂಚಾಯ್ತಿ ಕ್ಷೇತ್ರಗಳು ಹಾಗೂ 17ತಾಲ್ಲೋಕು ಪಂಚಾಯ್ತಿ ಕ್ಷೇತ್ರಗಳಿಗೆ ಪಕ್ಷೇತರವಾಗಿ ಅಭ್ಯಾರ್ಥಿಗಳು ಸ್ಪರ್ಧಿಸುತ್ತಿದ್ದು,ತಾಲ್ಲೋಕು ಪಂಚಾಯ್ತಿಯಲ್ಲಿ ಕನಿಷ್ಠ 12 ರಿಂದ 13 ಜನ ಸದಸ್ಯರು 3ಜನ ಜಿಲ್ಲಾಪಂಚಾಯ್ತಿ ಸದಸ್ಯರು ಗೆಲ್ಲುವ ನಿರೀಕ್ಷೆ ಇದ್ದು,ತಾಲ್ಲೋಕುಪಂಚಾಯ್ತಿ ಅಧಿಕಾರದ ಗದ್ದುಗೆ ಪಕ್ಷೇತರವಾಗಿ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ತಾಲ್ಲೋಕಿನಲ್ಲಿ ಬಿಜೆಪಿ ಕಾಂಗ್ರೇಸ್ ನಾಯಕರ ಹೊಂದಾಣಿಕೆ ರಾಜಕಾರಣದಿಂದಾಗಿ ತಾಲ್ಲೋಕಿನ ಅಭಿವೃದ್ದಿ ಕುಂಟಿತವಾಗಿದೆ.ಅಧಿಕಾರ ಕೆಲವೇ ಕೆಲವು ಜನರ ಸ್ವತ್ತಲ್ಲ,ಜಿ.ನಾರಾಯಣ್ ಜನಾನುರಾಗಿಯಾಗಿದ್ದು.ತಾಲ್ಲೋಕಿನ ಜನರ ಸೇವೆ ಮಾಡಿ ಜನಮನ್ನಣೆಗಳಿಸಿದ್ದಾರೆ,ಅವರಿಗೆ ನಾವೆಲ್ಲರೂ ಒಗ್ಗಟಿನಿಂದ ಬೆಂಬಲ ನೀಡುತ್ತೇವೆ.ಎಂದು ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೇಣುಕ ಪ್ರಸಾದ್. ಕಾರ್ಯದರ್ಶಿ ಮಹೇಶ್ ರಾಜ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ









